ಗೂಗಲ್ ಮ್ಯಾಪ್‌ನಲ್ಲಿ ಪತ್ತೆಯಾದ ದೈತ್ಯ ‘ಹಾವಿನ ಅಸ್ಥಿಪಂಜರ’ ಹಿಂದಿನ ಅಸಲಿಯತ್ತು ಇಲ್ಲಿದೆ
ಸ್ನೋಪ್ಸ್‌ನ ವೈರಲ್ ಕ್ಲಿಪ್‌ನ ತನಿಖೆಯ ಪ್ರಕಾರ ಹಾವಿನ ಅಸ್ಥಿಪಂಜರ ವಾಸ್ತವವಾಗಿ ಲೆ ಸರ್ಪೆಂಟ್ ಡಿ ಆಪ್ಷನ್ ಎಂದು ಕರೆಯಲ್ಪಡುವ ಒಂದು ದೊಡ್ಡ ಲೋಹದ ಶಿಲ್ಪವಾಗಿದೆ ಎಂದು ತಿಳಿದುಬಂದಿದೆ.
ಗೂಗಲ್ ಮ್ಯಾಪ್‌ನ ಸಹಾಯದಿಂದ ಫ್ರಾನ್ಸ್‌ನಲ್ಲಿ ಬೃಹತ್ ಹಾವಿನ ಅಸ್ಥಿಪಂಜರ (Snake Skeleton) ಪತ್ತೆಯಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. @googlemapsfun ಹೆಸರಿನ ಟಿಕ್‌ಟಾಕ್ ಖಾತೆಯು ಗೂಗಲ್ ಮ್ಯಾಪ್ನ್ನು ಅನ್ವೇಷಿಸುವಾಗ ಕಂಡುಬಂದ ವಿಷಯಗಳ ವಿಡಿಯೋಗಳನ್ನು ಹಂಚಿಕೊಳ್ಳುತ್ತದೆ. ಮಾರ್ಚ್ 24 ರಂದು, ಈ ಟಿಕ್‌ಟಾಕ್ ಹ್ಯಾಂಡಲ್ ಫ್ರಾನ್ಸ್‌ನ ಕರಾವಳಿಯಲ್ಲಿ ದೈತ್ಯ ಹಾವಿನಂತಹ ವಸ್ತುವಿನ ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೋದಲ್ಲಿ ತೋರಿಸಿರುವ ಪ್ರಕಾರ ಎಲ್ಲೋ ಫ್ರಾನ್ಸ್‌ನಲ್ಲಿ, ಗೂಗಲ್ ಅರ್ಥ್‌ನಲ್ಲಿ ನೀವು ಉಪಗ್ರಹಗಳೊಂದಿಗೆ ಮಾತ್ರ ನೋಡಬಹುದಾದ ದೈತ್ಯವಾದ ಹಾವನ್ನು ನಾವು ನೋಡಬಹುದು. ಬಳಕೆದಾರರು ಇದನ್ನು ದೈತ್ಯ ಹಾವು ಎಂದು ನಂಬುತ್ತಾರೆ. ಇದು ಸುಮಾರು 30 ಮೀಟರ್ ಉದ್ದ ಮತ್ತು ಈ ಮೊದಲು ಹಿಡಿದ ಹಾವಿಗಿಂತ ದೊಡ್ಡದಾಗಿದೆ.
