AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರೆಸ್ ಅಲೋಯನ್ಸ್; 7ನೇ ವೇತನ ಆಯೋಗದ ಈ ನಿಯಮದಲ್ಲಿ ಬದಲಾವಣೆ ಗಮನಿಸಿ

Change of Dress Allowance rule for new central govt recruits: ಕೇಂದ್ರ ಸರ್ಕಾರದ ಉದ್ಯೋಗಿಗಳ ಗಮನಕ್ಕೆ.... ಹೊಸದಾಗಿ ನೇಮಕಾತಿ ಆಗಲಿರುವವರು ಗಮನಿಸಬೇಕಾದ ಸಂಗತಿ ಇದು. 2025ರ ಜೂನ್ ನಂತರ ನೇಮಕವಾಗುವ ಉದ್ಯೋಗಿಗಳಿಗೆ ಸಮವಸ್ತ್ರ ಭತ್ಯೆ ನೀಡುವ ಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ. ನೀವು ನೇಮಕಗೊಂಡ ವರ್ಷದಲ್ಲಿ ಎಷ್ಟು ತಿಂಗಳು ಸೇವೆ ಸಲ್ಲಿಸುವಿರೋ ಅದಕ್ಕೆ ಅನುಗುಣವಾಗಿ ಭತ್ಯೆ ನೀಡಲಾಗುತ್ತದೆ.

ಡ್ರೆಸ್ ಅಲೋಯನ್ಸ್; 7ನೇ ವೇತನ ಆಯೋಗದ ಈ ನಿಯಮದಲ್ಲಿ ಬದಲಾವಣೆ ಗಮನಿಸಿ
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 17, 2025 | 4:05 PM

Share

ನವದೆಹಲಿ, ಜೂನ್ 17: ಕೇಂದ್ರ ಸರ್ಕಾರದ ಹೊಸ ನೇಮಕಾತಿಗಳಿಗೆ ಕೆಲ ನಿಯಮ ಬದಲಾವಣೆ ಆಡಲಾಗಿದೆ. ಜುಲೈ ನಂತರ ಸೇರ್ಪಡೆಯಾಗುವ ಸರ್ಕಾರಿ ಉದ್ಯೋಗಿಗಳಿಗೆ ಆ ವರ್ಷದ ಡ್ರೆಸ್ ಅಲೋಯನ್ಸ್ ಪೂರ್ಣವಾಗಿ ಸಿಕ್ಕೋದಿಲ್ಲ. ಮುಂದಿನ ವರ್ಷದ ಜೂನ್​​ವರೆಗೆ ಎಷ್ಟು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ ಎಂಬುದರ ಆಧಾರದ ಮೇಲೆ ಭತ್ಯ ಕೊಡಲಾಗುತ್ತದೆ. ಈ ವಿಚಾರವನ್ನು ಇಂದು ಮಂಗಳವಾರ ಕೇಂದ್ರ ಸಂವಹನ ಸಚಿವಾಲಯ ಹೇಳಿದೆ.

ಏನಿದು ಡ್ರೆಸ್ ಅಲೋಯನ್ಸ್?

ಡ್ರೆಸ್ ಅಲೋಯನ್ಸ್ ಅನ್ನು ಯೂನಿಫಾರ್ಮ್ ಅಲೋಯನ್ಸ್ ಅಥವಾ ಸಮವಸ್ತ್ರ ಭತ್ಯೆ ಎಂದಲೂ ಕರೆಯಲಾಗುತ್ತದೆ. ಹಿಂದೆ ಕ್ಲೋಥಿಂಗ್ ಅಲೋಯನ್ಸ್, ಇನಿಶಿಯಲ್ ಎಕ್ವಿಪ್ಮೆಂಟ್ ಅಲೋಯನ್ಸ್, ಕಿಟ್ ಮೈಂಟೆನನ್ಸ್ ಅಲೋಯನ್ಸ್, ರೋಬ್ ಅಲೋಯನ್ಸ್, ಶೂ ಅಲೋಯನ್ಸ್ ಮತ್ತಿತರ ವಿವಿಧ ಭತ್ಯೆಗಳಿದ್ದುವು. 2017ರಲ್ಲಿ ಹಣಕಾಸು ಸಚಿವಾಲಯವು ಎಲ್ಲಾ ಭತ್ಯೆಗಳನ್ನು ಒಟ್ಟುಗೂಡಿಸಿ ಸಮವಸ್ತ್ರ ಭತ್ಯೆಯನ್ನು ಜಾರಿಗೆ ತಂದಿತು.

