ನಿರಾಶ್ರಿತ ಉಕ್ರೇನ್ನಿಯನ್ನರಿಗಾಗಿ ಅಪ್ಲಿಕೇಶನ್ ಸಿದ್ಧಪಡಿಸಿದ ಭಾರತದ 15 ವರ್ಷದ ಹುಡುಗ
ಸಾಫ್ಟ್‌ವೇರ್ ಡೆವಲಪರ್ ತೇಜಸ್ ರಚಿಸಿರುವ ಈ ಆ್ಯಪ್ ಹಲವು ವಿಶೇಷತೆಗಳನ್ನು ಹೊಂದಿದೆ. ಇದರಲ್ಲಿ ನಿರಾಶ್ರಿತರಿಗೆ ಹತ್ತಿರದ ನೆರವು ಸ್ಥಳಕ್ಕಾಗಿ ಇಡೀ ಪ್ರಪಂಚದ ನಕ್ಷೆಯನ್ನು ನೀಡಲಾಗುತ್ತದೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಒಂದು ತಿಂಗಳಿಗೂ ಹೆಚ್ಚು ಕಾಲ ಯುದ್ಧ ನಡೆಯುತ್ತಿದೆ. ಯುದ್ಧದಿಂದಾಗಿ ಲಕ್ಷಾಂತರ ಜನರು ನಿರಾಶ್ರಿತರಾಗಿ ಬೇರೆ ದೇಶಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಈ ನಿರಾಶ್ರಿತರಿಗೆ ಸಹಾಯ ಮಾಡಲು, 15 ವರ್ಷದ ಭಾರತೀಯ ಹುಡುಗನೊಬ್ಬ ಆ್ಯಪ್ (APP) ನ್ನು ವಿನ್ಯಾಸಗೊಳಿಸಿದ್ದು, ಉಕ್ರೇನಿಯನ್ ನಿರಾಶ್ರಿತರು ಅಗತ್ಯವಿರುವ ಸಹಾಯವನ್ನು ಪಡೆಯಲು ಬಳಸಬಹುದಾಗಿದೆ. ಈ ಆ್ಯಪ್ನ್ನು ಸಿಕ್ವೊಯಾ ಇಂಡಿಯಾ ಮ್ಯಾನೇಜರ್ ಜಿವಿ ರವಿಶಂಕರ್ ಅವರ ಪುತ್ರ ತೇಜಸ್ ಅಭಿವೃದ್ಧಿಪಡಿಸಿದ್ದಾರೆ. ಉತ್ತಮ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಅಪ್ಲಿಕೇಶನ್ನ್ನು ನಿರ್ಮಿಸಲು ತಿಂಗಳಾನು ತಿಂಗಳು ಸಮಯ ತೆಗೆದುಕೊಳ್ಳುತ್ತಾರೆ. ಆದರೆ ತೇಜಸ್ ಕೇವಲ ಎರಡು ವಾರಗಳಲ್ಲಿ ಈ ಅಪ್ಲಿಕೇಶನ್ನ್ನು ಸಿದ್ಧಪಡಿಸಿದ್ದಾರೆ. ತೇಜಸ್ ತಯಾರಿಸಿದ ಈ ಆ್ಯಪ್ನ್ನು ಇದೀಗ ಗೂಗಲ್ ಪ್ಲೇಸ್ಟೋರ್ ನಲ್ಲಿ ಸೇರಿಸಲಾಗಿದ್ದು, ಅದರ ಲಿಂಕ್ ಅನ್ನು ಸ್ವತಃ ತೇಜಸ್ ಟ್ವೀಟ್ ಮಾಡಿದ್ದಾರೆ.
More power to the younger generation! They decide to not debate but act. Keep building @XtremeDevX!
Please RT to help create impact! https://t.co/EE8wdGfkbQ
— G V Ravi Shankar (@gvravishankar) March 31, 2022
ಸಾಫ್ಟ್‌ವೇರ್ ಡೆವಲಪರ್ ತೇಜಸ್ ರಚಿಸಿರುವ ಈ ಆ್ಯಪ್ ಹಲವು ವಿಶೇಷತೆಗಳನ್ನು ಹೊಂದಿದೆ. ಇದರಲ್ಲಿ ನಿರಾಶ್ರಿತರಿಗೆ ಹತ್ತಿರದ ನೆರವು ಸ್ಥಳಕ್ಕಾಗಿ ಇಡೀ ಪ್ರಪಂಚದ ನಕ್ಷೆಯನ್ನು ನೀಡಲಾಗುತ್ತದೆ. ರಾಷ್ಟ್ರೀಯ ID ಆಧಾರಿತ ಪರಿಶೀಲನಾ ಸೌಲಭ್ಯಗಳು, ಆಹಾರ, ಉಳಿದುಕೊಳ್ಳಲು ಸುರಕ್ಷಿತ ಸ್ಥಳಗಳು ಮತ್ತು ಪ್ರಪಂಚದಾದ್ಯಂತ ಔಷಧಿಗಳಂತಹ ಅವಶ್ಯಕತೆಗಳನ್ನು ಪೂರೈಸಲು ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಅಗತ್ಯವಿರುವ ವ್ಯಕ್ತಿ ಕೇವಲ ಎರಡು ಕ್ಲಿಕ್‌ಗಳಲ್ಲಿ ಸಹಾಯ ಪಡೆಯಬಹುದು ಎಂದು ತೇಜಸ್ ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ. ಈ ಅಪ್ಲಿಕೇಶನ್ ಇಂಗ್ಲಿಷ್ ಜೊತೆಗೆ 12 ಇತರ ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತದೆ. ತೇಜಸ್ ತಂದೆ ಜಿವಿ ರವಿಶಂಕರ್ ಅವರು ತಮ್ಮ ಸಾಧನೆಯನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, ಮಗನ ಯಶಸ್ಸನ್ನು ಶ್ಲಾಘಿಸಿದ್ದಾರೆ. ಕೆಲವು ದಿನಗಳ ಹಿಂದೆ, ತೇಜಸ್ ತನ್ನ ಅಪ್ಲಿಕೇಶನ್ನ್ನು ಅನುಮೋದಿಸಲು ಗೂಗಲ್ ಪ್ಲೇ ಗೆ ಮನವಿ ಮಾಡಿದ್ದರು.
ಇದನ್ನೂ ಓದಿ:
ಸುಲಭವಾಗಿ ಆನೆ ಸೊಂಡಿಲು ಮೇಲೆ ಕಾಲಿಟ್ಟು ಮೇಲೇರಿ ಕುಳಿತ ಮಾವುತ; ನಿಜ ಜೀವನದ ಬಾಹುಬಲಿ ಎಂದ ನೆಟ್ಟಿಗರು
ಹಳೇ ವಾಹನಗಳ ಮೇಲಿನ ತೆರಿಗೆ ಇಂದಿನಿಂದ 60 ಪಟ್ಟು ಹೆಚ್ಚು: ದುಬಾರಿ ಗ್ರೀನ್ ಟ್ಯಾಕ್ಸ್ಗೆ ವಾಹನ ಮಾಲೀಕರ ತೀವ್ರ ಆಕ್ಷೇಪ