ವಾಯುಶಕ್ತಿ ಉತ್ಪಾದನೆ; ಗುಜರಾತ್, ತಮಿಳುನಾಡನ್ನು ಹಿಂದಿಕ್ಕಿದ ಕರ್ನಾಟಕ ನಂ. 1; ಕೇಂದ್ರದಿಂದ ಪ್ರಶಸ್ತಿ
Karnataka's wind energy capacity: 2024-25ರಲ್ಲಿ ಕರ್ನಾಟಕದಲ್ಲಿ 1,331 ಮೆ.ವ್ಯಾ.ನಷ್ಟು ವಾಯು ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಆಗಿದೆ. ಒಂದು ವರ್ಷದಲ್ಲಿ ಅತ್ಯಧಿಕ ವಾಯು ವಿದ್ಯುತ್ ಸಾಮರ್ಥ್ಯ ಏರಿಸಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೊದಲು ಬಂದಿದೆ. ತಮಿಳುನಾಡು ಮತ್ತು ಗುಜರಾತ್ ರಾಜ್ಯಗಳು 2 ಮತ್ತು 3ನೇ ಸ್ಥಾನ ಪಡೆದಿವೆ.

ಬೆಂಗಳೂರು, ಜೂನ್ 16: ಕಳೆದ ಹಣಕಾಸು ವರ್ಷದಲ್ಲಿ ಅತಿಹೆಚ್ಚು ವಾಯುಶಕ್ತಿ ಸಾಮರ್ಥ್ಯ (Wind energy capacity) ಹೆಚ್ಚಿಸಿದ ಕಾರಣಕ್ಕೆ ಕೇಂದ್ರದಿಂದ ಕರ್ನಾಟಕಕ್ಕೆ ಪ್ರಶಸ್ತಿ ನೀಡಲಾಗಿದೆ. 2024-25ರ ಹಣಕಾಸು ವರ್ಷದಲ್ಲಿ ರಾಜ್ಯದಲ್ಲಿ 1,331.48 ಮೆಗಾವ್ಯಾಟ್ ವಿಂಡ್ ಪವರ್ ಕೆಪಾಸಿಟಿ ಸೇರ್ಪಡೆಯಾಗಿದೆ. ಇತರೆಲ್ಲಾ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಕಳೆದ ವರ್ಷ ಅತಿಹೆಚ್ಚು ವಿಂಡ್ ಪವರ್ ತಯಾರಿಕೆ ಸಾಮರ್ಥ್ಯ ವೃದ್ಧಿಯಾಗಿದೆ. ತಮಿಳುನಾಡು, ಗುಜರಾತ್ ರಾಜ್ಯಗಳ ಪೈಪೋಟಿಯನ್ನು ಹಿಂದಿಕ್ಕಿದೆ.
2024-25ರಲ್ಲಿ ಕರ್ನಾಟಕದಲ್ಲಿ 1,331.48 ಮೆಗಾವ್ಯಾಟ್ ವಾಯುಶಕ್ತಿ ಸಾಮರ್ಥ್ಯ ಹೆಚ್ಚಿಸಿಕೊಂಡಿದೆ. ತಮಿಳುನಾಡು 1,136.37 ಮೆ.ವ್ಯಾ. ಮತ್ತು ಗುಜರಾತ್ 954.76 ಮೆ.ವ್ಯಾ. ವಿಂಡ್ ಪವರ್ ಸಾಮರ್ಥ್ಯ ಹೆಚ್ಚಳ ಆಗಿದೆ.
