Income Tax Rule: ಏಪ್ರಿಲ್ 1ರಿಂದ ಆದಾಯ ತೆರಿಗೆ ನಿಯಮಾವಳಿಗಳಲ್ಲಿ ಹೊಸ ಬದಲಾವಣೆ ಜಾರಿ

ಆದಾಯ ತೆರಿಗೆಯ ಹೊಸ ನಿಯಮಗಳು ಏಪ್ರಿಲ್ 1, 2022ರಿಂದ ಜಾರಿಗೆ ಬರುತ್ತವೆ. ಯಾವುದೆಲ್ಲ ಹೊಸ ನಿಯಮಗಳು ಎಂಬ ವಿವರಣೆ ಈ ಲೇಖನದಲ್ಲಿ ಇದೆ.

Income Tax Rule: ಏಪ್ರಿಲ್ 1ರಿಂದ ಆದಾಯ ತೆರಿಗೆ ನಿಯಮಾವಳಿಗಳಲ್ಲಿ ಹೊಸ ಬದಲಾವಣೆ ಜಾರಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Apr 01, 2022 | 1:21 PM

2022-23ರ ಹಣಕಾಸು ವರ್ಷದಿಂದ ಆದಾಯ ತೆರಿಗೆ (Income Tax) ನಿಯಮಗಳಲ್ಲಿ ಹಲವು ಬದಲಾವಣೆಗಳು ಆಗಲಿವೆ. ಕ್ರಿಪ್ಟೋ ಆಸ್ತಿಗಳ ಮೇಲಿನ ಆದಾಯ ತೆರಿಗೆ, ಅಪ್​ಡೇಟೆಡ್​ ರಿಟರ್ನ್‌ಗಳ ಫೈಲಿಂಗ್, ಇಪಿಎಫ್ ಬಡ್ಡಿಯ ಮೇಲಿನ ಹೊಸ ತೆರಿಗೆ ನಿಯಮಗಳು ಮತ್ತು ಕೊವಿಡ್-19 ಚಿಕಿತ್ಸೆಯ ಮೇಲಿನ ತೆರಿಗೆ ವಿನಾಯಿತಿಗಳು 2022ರ ಏಪ್ರಿಲ್​ 1ರಿಂದ ಜಾರಿಗೆ ಬರುವ ಕೆಲವು ಪ್ರಮುಖ ಬದಲಾವಣೆಗಳಾಗಿವೆ. ಆದಾಯ ತೆರಿಗೆಯಲ್ಲಿ 7 ಪ್ರಮುಖ ಬದಲಾವಣೆಗಳು ಜಾರಿಗೆ ಬರುತ್ತವೆ.

1) ಕ್ರಿಪ್ಟೋ ತೆರಿಗೆ ಭಾರತದಲ್ಲಿ ಕ್ರಿಪ್ಟೋ ಆಸ್ತಿ ತೆರಿಗೆಯು ಏಪ್ರಿಲ್ 1ರಿಂದ ಪ್ರಾರಂಭ ಆಗುವ ಹಣಕಾಸು ವರ್ಷದಲ್ಲಿ ಕ್ರಮೇಣವಾಗಿ ಅನ್ವಯ ಆಗುತ್ತದೆ. ಶೇ 30ರಷ್ಟು ತೆರಿಗೆ ಮೇಲಿನ ನಿಬಂಧನೆ ಹಣಕಾಸಿನ ವರ್ಷದ ಆರಂಭದಲ್ಲಿ ಪರಿಣಾಮಕಾರಿ ಆಗುತ್ತದೆ ಮತ್ತು ಶೇ 1ರಷ್ಟು ಟಿಡಿಎಸ್​ ಜುಲೈ 1, 2022ರಿಂದ ಜಾರಿಗೆ ಬರುತ್ತದೆ. 2022-23ರ ಬಜೆಟ್​ನಲ್ಲಿ ಕ್ರಿಪ್ಟೋ ಆಸ್ತಿಗಳ ಮೇಲೆ ಆದಾಯ ತೆರಿಗೆ ವಿಧಿಸುವ ಬಗ್ಗೆ ಸ್ಪಷ್ಟತೆ ನೀಡಲಾಗಿದೆ. ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ತಮ್ಮ ಖಾತೆಗಳನ್ನು ಆಡಿಟ್ ಮಾಡಬೇಕಾದ ವ್ಯಕ್ತಿಗಳು/ಹಿಂದೂ ಅವಿಭಕ್ತ ಕುಟುಂಬಗಳನ್ನು ಒಳಗೊಂಡಿರುವ ನಿರ್ದಿಷ್ಟ ವ್ಯಕ್ತಿಗಳಿಗೆ ಟಿಡಿಎಸ್​ ಮಿತಿಯು ವರ್ಷಕ್ಕೆ 50,000 ರೂಪಾಯಿ ಆಗಿರುತ್ತದೆ.

