ಹಳೇ ವಾಹನಗಳ ಮೇಲಿನ ತೆರಿಗೆ ಇಂದಿನಿಂದ 60 ಪಟ್ಟು ಹೆಚ್ಚು: ದುಬಾರಿ ಗ್ರೀನ್ ಟ್ಯಾಕ್ಸ್​ಗೆ ವಾಹನ ಮಾಲೀಕರ ತೀವ್ರ ಆಕ್ಷೇಪ

ಕೆಲ ವಾಹನಗಳ ಮೇಲಿನ ತೆರಿಗೆಯನ್ನು 15 ರಿಂದ 60 ಪಟ್ಟು ಹೆಚ್ಚಿಸಲಾಗಿದೆ. ಕರ್ನಾಟಕ ಸರ್ಕಾರವು ಕಳೆದ 20 ವರ್ಷಗಳಿಂದ (ಏಪ್ರಿಲ್ 1, 2002) ಏಳು ವರ್ಷಕ್ಕೂ ಹಳೆಯದಾದ ವಾಹನಗಳ ಮೇಲೆ ಹಸಿರು ತೆರಿಗೆ ಸಂಗ್ರಹಿಸುತ್ತಿದೆ.

ಹಳೇ ವಾಹನಗಳ ಮೇಲಿನ ತೆರಿಗೆ ಇಂದಿನಿಂದ 60 ಪಟ್ಟು ಹೆಚ್ಚು: ದುಬಾರಿ ಗ್ರೀನ್ ಟ್ಯಾಕ್ಸ್​ಗೆ ವಾಹನ ಮಾಲೀಕರ ತೀವ್ರ ಆಕ್ಷೇಪ
ವಾಹನಗಳು
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 01, 2022 | 10:30 AM

ಬೆಂಗಳೂರು: ಕರ್ನಾಟಕದಲ್ಲಿ ಇಂದಿನಿಂದ (ಏಪ್ರಿಲ್ 1) ಹಳೆಯ ವಾಹನಗಳ ಮೇಲೆ ಹಸಿರು ತೆರಿಗೆ (Green Tax) ಜಾರಿಯಾಗಿದೆ. ವಾಹನಗಳ ಅರ್ಹತಾ ಪ್ರಮಾಣ ಪತ್ರ (Fitness Certificate – FC) ಪಡೆಯುವ ಸಂದರ್ಭದಲ್ಲಿ ಈ ತೆರಿಗೆಯನ್ನು ಮಾಲೀಕರು ಪಾವತಿಸಬೇಕಾಗುತ್ತದೆ. ಕೆಲ ವಾಹನಗಳ ಮೇಲಿನ ತೆರಿಗೆಯನ್ನು 15 ರಿಂದ 60 ಪಟ್ಟು ಹೆಚ್ಚಿಸಲಾಗಿದೆ. ಕರ್ನಾಟಕ ಸರ್ಕಾರವು ಕಳೆದ 20 ವರ್ಷಗಳಿಂದ (ಏಪ್ರಿಲ್ 1, 2002) ಏಳು ವರ್ಷಕ್ಕೂ ಹಳೆಯದಾದ ವಾಹನಗಳ ಮೇಲೆ ಹಸಿರು ತೆರಿಗೆ ಸಂಗ್ರಹಿಸುತ್ತಿದೆ. ಆದರೆ ಈ ಮೊದಲು ತೆರಿಗೆ ಮೊತ್ತ ನೆಪಮಾತ್ರಕ್ಕೆ ಎನ್ನುವಂತೆ ಇತ್ತು. ದ್ವಿಚಕ್ರ ವಾಹನಗಳಿಗೆ ₹ 250, ಕಾರು ಮತ್ತಿತರ ನಾಲ್ಕು ಚಕ್ರದ ವಾಹನಗಳಿಗೆ ₹ 500 ಹಾಗೂ ಸರಕು ಸಾಗಣೆ ವಾಹನಗಳಿಗೆ ₹ 200 ಶುಲ್ಕ ಪಡೆದುಕೊಳ್ಳಲಾಗುತ್ತಿತ್ತು.

15 ವರ್ಷಕ್ಕೂ ಹಳೆಯದಾದ ವಾಹನಗಳನ್ನು ಗುಜರಿಗೆ ಹಾಕಬೇಕು ಎಂಬ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ತೀವ್ರ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಇಂಥ ವಾಹನಗಳ ಮೇಲಿನ ತೆರಿಗೆ ಹೆಚ್ಚಿಸುವಂತೆ ಅಧಿಸೂಚನೆ ಹೊರಡಿಸಿತು. ಈ ಪರಿಷ್ಕರಣೆ ಆದೇಶವು ಇಂದಿನಿಂದ, ಅಂದರೆ ಏಪ್ರಿಲ್ 1, 2022ರಿಂದ ಜಾರಿಯಾಗಿದೆ. ಪರಿಷ್ಕರಣೆ ಆದೇಶದಿಂದ ಖಾಸಗಿ ಮತ್ತು ವಾಣಿಜ್ಯ ವಾಹನಗಳು ಹೆಚ್ಚುವರಿ ತೆರಿಗೆ ತೆರಬೇಕಾಗುತ್ತದೆ. ಉದಾಹರಣೆಗೆ ಹಳೆಯ ಸ್ಕೂಟರ್ ಅಥವಾ ಬೈಕ್ ಮಾಲೀಕರು ತಮ್ಮ ವಾಹನಗಳಿಗೆ ಎಫ್​ಸಿ ಪಡೆದುಕೊಳ್ಳಲು ₹ 1,000 ನೀಡಬೇಕು. ಇದರ ಜೊತೆಗೆ ವಾಹನಗಳ ತಪಾಸಣೆಗೆ ₹ 400ರಿಂದ 500 ಪಾವತಿಸಬೇಕಾಗುತ್ತದೆ. ಹಳೆಯ ಕಾರುಗಳ ಮಾಲೀಕರು ₹ 4,500 ತೆರಬೇಕಾಗುತ್ತದೆ. ಸರಕು ಸಾಗಣೆ ವಾಹನಗಳು ತೆರಬೇಕಾದ ಶುಲ್ಕದಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಮಧ್ಯಮ ಮತ್ತು ಬೃಹತ್ ಗಾತ್ರದ ಸರಕು ಸಾಗಣೆ ವಾಹನಗಳಿಗೆ ಈ ಮೊದಲು ₹ 200 ಶುಲ್ಕವಿತ್ತು. ಆದರೆ ಈಗ ಮಧ್ಯಮ ಗಾತ್ರದ ಸರಕು ಸಾಗಣೆ ವಾಹನಗಳು ₹ 10,000 ಮತ್ತು ಬೃಹತ್ ಸರಕು ಸಾಗಣೆ ವಾಹನಗಳು ₹ 12,000 ಶುಲ್ಕ ತೆರಬೇಕಾಗುತ್ತದೆ.

