ಐಟಿ ಉದ್ಯೋಗಿಗಳಿಗೆ ಕಾದಿದೆಯಾ ಸಂಕಷ್ಟ? ಟಿಸಿಎಸ್, ಇನ್ಫೋಸಿಸ್ ಕಂಪನಿಗಳ ಬ್ಯುಸಿನೆಸ್ ಇಳಿಮುಖ?
TCS, Infosys business from top clients dip in last year: ಜಾಗತಿಕ ಅನಿಶ್ಚಿತ ಪರಿಸ್ಥಿತಿಯು ಭಾರತೀಯ ಐಟಿ ಕಂಪನಿಗಳಿಗೆ ಹಿನ್ನಡೆ ತರುತ್ತಿವೆ. ಟಿಸಿಎಸ್, ಇನ್ಫೋಸಿಸ್ ಸೇರಿದಂತೆ ವಿವಿಧ ಐಟಿ ಕಂಪನಿಗಳು ತಮ್ಮ ಪ್ರಮುಖ ಕ್ಲೈಂಟ್ಗಳಿಂದ ಪಡೆಯುತ್ತಿರುವ ಬ್ಯುಸಿನೆಸ್ ಇಳಿಮುಖವಾಗುತ್ತಿದೆ. ದಿ ಮಿಂಟ್ ವರದಿ ಪ್ರಕಾರ, ಎಂಫೇಸಿಸ್, ಹೆಕ್ಸಾವೇರ್, ಮೈಂಡ್ ಟ್ರೀ ಇತ್ಯಾದಿ ಕಂಪನಿಗಳಿಗೂ ಇದೇ ಪರಿಸ್ಥಿತಿ ಇದೆ.

ನವದೆಹಲಿ, ಜೂನ್ 17: ಭಾರತದ ಕೆಲ ಐಟಿ ಕಂಪನಿಗಳ ಬ್ಯುಸಿನೆಸ್ ಕಡಿಮೆ ಆಗುತ್ತಿರುವುದು ಬೆಳಕಿಗೆ ಬಂದಿದೆ. ಜಾಗತಿಕವಾಗಿ ಅನಿಶ್ಚಿತ ಪರಿಸ್ಥಿತಿ ಇರುವುದರಿಂದ ವಿವಿಧ ಕಂಪನಿಗಳು ವೆಚ್ಚ ಕಡಿತ ಕ್ರಮಗಳನ್ನು ಕೈಗೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಐಟಿ ಸರ್ವಿಸ್ಗೆ (IT Service) ಮಾಡುತ್ತಿರುವ ವೆಚ್ಚಕ್ಕೂ ಸಹಜವಾಗಿ ಕತ್ತರಿ ಹಾಕಲಾಗುತ್ತಿದೆ. ಭಾರತದ ಅತಿದೊಡ್ಡ ಐಟಿ ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಇನ್ಫೋಸಿಸ್ ಕಳೆದ ವರ್ಷ ತಮ್ಮ ಪ್ರಮುಖ ಕ್ಲೈಂಟ್ಗಳಿಂದ ಕಡಿಮೆ ಬ್ಯುಸಿನೆಸ್ ಪಡೆದಿವೆ ಎಂದು ಕಮ್ಯೂನಿಕೇಶನ್ಸ್ ಟುಡೇಯಲ್ಲಿ ವರದಿಯಾಗಿದೆ.
ಸಿಟಿಗ್ರೂಪ್ ಮತ್ತು ಪೋಸ್ಟ್ಬ್ಯಾಂಕ್ನಿಂದ ಟಿಸಿಎಸ್ಗೆ ಸಿಗುತ್ತಿರುವ ಪ್ರಾಜೆಕ್ಟ್ ಕಡಿಮೆ ಆಗಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ನ ಅತಿದೊಡ್ಡ ಕ್ಲೈಂಟ್ಗಳ ಸಾಲಿನಲ್ಲಿ ಇವೆರಡು ಕಂಪನಿಗಳು ಬರುತ್ತವೆ. ಪೋಸ್ಟ್ಬ್ಯಾಂಕ್ ಎನ್ನುವುದು ಡ್ಯೂಷೆ ಬ್ಯಾಂಕ್ನ ಅಂಗಸಂಸ್ಥೆಯಾಗಿದೆ.