2) ಉಡುಗೊರೆಯಾಗಿ ಸ್ವೀಕರಿಸಿದ ಕ್ರಿಪ್ಟೋಗೆ ತೆರಿಗೆ ಕ್ರಿಪ್ಟೋಕರೆನ್ಸಿ ಅಥವಾ ಇನ್ನಾವುದೇ ವರ್ಚುವಲ್ ಡಿಜಿಟಲ್ ಆಸ್ತಿಯ ರೂಪದಲ್ಲಿ ಉಡುಗೊರೆಯನ್ನು ಸ್ವೀಕರಿಸಿದರೆ ಅದಕ್ಕೆ ಉಡುಗೊರೆಯಾಗಿ ತೆರಿಗೆ ಪಾವತಿಸಬೇಕಿರುತ್ತದೆ.

3) ಕ್ರಿಪ್ಟೋ ಲಾಭಗಳು ಅಥವಾ ಇತರ ಆಸ್ತಿಗಳ ವಿರುದ್ಧ ಕ್ರಿಪ್ಟೋ ನಷ್ಟ ಹೊಂದಿಸುವುದಿಲ್ಲ ಕ್ರಿಪ್ಟೋ ಹೋಲ್ಡಿಂಗ್‌ನ ಇನ್ನೊಂದು ಆವೃತ್ತಿಯಿಂದ ಬರುವ ಆದಾಯದ ವಿರುದ್ಧ ನಿರ್ದಿಷ್ಟ ಡಿಜಿಟಲ್ ಆಸ್ತಿಯಲ್ಲಿ ಉಂಟಾದ ನಷ್ಟವನ್ನು ಅನುಮತಿಸದೆ ಇರುವ ಮೂಲಕ ಭಾರತ ಸರ್ಕಾರವು ಕ್ರಿಪ್ಟೋಗೆ ನಿಯಮಗಳನ್ನು ಬಿಗಿಗೊಳಿಸಿದೆ. ಕ್ರಿಪ್ಟೋ ಆಸ್ತಿಗಳನ್ನು ಮೈನಿಂಗ್ ಮಾಡುವಾಗ ತಗುಲುವ ಮೂಲಸೌಕರ್ಯ ವೆಚ್ಚಗಳ ಮೇಲೆ ತೆರಿಗೆ ವಿನಾಯಿತಿಗಳನ್ನು ಸರ್ಕಾರವು ಅನುಮತಿಸುವುದಿಲ್ಲ ಏಕೆಂದರೆ ಅದನ್ನು ಸ್ವಾಧೀನಪಡಿಸಿಕೊಳ್ಳುವ ವೆಚ್ಚವೆಂದು ಪರಿಗಣಿಸಲಾಗುವುದಿಲ್ಲ. ಉದಾಹರಣೆಗೆ, ಬಿಟ್‌ಕಾಯಿನ್‌ನಲ್ಲಿ ರೂ. 1000 ಗಳಿಕೆಯನ್ನು ಮತ್ತು ಎಥೆರಿಯಂನಲ್ಲಿ ರೂ.700 ನಷ್ಟವನ್ನು ಕಂಡರೆ, ರೂ. 1000 ಮೇಲೆ ತೆರಿಗೆಯನ್ನು ಪಾವತಿಸಬೇಕೇ ಹೊರತು ರೂ. 300 ನಿವ್ವಳ ಲಾಭದ ಮೇಲೆ ಅಲ್ಲ. ಅದೇ ರೀತಿ, ಸ್ಟಾಕ್‌ಗಳು, ಮ್ಯೂಚುವಲ್ ಫಂಡ್‌ಗಳು ಅಥವಾ ರಿಯಲ್ ಎಸ್ಟೇಟ್‌ನಂತಹ ಇತರ ಸ್ವತ್ತುಗಳಲ್ಲಿನ ಲಾಭಗಳು ಮತ್ತು ನಷ್ಟಗಳ ವಿರುದ್ಧ ಕ್ರಿಪ್ಟೋಕರೆನ್ಸಿಯಲ್ಲಿನ ಲಾಭ ಮತ್ತು ನಷ್ಟಗಳನ್ನು ಹೊಂದಿಸಲು ಸಾಧ್ಯವಿಲ್ಲ.