ಮಾರ್ಚ್ 2021ರ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ 15 ವರ್ಷ ದಾಟಿದ 70.29 ಲಕ್ಷ ವಾಹನಗಳಿವೆ. ಈ ಪೈಕಿ 45.62 ಲಕ್ಷ ದ್ವಿಚಕ್ರ ವಾಹನಗಳು, 11.7 ಲಕ್ಷ ಕಾರ್​ಗಳು, 2.4 ಲಕ್ಷ ಟ್ರಕ್​ ಮತ್ತು ಲಾರಿ, 2.19 ಲಕ್ಷ ಲಘು ಸರಕು ಸಾಗಣೆ ವಾಹನಗಳು ಇವೆ. ‘ಕೇಂದ್ರ ಸರ್ಕಾರದ ಅಧಿಸೂಚನೆಯು ದೇಶಾದ್ಯಂತ ಜಾರಿಗೆ ಬರುತ್ತದೆ. ಎಫ್​ಸಿ ಪಡೆದುಕೊಳ್ಳುವ ಜೊತೆಗೆ ಇಂಥ ವಾಹನಗಳು ಹೊಸದಾಗಿ ನೋಂದಣಿಯನ್ನೂ ಮಾಡಿಸಿಕೊಳ್ಳಬೇಕು’ ಎಂದು ಸಾರಿಗೆ ವಿಭಾಗದ ಹೆಚ್ಚುವರಿ ಕಮಿಷನರ್ ನರೇಂದ್ರ ಹೋಳ್ಕರ್ ಹೇಳಿದ್ದಾರೆ.

ಸರ್ಕಾರದ ಈ ನಿರ್ಧಾರವನ್ನು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ.ಚನ್ನಾರೆಡ್ಡಿ ಖಂಡಿಸಿದ್ದಾರೆ. ‘ಹೊಸ ವಾಹನಗಳನ್ನು ದೂರದ ಮಾರ್ಗಗಳಲ್ಲಿ, ಚೆನ್ನಾಗಿರುವ ಇತರ ವಾಹನಗಳನ್ನು ಅಂತರರಾಜ್ಯ ಮಾರ್ಗಗಳಲ್ಲಿ ಮತ್ತು ಹಳೆಯ ವಾಹನಗಳನ್ನು ಕಡಿಮೆ ಅಂತರದ ಮಾರ್ಗಗಳಲ್ಲಿ ಬಳಸುತ್ತಾರೆ. ಹೊಸ ನಿಯಮಗಳು ಅಧಿಕಾರಿಗಳಿಗೆ ಲಂಚ ಪಡೆಯಲು ಅವಕಾಶ ಮಾಡಿಕೊಡುತ್ತದೆ’ ಎಂದು ಆಕ್ಷೇಪಿಸುತ್ತಾರೆ. ‘ಕೊವಿಡ್ ಪಿಡುಗಿನ ನಂತರ ವ್ಯಾಪಾರ ಉದ್ಯಮಗಳು ಮೊದಲಿನಂತೆ ಇಲ್ಲ. ಹಳೆಯ ವಾಹನಗಳನ್ನು ಗುಜರಿಗೆ ಹಾಕಿ, ಹೊಸ ವಾಹನ ಖರೀದಿಸುವ ಸ್ಥಿತಿಯಲ್ಲಿ ಇಲ್ಲ’ ಎನ್ನುತ್ತಾರೆ ಕರ್ನಾಟಕ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್​ನ ರಾಧಾಕೃಷ್ಣ ಹೊಳ್ಳ.

ಇದನ್ನೂ ಓದಿ: IDFC First Bank: ಐಡಿಎಫ್​ಸಿ ಬ್ಯಾಂಕ್​ ಉಳಿತಾಯ ಖಾತೆ ಬಡ್ಡಿ ದರಗಳಲ್ಲಿ ಹೆಚ್ಚಳ; ಏಪ್ರಿಲ್ 1ರಿಂದ ಜಾರಿ

ಇದನ್ನೂ ಓದಿ: Gas Cylinder Price Hike: ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 250 ರೂ. ಏರಿಕೆ! ಜೆಟ್ ಇಂಧನ ದರದಲ್ಲಿ ಕೂಡ ಹೆಚ್ಚಳ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