Le Serpent d’océan est une immense sculpture (130m) de l’artiste Huang Yong Ping, principalement composée d’aluminium. A découvrir à Saint-Brevin-les-Pins en France.#PaysDeLaLoire #SaintNazaireRenversante #ErenJaeger
?Full YouTube video #widerfocushttps://t.co/U61apdbEk4 pic.twitter.com/0nHGPmhhvR
— Wider Focus (@WiderFocus) February 28, 2022
ಅಳಿವಿನಂಚಿನಲ್ಲಿರುವ ಟೈಟಾನೊಬೋವಾ ಜಾತಿಗೆ ಸೇರಿರುವ ಹಾವಾಗಿರಬಹುದು ಎಂದು ತೋರುತ್ತದೆ. ಇದು ಸುಮಾರು 30 ಮೀಟರ್ ಉದ್ದ ಮತ್ತು ಹಿಂದೆ ಹಿಡಿದ ಯಾವುದೇ ಹಾವಿಗಿಂತ ದೊಡ್ಡದಾಗಿದೆ ಎನ್ನಲಾಗುತ್ತಿದೆ. ಈ ವೀಡಿಯೊವನ್ನು ಟಿಕ್‌ಟಾಕ್‌ನಲ್ಲಿ 20 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಗೂಗಲ್ ಮ್ಯಾಪ್‌ನಲ್ಲಿ ಹಾವಿನಂತಿರುವ ವಸ್ತುವನ್ನು ನೋಡಬಹುದಾಗಿದೆ. ಸ್ನೋಪ್ಸ್‌ನ ವೈರಲ್ ಕ್ಲಿಪ್‌ನ ತನಿಖೆಯ ಪ್ರಕಾರ ಹಾವಿನ ಅಸ್ಥಿಪಂಜರ ವಾಸ್ತವವಾಗಿ ಲೆ ಸರ್ಪೆಂಟ್ ಡಿ ಆಪ್ಷನ್ ಎಂದು ಕರೆಯಲ್ಪಡುವ ಒಂದು ದೊಡ್ಡ ಲೋಹದ ಶಿಲ್ಪವಾಗಿದೆ ಎಂದು ತಿಳಿದುಬಂದಿದೆ. ಈ ಶಿಲ್ಪವು ಫ್ರಾನ್ಸ್‌ನ ಪಶ್ಚಿಮ ಕರಾವಳಿಯಲ್ಲಿದ್ದು, 425 ಅಡಿ ಉದ್ದವಿದೆ.
ಲೆ ಸರ್ಪೆಂಟ್ ಡಿ ಆಪ್ಷನ್ನ್ನು 2012 ರಲ್ಲಿ ನದೀಮುಖದ ಏರ್ ಆರ್ಟ್ ಪ್ರದರ್ಶನದಲ್ಲಿ ಅನಾವರಣಗೊಳಿಸಲಾಯಿತು. ಅಟ್ಲಾಸ್ ಅಬ್ಸ್ಕ್ಯೂರಾ ವರದಿಯ ಪ್ರಕಾರ, ಇದನ್ನು ಸಿನೋ-ಫ್ರೆಂಚ್ ಕಲಾವಿದ ಹುವಾಂಗ್ ಯೋಂಗ್ ಪಿಂಗ್ ತಯಾರಿಸಿದ್ದಾರೆ. ಗೂಗಲ್ ಮ್ಯಾಪ್‌ನಲ್ಲಿ ಕಾಣುವ ಹಾವಿನ ಅಸ್ಥಿಪಂಜರ ವಾಸ್ತವವಾಗಿ ಒಂದು ಕಲಾಕೃತಿ ಎಂದು ಅಂತಿಮವಾಗಿ ಕಂಡುಬಂದಿದೆ. ಈ ವೀಡಿಯೊವನ್ನು ಎರಡು ಮಿಲಿಯನ್ ಬಾರಿ ವೀಕ್ಷಿಸಲಾಗಿದ್ದು, 70,000 ಕ್ಕೂ ಹೆಚ್ಚು ಲೈಕ್ಸ್ಗಳು ಮತ್ತು ನೂರಾರು ಕಾಮೆಂಟ್‌ಳು ಬಂದಿವೆ.
ಇದನ್ನೂ ಓದಿ:
Viral Video: ಉದ್ದೇಶಪೂರ್ವಕವಾಗಿ ವೃದ್ಧನ ಮೇಲೆ ಕಾರು ಹತ್ತಿಸಿದ ಚಾಲಕ; ಶಾಕಿಂಗ್ ವಿಡಿಯೋ ವೈರಲ್
ನಿರಾಶ್ರಿತ ಉಕ್ರೇನ್ನಿಯನ್ನರಿಗಾಗಿ ಅಪ್ಲಿಕೇಶನ್ ಸಿದ್ಧಪಡಿಸಿದ ಭಾರತದ 15 ವರ್ಷದ ಹುಡುಗ