Viral Video: ಕೋತಿ ಮತ್ತು ಕುರಿಮರಿ ನಡುವೆ ಅವಿನಾಭಾವ ಸಂಬಂಧ; ನೆಟ್ಟಿಗರ ಹೃದಯ ಸ್ಪರ್ಶಿಸಿದ ಮುದ್ದಾದ ಜೋಡಿ

ಕಾಬ್ರಾ ಅವರು ಹೇಳಿದಂತೆ, ಕೋತಿಯು ತನ್ನ ತಾಯಿಯನ್ನು ಕಳೆದುಕೊಂಡಿದೆ ಮತ್ತು ಈಗ ಹೊಸ ಸ್ನೇಹಿತನ ಜೊತೆಗೆ ಆರಾಮದಾಯಕ ಜೀವನವನ್ನು ಕಂಡುಕೊಳ್ಳುತ್ತಿದೆ.

Viral Video: ಕೋತಿ ಮತ್ತು ಕುರಿಮರಿ ನಡುವೆ ಅವಿನಾಭಾವ ಸಂಬಂಧ; ನೆಟ್ಟಿಗರ ಹೃದಯ ಸ್ಪರ್ಶಿಸಿದ ಮುದ್ದಾದ ಜೋಡಿ
ಕೋತಿ ಮತ್ತು ಕುರಿಮರಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Apr 02, 2022 | 8:48 AM

ನಮ್ಮಲ್ಲಿ ಹಲವರು ಮುದ್ದಾದ ಪ್ರಾಣಿಗಳ (Cute Animals) ವಿಡಿಯೋಗಳನ್ನು ಆಗಾಗ ನೋಡಿ ಆನಂದಿಸುತ್ತೇವೆ. ಇನ್ನೂ ಕೆಲವರಿಗೆ ಇದು ಸ್ಟ್ರೆಸ್ ಬಸ್ಟರ್ ಇದ್ದಂತೆ. ಮತ್ತೆ ಕೆಲವರಿಗೆ ಇದು ಕೇವಲ ಮನರಂಜನೆಯಾಗಿದೆ. ನೀವೂ ಪ್ರಾಣಿ ಪ್ರಿಯರಾಗಿದ್ದರೆ, ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ವೀಡಿಯೊ ನಿಮ್ಮ ಹೃದಯವನ್ನು ಸ್ಪರ್ಶಿಸುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಯಾರೋ ಒಬ್ಬರು ಕುರಿಮರಿ ಮತ್ತು ಕೋತಿಗೆ ಹಣ್ಣು ಹಂಪಲು ನೀಡುತ್ತಿರುವುದನ್ನು ಕಾಣಬಹುದು. ಆದರೆ ಈ ವಿಡಿಯೋದಲ್ಲಿ ಕೋತಿ ಮತ್ತು ಕುರಿಮರಿಯ ಅವಿನಾಭಾವ ಸಂಬಂಧ ವಿಶೇಷವಾಗಿದೆ. ಇಬ್ಬರೂ ಹಣ್ಣು ತಿನ್ನುವುದನ್ನು ಆನಂದಿಸುತ್ತಾರೆ. ಕುರಿಮರಿಯೇ ಮಂಗನ ತಾಯಿ ಎನ್ನುವಷ್ಟು ಅವರು ಪರಸ್ಪರ ಜೊತೆಗಿರುತ್ತಾರೆ. ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕೋತಿ ತನ್ನ ತಾಯಿಯನ್ನು ಕಳೆದುಕೊಂಡಿದ್ದು, ಸದ್ಯ ಅದು ಹೊಸ ಸಂಗಾತಿಯನ್ನು ಕಂಡುಕೊಂಡಿದೆ. ಈಗ ಅವರಿಬ್ಬರದ್ದು ಅವಿನಾಭಾವ ಸಂಬಂಧವಾಗಿದೆ. ಪ್ರಕೃತಿ ತಾಯಿಯನ್ನು ನಂಬಲ ಸಾಧ್ಯ ಎಂದು ಅವರು ಬರೆದುಕೊಂಡಿದ್ದಾರೆ.

