AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AC Rules: ಬರಲಿವೆ ಹೊಸ ಎಸಿ ನಿಯಮಗಳು; ಉಷ್ಣಾಂಶ 20 ಡಿಗ್ರಿಗಿಂತ ಕಡಿಮೆಗೆ ಇಳಿಸುವಂತಿಲ್ಲ; ಗರಿಷ್ಠ ಉಷ್ಣಾಂಶಕ್ಕೂ ಮಿತಿ

New AC rules proposed in India: ಭಾರತದಲ್ಲಿ ಶೀಘ್ರದಲ್ಲೇ ಹೊಸ ಏರ್ ಕಂಡೀಷನರ್ ನಿಯಮಗಳು ಬರಲಿವೆ. ಎಸಿಯ ಉಷ್ಣಾಂಶವು 20ರಿಂದ 28 ಡಿಗ್ರಿ ಸೆಲ್ಷಿಯಸ್ ಶ್ರೇಣಿಯೊಳಗೆಯೇ ಇರಬೇಕು ಎಂದು ಸ್ಟ್ಯಾಂಡರ್ಡೈಸ್ ಮಾಡಲಾದ ನಿಯಮಗಳು ಸದ್ಯದಲ್ಲೇ ಜಾರಿಗೆ ಬರಬಹುದು. ಸ್ಪೇನ್, ಜಪಾನ್ ಮೊದಲಾದ ಕೆಲವೇ ದೇಶಗಳಲ್ಲಿ ಈ ರೀತಿಯ ಎಸಿ ನಿಯಮಗಳಿವೆ.

AC Rules: ಬರಲಿವೆ ಹೊಸ ಎಸಿ ನಿಯಮಗಳು; ಉಷ್ಣಾಂಶ 20 ಡಿಗ್ರಿಗಿಂತ ಕಡಿಮೆಗೆ ಇಳಿಸುವಂತಿಲ್ಲ; ಗರಿಷ್ಠ ಉಷ್ಣಾಂಶಕ್ಕೂ ಮಿತಿ
ಎಸಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 17, 2025 | 11:53 AM

Share

ನವದೆಹಲಿ, ಜೂನ್ 17: ಹವಾ ನಿಯಂತ್ರಣ ಯಂತ್ರ ಅಥವಾ ಏರ್ ಕಂಡೀಷನರ್​​ಗಳು (AC – Air Conditioner) ಸಾಕಷ್ಟು ವಿದ್ಯುತ್ ಬೇಡುತ್ತವೆ. ಉಷ್ಣ ಪ್ರದೇಶದ ಜನರು ಎಸಿಯನ್ನು ಶೇ. 20ಕ್ಕಿಂತಲೂ ಕಡಿಮೆ ಡಿಗ್ರಿ ಸೆಲ್ಷಿಯಸ್​​ಗೆ ಇಡಬಹುದು. ಶೀತ ಪ್ರದೇಶದ ಜನರು ಶೇ. 30ಕ್ಕಿಂತಲೂ ಹೆಚ್ಚು ಉಷ್ಣಾಂಶಕ್ಕೆ ಎಸಿಯ ಸೆಟ್ಟಿಂಗ್ ಇಡಬಹುದು. ಇದರಿಂದ ವಿದ್ಯುತ್ ಪೋಲಾಗಬಹುದು. ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ 23-24 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ಸರಿಯಾಗಿರುತ್ತದೆ. ಈ ಅಂಶವನ್ನು ಮನಗಂಡು ಸರ್ಕಾರವು ಏರ್ ಕಂಡೀಷನಿಂಗ್ ನಿಯಮಗಳನ್ನು ರೂಪಿಸಲು ಮುಂದಾಗಿದೆ.

ಕೇಂದ್ರ ವಿದ್ಯುತ್ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು ದೇಶಾದ್ಯಂತ ಶೀಘ್ರದಲ್ಲೇ ಹೊಸ ಎಸಿ ನಿಯಮಗಳನ್ನು ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ವರದಿಗಳ ಪ್ರಕಾರ ಏರ್ ಕಂಡೀಷನರ್​​ಗಳು 20-28 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ಮಾತ್ರವೇ ನೀಡಬಹುದು.

