AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆ ಪಕ್ಕದ ಕಟ್ಟೆ ಮೇಲೆ ಕುಳಿತು ಘರ್ಜಿಸಿದ ಹುಲಿ: ಅಪರೂಪದ ದೃಶ್ಯ ಇಲ್ಲಿದೆ

ರಸ್ತೆ ಪಕ್ಕದ ಕಟ್ಟೆ ಮೇಲೆ ಕುಳಿತು ಘರ್ಜಿಸಿದ ಹುಲಿ: ಅಪರೂಪದ ದೃಶ್ಯ ಇಲ್ಲಿದೆ

ರಾಮ್​, ಮೈಸೂರು
| Updated By: ರಮೇಶ್ ಬಿ. ಜವಳಗೇರಾ|

Updated on:Jun 17, 2025 | 4:17 PM

Share

ಹೆಚ್ ಡಿ ಕೋಟೆ ತಾಲ್ಲೂಕು ಕಬಿನಿ ಹಿನ್ನೀರಿನಲ್ಲಿ ಮತ್ತೊಂದು ಹುಲಿ ಪ್ರತ್ಯಕ್ಷವಾಗಿದೆ. ದಮ್ಮನಕಟ್ಟೆ ಸಫಾರಿ ವೇಳೆ ರಸ್ತೆ ಪಕ್ಕದ ಒಂದು ಸೇತುವೆ ಮೇಲೆ ಕುಳಿತು ಜೋರಾಗಿ ಘರ್ಜನೆ ಮಾಡುತ್ತಿದ್ದು, ಈ ಅಪರೂಪದ ದೃಶ್ಯ ಹವ್ಯಾಸಿ ಛಾಯಾಗ್ರಾಹಕ ಲೇಖನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹುಲಿರಾಯನ ಘರ್ಜನೆ ಭಯಬೀಳಿಸುವಂತಿದೆ.

ಮೈಸೂರು, (ಜೂನ್ 17): ಹೆಚ್ ಡಿ ಕೋಟೆ ತಾಲ್ಲೂಕು ಕಬಿನಿ ಹಿನ್ನೀರಿನಲ್ಲಿ ಮತ್ತೊಂದು ಹುಲಿ ಪ್ರತ್ಯಕ್ಷವಾಗಿದೆ. ದಮ್ಮನಕಟ್ಟೆ ಸಫಾರಿ ವೇಳೆ ರಸ್ತೆ ಪಕ್ಕದ ಒಂದು ಸೇತುವೆ ಮೇಲೆ ಕುಳಿತು ಜೋರಾಗಿ ಘರ್ಜನೆ ಮಾಡುತ್ತಿದ್ದು, ಈ ಅಪರೂಪದ ದೃಶ್ಯ ಹವ್ಯಾಸಿ ಛಾಯಾಗ್ರಾಹಕ ಲೇಖನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹುಲಿರಾಯನ ಘರ್ಜನೆ ಭಯಬೀಳಿಸುವಂತಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟೆ ವೈರಲ್ ಆಗಿದ್ದು, ಇದು ಹುಣಸೂರು ತಾಲ್ಲೂಕು ಗುರುಪುರ ಗ್ರಾಮದ ರಸ್ತೆ ಎಂದು ನೆಟ್ಟಿಗರು ಹೇಳುತ್ತುದ್ದಾರೆ. ಹೀಗಾಗಿ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಹುಲಿ ಭೀತಿ ಶುರುವಾಗಿದ್ದು, ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

Published on: Jun 17, 2025 04:08 PM