ಬೆಂಗಳೂರಿನಲ್ಲಿ ನಿನ್ನೆ ಭಾನುವಾರ ನಡೆದ ಜಾಗತಿಕ ವಾಯು ದಿನ ಆಚರಣೆ ವೇಳೆ ಕೇಂದ್ರ ನವೀಕರಣ ಇಂಧನ ಸಚಿವ ಪ್ರಲ್ಹಾದ್ ಜೋಷಿ (Pralhad Joshi) ಅವರು ಕರ್ನಾಟಕದ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಇದನ್ನೂ ಓದಿ: ಸ್ಟಾರ್ಟಪ್ ಇಕೋಸಿಸ್ಟಂ: ಭಾರತದಲ್ಲಿ ಬೆಂಗಳೂರೇ ನಂಬರ್ ಒನ್; ಜಾಗತಿಕ ದಿಗ್ಗಜ ನಗರಗಳ ಸಾಲಿನಲ್ಲಿ ಸಿಲಿಕಾನ್ ಸಿಟಿ
ಕರ್ನಾಟಕದಲ್ಲಿರುವ ಸ್ಥಾಪಿತ ವಾಯುಶಕ್ತಿ ಸಾಮರ್ಥ್ಯ 7,351 ಮೆಗಾವ್ಯಾಟ್
ಕರ್ನಾಟಕದಲ್ಲಿ ಒಂದೇ ವರ್ಷದಲ್ಲಿ 1,331 ಮೆಗಾ ವ್ಯಾಟ್ನಷ್ಟು ವಾಯು ವಿದ್ಯುತ್ ಉತ್ಪಾದನಾ ಸಾಮರ್ಥ್ಯ ವೃದ್ಧಿಯಾಗಿರುವುದು ಗಮನಾರ್ಹ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ವಾಯು ವಿದ್ಯುತ್ ಸಾಮರ್ಥ್ಯ 7,351 ಮೆಗಾವ್ಯಾಟ್ಗೆ ಏರಿದೆ. ಅಂದರೆ 7.35 ಗಿಗಾವ್ಯಾಟ್ ವಿಂಡ್ ಎನರ್ಜಿ ಕೆಪಾಸಿಟಿ ನಿರ್ಮಾಣ ಆಗಿದೆ.
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ವಿವಿಧ ವಿಂಡ್ ಪವರ್ ಪ್ರಾಜೆಕ್ಟ್ಗಳು ಶುರುವಾಗಲಿವೆ. ಅದಕ್ಕೆ ಪೂರಕವಾದ ಸಬ್ಸ್ಟೇಷನ್ಸ್, ಕಾರಿಡಾರ್ ಹಾಗೂ ನವೀಕರಣ ವಿದ್ಯುತ್ ಮೀಸಲು ವಲಯ ಇತ್ಯಾದಿ ಇನ್ಫ್ರಾಸ್ಟ್ರಕ್ಚರ್ ಅನ್ನೂ ಬಲಪಡಿಸಲಾಗುತ್ತಿದೆ. ಈ ವಿವಿಧ ವಾಯುಶಕ್ತಿ ಯೋಜನೆಗಳಿಂದ 17 ಗಿಗಾವ್ಯಾಟ್ನಷ್ಟು ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದೆ. ಇವು ಜಾರಿಯಾದರೆ ರಾಜ್ಯದಲ್ಲಿ 25 ಗಿ.ವ್ಯಾ. ವಿಂಡ್ ಪವರ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಸೃಷ್ಟಿಯಾಗಬಹುದು.
ಇದನ್ನೂ ಓದಿ: ಭಾರತದಲ್ಲಿ ಮಿಲಿಯನೇರ್ಗಳ ಸಂಖ್ಯೆ 85,000 ಕ್ಕಿಂತ ಹೆಚ್ಚು; ಜಾಗತಿಕವಾಗಿ ಮೂರೇ ದೇಶಗಳು ಭಾರತಕ್ಕಿಂತ ಮುಂದು
2030ಕ್ಕೆ 100 ಗಿಗಾ ವ್ಯಾಟ್ ವಿಂಡ್ ಎನರ್ಜಿ ಗುರಿ ಭಾರತಕ್ಕೆ
ಕೇಂದ್ರ ಸರ್ಕಾರವು 2030ರೊಳಗೆ 500 ಗಿಗಾವ್ಯಾಟ್ನಷ್ಟು ಮರುಬಳಕೆ ಇಂಧನ ಅಥವಾ ರಿನಿವಬಲ್ ಎನರ್ಜಿ ಸಾಧನೆಯ ಗುರಿ ನಿಗದಿ ಮಾಡಿದೆ. ಇದರಲ್ಲಿ 100 ಗಿ.ವ್ಯಾ. ವಿಂಡ್ ಎನರ್ಜಿ ಗುರಿ ಇದೆ. ಈ ವಾಯುಶಕ್ತಿಯ ಗುರಿ ಈಡೇರಿಕೆಗೆ ಕರ್ನಾಟಕದ ಕೊಡುಗೆ ಗಮನಾರ್ಹವಾಗಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