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಈ ಭತ್ಯೆ ನೀಡಲಾಗುತ್ತದೆ. ಇದು ತುಟ್ಟಿಭತ್ಯೆಗೆ ಪ್ರತ್ಯೇಕವಾಗಿ ಇರುವ ಅಲೋಯನ್ಸ್. ಕೆಲಸಕ್ಕೆ ಸಮವಸ್ತ್ರ ಧರಿಸಬೇಕಾದ ಸೇನೆ, ಪೊಲೀಸ್, ರೈಲ್ವೆ, ಚಾಲಕ, ನರ್ಸ್ ಇತ್ಯಾದಿಯಲ್ಲಿನ ಉದ್ಯೋಗಿಗಳಿಗೆ, ತಮ್ಮ ಸಮವಸ್ತ್ರಕ್ಕೆ ಅವರು ಮಾಡುವ ವೆಚ್ಚವನ್ನು ಭರಿಸಲು ಸರ್ಕಾರ ನೀಡುವ ಧನ ಸಹಾಯವೇ ಈ ಭತ್ಯೆ.

ಇದನ್ನೂ ಓದಿ: ಟಿಸಿಎಸ್ ಉದ್ಯೋಗಿಗಳಿಗೆ 35ಕ್ಕೂ ಹೆಚ್ಚು ದಿನ ಬೆಂಚ್ ಟೈಮ್ ಇಲ್ಲ; ಇದರಿಂದ ಅನುಕೂಲವೇನು?

ಸದ್ಯ ಪ್ರತೀ ವರ್ಷ ಜುಲೈನಲ್ಲಿ ಇಡೀ ವರ್ಷದ ಸಮವಸ್ತ್ರ ಭತ್ಯೆಯನ್ನು ನೀಡಲಾಗುತ್ತದೆ. ಎಲ್ಲರಿಗೂ ಈ ಭತ್ಯೆ ಸಮವಾಗಿರುವುದಿಲ್ಲ. ಇಲಾಖಾವಾರು ವ್ಯತ್ಯಾಸ ಇರುತ್ತದೆ. ಸೇನಾಧಿಕಾರಿಗಳಿಗೆ ವರ್ಷಕ್ಕೆ 20,000 ರೂ ಭತ್ಯೆ ಇರುತ್ತದೆ. ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು, ಎಂಎನ್​​ಎಸ್ ಅಧಿಕಾರಿಗಳು, ದೆಹಲಿ ಎಸಿಪಿ ಮುಂತಾದವರಿಗೆ 10,000 ರೂ ವಾರ್ಷಿಕ ಭತ್ಯೆ ಇರುತ್ತದೆ. ಡ್ರೈವರ್, ರೈಲ್ ಟ್ರ್ಯಾಕ್​ಮೆನ್ ಮೊದಲಾದವರಿಗೆ 5,000 ರೂ ಡ್ರೆಸ್ ಅಲೋಯನ್ಸ್ ಸಿಗುತ್ತದೆ.