ಇದನ್ನೂ ಓದಿ: ವಾಯುಶಕ್ತಿ ಉತ್ಪಾದನೆ; ಗುಜರಾತ್, ತಮಿಳುನಾಡನ್ನು ಹಿಂದಿಕ್ಕಿದ ಕರ್ನಾಟಕ ನಂ. 1; ಕೇಂದ್ರದಿಂದ ಪ್ರಶಸ್ತಿ

ಅಂದರೆ, ಎಸಿಯಿಂದ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಷಿಯಸ್, ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಷಿಯಸ್ ಮಾತ್ರವೇ ಸಿಗುತ್ತದೆ. ನೀವು 20 ಡಿಗ್ರಿ ಸೆಲ್ಷಿಯಸ್​​ಗಿಂತ ಕಡಿಮೆ ಉಷ್ಣಾಂಶ ಪಡೆಯಲು ಸಾಧ್ಯವಾಗುವುದಿಲ್ಲ. ಹಾಗೆಯೇ, 28 ಡಿಗ್ರಿಗಿಂತ ಹೆಚ್ಚು ಉಷ್ಣಾಂಶ ಏರಿಸಲೂ ಆಗುವುದಿಲ್ಲ. ಇಂಥದ್ದೊಂದು ನಿಯಮವನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಬೇರೆ ಕೆಲ ದೇಶಗಳಲ್ಲಿ ಇದೆ ಇಂಥ ಎಸಿ ನಿಯಮ

ಅಮೆರಿಕ, ಸ್ಪೇನ್, ಜಪಾನ್, ಸಿಂಗಾಪುರ್, ಆಸ್ಟ್ರೇಲಿಯಾ ಇತ್ಯಾದಿ ಕೆಲವೇ ದೇಶಗಳಲ್ಲಿ ಹವಾ ನಿಯಂತ್ರಣ ನಿಯಮಗಳು ಜಾರಿಯಲ್ಲಿವೆ. ಜಪಾನ್ ದೇಶದ ಸರ್ಕಾರಿ ಕಟ್ಟಡಗಳಲ್ಲಿ 28 ಡಿಗ್ರಿ ಉಷ್ಣಾಂಶ ಹೊಂದಿರಬೇಕೆಂದು ಸ್ಟ್ಯಾಂಡರ್ಡೈಸ್ ಮಾಡಲಾಗಿದೆ. ಅಮೆರಿಕದಲ್ಲಿ ಮನೆಗಳಲ್ಲಿರುವ ಎಸಿ ಉಷ್ಣಾಂಶ 26 ಡಿಗ್ರಿಯಷ್ಟಿರಬೇಕು ಎನ್ನುವ ಸಲಹೆ ಇದೆ. ಆದರೆ, ಇದು ಕಡ್ಡಾಯವಲ್ಲ.

ಇದನ್ನೂ ಓದಿ: ಇ-ಆಧಾರ್ ಇದ್ರೆ ಸಾಕು, ಮನೆಯಲ್ಲೇ ಕೂತು ಎಲ್ಲಾ ಮಾಡಲು ಸಾಧ್ಯ; ಏನಂತಾರೆ ಯುಐಡಿಎಐ ಸಿಇಒ?

ಸಿಂಗಾಪುರ ಮತ್ತು ಆಸ್ಟ್ರೇಲಿಯಾದಲ್ಲಿ ಎಸಿಯನ್ನು 24ರಿಂದ 26 ಡಿಗ್ರಿ ಸೆಲ್ಷಿಯಸ್​ನಲ್ಲಿ ಇರಿಸಬೇಕೆನ್ನುವ ಮಾರ್ಗಸೂಚಿಯನ್ನು ನೀಡಲಾಗಿದೆ. ಸ್ಪೇನ್ ದೇಶದಲ್ಲಿ ಸ್ವಲ್ಪ ಕುತೂಹಲ ಎನಿಸುವ ನಿಯಮ ಇದೆ. ಇಲ್ಲಿ ಬೇಸಿಗೆಯಲ್ಲಿ ಎಸಿ ಉಷ್ಣಾಂಶವನ್ನು 27 ಡಿಗ್ರಿಗಿಂತ ಕಡಿಮೆಗೆ ಇರಿಸುವಂತಿಲ್ಲ. ಚಳಿಗಾಲದಲ್ಲಿ ಎಸಿ ಉಷ್ಣಾಂಶ 19 ಡಿಗ್ರಿಗಿಂತ ಹೆಚ್ಚಿರುವಂತಿಲ್ಲ.

ಎಷ್ಟು ವಿದ್ಯುತ್ ಉಳಿತಾಯ ಸಾಧ್ಯ?

ಬ್ಯೂರೋ ಆಫ್ ಎನರ್ಜಿ ಎಫಿಶಿಯನ್ಸಿ ಸಂಸ್ಥೆ ಪ್ರಕಾರ ಎಸಿ ಉಷ್ಣಾಂಶವನ್ನು 20-24 ಡಿಗ್ರಿ ಸೆಲ್ಷಿಯಸ್​​ಗೆ ಇರಿಸಿದರೆ ಶೇ. 26ರಷ್ಟು ವಿದ್ಯುತ್ ಉಳಿಸಬಹುದಂತೆ. ಒಂದೊಂದು ಡಿಗ್ರಿ ಉಷ್ಣಾಂಶ ಹೆಚ್ಚಿಸಿದಷ್ಟೂ ವಿದ್ಯುತ್ ಉಳಿತಾಯ ಶೇ. 6ರಷ್​ಟು ಹೆಚ್ಚುತ್ತದೆ ಎಂದೆನ್ನಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