ಕಾಬ್ರಾ ಅವರು ಹೇಳಿದಂತೆ, ಕೋತಿಯು ತನ್ನ ತಾಯಿಯನ್ನು ಕಳೆದುಕೊಂಡಿದೆ ಮತ್ತು ಈಗ ಹೊಸ ಸ್ನೇಹಿತನ ಜೊತೆಗೆ ಆರಾಮದಾಯಕ ಜೀವನವನ್ನು ಕಂಡುಕೊಳ್ಳುತ್ತಿದೆ. ಈ ಎರಡು ಪ್ರಾಣಿಗಳ ನಡುವಿನ ಬಂಧವನ್ನು ನೋಡುವುದು ನಿಜವಾಗಿಯೂ ಅದ್ಭುತವಾಗಿದೆ. ತಾಯಿ ಪ್ರಕೃತಿಯ ಈ ಸುಂದರ ಭಾಗವನ್ನು ನೋಡಿ ನೆಟಿಗರು ಆಶ್ಚರ್ಯಚಕಿತರಾಗಿದ್ದಾರೆ. ವಿಡಿಯೋ ಇಂಟರ್ನೆಟ್‌ನಾದ್ಯಂತ ಜನರಿಂದ ಸಾಕಷ್ಟು ಮೆಚ್ಚುಗೆಯನ್ನು ಪಡೆಯುತ್ತಿದೆ. 6,341 ಕ್ಕೂ ಹೆಚ್ಚು ಟ್ವಿಟರ್ ಬಳಕೆದಾರರು ಈ ಮುದ್ದಾದ ಜೋಡಿ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ ಮತ್ತು 988 ಕ್ಕೂ ಹೆಚ್ಚು ಜನರು ಅದನ್ನು ಮರುಟ್ವೀಟ್ ಮಾಡಿದ್ದಾರೆ.

ಎರಡು ಪ್ರಾಣಿಗಳ ನಡುವಿನ ಬಾಂಧವ್ಯಕ್ಕಾಗಿ ಎಲ್ಲಾ ಹೊಗಳಿಕೆಯ ಸುರಿಮಳೆ ಸುರಿಯುತ್ತಿದೆ. ಟ್ವಿಟರ್ ಬಳಕೆದಾರರು ನೀವು ಸ್ವೀಕರಿಸಬಹುದಾದ ಅತ್ಯಮೂಲ್ಯ ಉಡುಗೊರೆ ಪ್ರಾಮಾಣಿಕ ಸ್ನೇಹ ಒಂದೇ ಎಂದು ಬರೆದಿದ್ದಾರೆ. ಇನ್ನೊಬ್ಬರು ಇದು ಹೃದಯ ಸ್ಪರ್ಶಿ ವಿಡಿಯೋ ಎಂದಿದ್ದಾರೆ. ಪ್ರಕೃತಿಯು ಯಾರನ್ನು ಬೇಕಾದರು ಸಂಪರ್ಕಿಸುವ ಶಕ್ತಿಯನ್ನು ಹೊಂದಿದೆ ಎಂದು ಮತ್ತೊಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:

Shocking Video: ಬಾತ್​ರೂಂನೊಳಗೆ ನುಗ್ಗಿ ಟಾಯ್ಲೆಟ್ ಪೇಪರ್ ಸುತ್ತಿಕೊಂಡ ಕಾಳಿಂಗ ಸರ್ಪ; ಶಾಕಿಂಗ್ ವಿಡಿಯೋ ಇಲ್ಲಿದೆ

Viral Video: ಹೊಲದಲ್ಲಿ ಕರಡಿ ವೇಷ ಹಾಕಿ ಓಡಾಡಿದರೆ ತಿಂಗಳಿಗೆ 15,000 ರೂ. ಸಂಬಳ!

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