ಹೊಸ ನೇಮಕಾತಿಗಳಿಗೆ ಸಮವಸ್ತ್ರ ಭತ್ಯೆ ಲೆಕ್ಕಾಚಾರ ಹೀಗಿರುತ್ತದೆ

ಪರಿಷ್ಕೃತ ನೀತಿ ಪ್ರಕಾರ, 2025ರ ಜುಲೈನ ನಂತರ ನೇಮಕಾತಿ ಆದವರಿಗೆ ಮುಂದಿನ ವರ್ಷದ ಜೂನ್​​ವರೆಗಿನ ಅವರ ಸೇವಾವಧಿಗೆ ಅನುಗುಣವಾಗಿ ಭತ್ಯೆ ಸಿಗುತ್ತದೆ. ಅದರ ಸೂತ್ರ ಹೀಗಿದೆ:

ಕೈಗೆ ಸಿಗುವ ಭತ್ಯೆ = (ಎ ÷ 12) × ಬಿ

ಇಲ್ಲಿ ಎ ಎಂದರೆ ಉದ್ಯೋಗಿಗೆ ನಿಗದಿತವಾಗಿರುವ ವಾರ್ಷಿಕ ಸಮವಸ್ತ್ರ ಭತ್ಯೆ. ಇನ್ನು, ಬಿ ಎಂದರೆ ಕೆಲಸಕ್ಕೆ ಸೇರಿದ ದಿನದಿಂದ ಜೂನ್​​ವರೆಗೆ ತಿಂಗಳುಗಳ ಸಂಖ್ಯೆ.

ಇದನ್ನೂ ಓದಿ: ಬರಲಿವೆ ಹೊಸ ಎಸಿ ನಿಯಮಗಳು; ಉಷ್ಣಾಂಶ 20 ಡಿಗ್ರಿಗಿಂತ ಕಡಿಮೆಗೆ ಇಳಿಸುವಂತಿಲ್ಲ; ಗರಿಷ್ಠ ಉಷ್ಣಾಂಶಕ್ಕೂ ಮಿತಿ

ಉದಾಹರಣೆಗೆ, ನಿಮಗೆ ವರ್ಷಕ್ಕೆ 10,000 ಸಮವಸ್ತ್ರ ಭತ್ಯೆ ಎಂದು ನಿಗದಿಯಾಗಿರುತ್ತದೆ. ನೀವು 2025ರ ಸೆಪ್ಟೆಂಬರ್​​ನಲ್ಲಿ ನೇಮಕಾತಿ ಆಗಿರುತ್ತೀರಿ. ಆಗ ಲೆಕ್ಕಾಚಾರ ಹೀಗೆ ಹಾಕಬಹುದು.

(10000÷12) × 10 = 8,333

ಹಿಂದಿನ ನಿಯಮ ಇದ್ದಿದ್ದರೆ ನಿಮಗೆ ಪೂರ್ಣ 10,000 ರೂ ಭತ್ಯೆ ಸಿಗುತ್ತಿತ್ತು. ಹೊಸ ನಿಯಮದಲ್ಲಿ ನಿಮಗೆ 8,333 ರೂ ಸಿಗುತ್ತದೆ. ಇದು ಉದಾಹರಣೆಗೆ ಮಾತ್ರ. ಹಾಗೂ ಈ ವರ್ಷ ಜುಲೈ ನಂತರ ನೇಮಕಾತಿ ಆದವರಿಗೆ ಅನ್ವಯ ಆಗುವ ನಿಯಮ. ಮುಂದಿನ ವರ್ಷದಿಂದ ನಿಮಗೆ ಪೂರ್ಣ ನಿಗದಿತ ಸಮವಸ್ತ್ರ ಭತ್ಯೆ ಸಿಗುತ್ತಾ ಹೋಗುತ್ತದೆ. 2025ರ ಜೂನ್​​ಗಿಂತ ಮೊದಲು ನೇಮಕಾತಿ ಆದವರಿಗೆ ಹಿಂದಿನ ನಿಯಮ ಅನ್ವಯ ಆಗುತ್ತದೆ. ಅಂದರೆ, ಅವರು ನೇಮಕಗೊಂಡ ವರ್ಷದಲ್ಲಿ ಎಷ್ಟೇ ತಿಂಗಳು ಕೆಲಸ ಮಾಡಿರಲಿ, ಪೂರ್ಣ ಸಮವಸ್ತ್ರ ಭತ್ಯೆ ಸಿಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