ಇದನ್ನೂ ಓದಿ: ಬರಲಿವೆ ಹೊಸ ಎಸಿ ನಿಯಮಗಳು; ಉಷ್ಣಾಂಶ 20 ಡಿಗ್ರಿಗಿಂತ ಕಡಿಮೆಗೆ ಇಳಿಸುವಂತಿಲ್ಲ; ಗರಿಷ್ಠ ಉಷ್ಣಾಂಶಕ್ಕೂ ಮಿತಿ
ಇನ್ನು ಇನ್ಫೋಸಿಸ್ನ ಪ್ರಮುಖ ಕ್ಲೈಂಟ್ ಆದ ಡೈಮ್ಲರ್ ಎಜಿ ಕಂಪನಿ ಕೂಡ ಕಡಿಮೆ ಬ್ಯುಸಿನೆಸ್ ನೀಡಿದೆ. ಡೈಮ್ಲರ್ ಜರ್ಮನಿಯ ಆಟೊಮೋಟಿವ್ ಕಂಪನಿಯಾಗಿದೆ.
ಇತರ ಸಣ್ಣ ಐಟಿ ಕಂಪನಿಗಳ ಸ್ಥಿತಿಯೂ ಇದೇ ರೀತಿಯದ್ದಿದೆ. ದಿ ಮಿಂಟ್ ಪತ್ರಿಕೆಯ ವರದಿ ಪ್ರಕಾರ ಹೆಕ್ಸಾವೇರ್ ಟೆಕ್ನಾಲಜೀಸ್ ಸಂಸ್ಥೆಯು ಫ್ಯಾನೀ ಮೀ ಕಂಪನಿಯಿಂದ ಕಡಿಮೆ ಬ್ಯುಸಿನೆಸ್ ಪಡೆದಿದೆ. ಫ್ಯಾನೀ ಮೀ ಹೆಕ್ಸಾವೇರ್ ಟೆಕ್ನಾಲಜೀಸ್ನ ಮೂರು ಪ್ರಮುಖ ಕ್ಲೈಂಟ್ಗಳಲ್ಲಿ ಒಂದು.
ಎಂಫೇಸಿಸ್ಗೆ ಫೆಡೆಕ್ಸ್ ಬ್ಯುಸಿನಸ್ ಕಡಿಮೆಗೊಂಡಿದೆ. ಎಲ್ಟಿಐ ಮೈಂಡ್ಟ್ರೀ ಮತ್ತು ಸೊನಾಟ ಸಾಫ್ಟ್ವೇರ್ ಕಂಪನಿಗಳಿಗೆ ಮೈಕ್ರೋಸಾಫ್ಟ್ನಿಂದ ಸಿಗುತ್ತಿದ್ದ ಬ್ಯುಸಿನೆಸ್ ಕೂಡ ತಗ್ಗಿದೆ ಎಂದು ಲೈವ್ ಮಿಂಟ್ ಪತ್ರಿಕೆ ವರದಿ ಮಾಡಿದೆ.
ಇದನ್ನೂ ಓದಿ: ಅಂಡಮಾನ್ ಬಳಿ ಎರಡು ಲಕ್ಷ ಕೋಟಿ ಲೀಟರ್ ಕಚ್ಛಾ ತೈಲ ನಿಕ್ಷೇಪ? ಭಾರತದ ಆರ್ಥಿಕ ಬೆಳವಣಿಗೆಗೆ ರಾಕೆಟ್ ವೇಗ ಕೊಡಬಲ್ಲುದು ಈ ಸಂಗ್ರಹ
ಭಾರತದ ಐಟಿ ವಲಯದ ಒಟ್ಟಾರೆ ಆದಾಯದಲ್ಲಿ ಗಣನೀಯ ಎನಿಸುವಷ್ಟು ಆದಾಯ ಕುಸಿತ ಆಗಿಲ್ಲ. ಆದರೆ, ಕೆಲ ಐಟಿ ಕಂಪನಿಗಳ ಪ್ರಮುಖ ಕ್ಲೈಂಟ್ಗಳಿಂದ ಗಮನಾರ್ಹ ಎನಿಸುವಷ್ಟು ಬ್ಯುಸಿನೆಸ್ ಡೌನ್ ಆಗಿರುವುದು ವಾಸ್ತವ ಎಂದೆನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಐಟಿ ಕಂಪನಿಗಳಿಂದ ಅಧಿಕೃತ ಹೇಳಿಕೆ ಬಂದಿಲ್ಲ.
ಕಂಪನಿಗಳಿಗೆ ಆದಾಯ ಕಡಿಮೆ ಆದರೆ ಸಹಜವಾಗಿ ವೆಚ್ಚ ಕಡಿತಕ್ಕೆ ಮುಂದಾಗುತ್ತವೆ. ಪರಿಣಾಮವಾಗಿ ಉದ್ಯೋಗ ಕಡಿತಕ್ಕೆ ಮುಂದಾಗುವ ಸಾಧ್ಯತೆ ಇಲ್ಲದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