4) ಅಪ್​ಡೇಟೆಡ್ ಐಟಿ ರಿಟರ್ನ್ ಸಲ್ಲಿಕೆ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಮಾಡಿದ ದೋಷಗಳು ಅಥವಾ ತಪ್ಪುಗಳಿಗಾಗಿ ಅಪ್​ಡೇಟೆಡ್ ರಿಟರ್ನ್ ಅನ್ನು ಸಲ್ಲಿಸಲು ತೆರಿಗೆದಾರರಿಗೆ ಅನುಮತಿಸುವ ಹೊಸ ನಿಯಮಾವಳಿ ಸೇರಿಸಲಾಗಿದೆ. ತೆರಿಗೆದಾರರು ಈಗ ಸಂಬಂಧಿತ ಅಸೆಸ್​ಮೆಂಟ್​ ವರ್ಷದ ಅಂತ್ಯದಿಂದ ಎರಡು ವರ್ಷಗಳೊಳಗೆ ಅಪ್​ಡೇಟೆಡ್ ರಿಟರ್ನ್ ಅನ್ನು ಸಲ್ಲಿಸಬಹುದು.

5) ರಾಜ್ಯ ಸರ್ಕಾರಿ ನೌಕರರಿಗೆ ಎನ್​ಪಿಎಸ್ ಕಡಿತ ರಾಜ್ಯ ಸರ್ಕಾರಿ ನೌಕರರು ಈಗ ತಮ್ಮ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇ 14ರ ವರೆಗೆ ಉದ್ಯೋಗದಾತರಿಂದ ಎನ್​ಪಿಎಸ್​ ಕೊಡುಗೆಗಾಗಿ ಸೆಕ್ಷನ್ 80CCD(2) ಅಡಿಯಲ್ಲಿ ಕಡಿತವನ್ನು ಪಡೆಯಲು ಸಾಧ್ಯವಾಗುತ್ತದೆ, ಇದು ಕೇಂದ್ರ ಸರ್ಕಾರಿ ನೌಕರರಿಗೆ ಲಭ್ಯವಿರುವ ಕಡಿತಕ್ಕೆ ಅನುಗುಣವಾಗಿರುತ್ತದೆ.

6) ಪಿಎಫ್ ಖಾತೆಯ ಮೇಲಿನ ತೆರಿಗೆ ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು (CBDT) ಆದಾಯ ತೆರಿಗೆ (25ನೇ ತಿದ್ದುಪಡಿ) ನಿಯಮ 2021 ಅನ್ನು ಏಪ್ರಿಲ್ 1ರಿಂದ ಜಾರಿಗೆ ತರಲು ನಿರ್ಧರಿಸಿದೆ. ಇದರರ್ಥ 2.5 ಲಕ್ಷದವರೆಗಿನ ತೆರಿಗೆ-ಮುಕ್ತ ಕೊಡುಗೆಗಳ ಮಿತಿಯನ್ನು ನೌಕರರ ಭವಿಷ್ಯ ನಿಧಿ ಖಾತೆಗೆ ವಿಧಿಸಲಾಗುತ್ತಿದೆ (ಇಪಿಎಫ್). ಇದಕ್ಕಿಂತ ಹೆಚ್ಚಿನ ಕೊಡುಗೆಯನ್ನು ನೀಡಿದರೆ ಬಡ್ಡಿ ಆದಾಯಕ್ಕೆ ತೆರಿಗೆ ವಿಧಿಸಲಾಗುತ್ತದೆ.

7) LTCG ಮೇಲಿನ ಸರ್​ಚಾರ್ಜ್ ಸದ್ಯಕ್ಕೆ ಲಿಸ್ಟ್​ ಮಾಡಿದ ಈಕ್ವಿಟಿ ಅಥವಾ ಮ್ಯೂಚುವಲ್ ಫಂಡ್‌ಗಳ ಮಾರಾಟದ ಮೇಲೆ ದೀರ್ಘಾವಧಿ ಬಂಡವಾಳ ಲಾಭದ ಮೇಲೆ ಶೇ 15ರಷ್ಟು ಹೆಚ್ಚುವರಿ ಶುಲ್ಕದ ಮಿತಿ ಇದೆ. 1ನೇ ಏಪ್ರಿಲ್ 2022ರಿಂದ ಈ ಮಿತಿಯನ್ನು ಎಲ್ಲ ಸ್ವತ್ತುಗಳ ಮೇಲೆ ದೀರ್ಘಾವಧಿಯ ಬಂಡವಾಳ ಲಾಭಕ್ಕೆ ವಿಸ್ತರಿಸಲಾಗುತ್ತದೆ.

8) ಸೆಕ್ಷನ್ 80EEA ಅಡಿ ಬೆನಿಫಿಟ್ ತೆಗೆಯಲಾಗುವುದು ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ರೂ. 45 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಆಸ್ತಿಗಳ ಮೇಲೆ ರೂ. 1.5 ಲಕ್ಷದವರೆಗಿನ ಗೃಹ ಸಾಲದ ಬಡ್ಡಿಯ ಮೇಲೆ ಹೆಚ್ಚುವರಿ ಕಡಿತವಿದೆ. ಹಣಕಾಸು ಸಚಿವೆ ಈ ಯೋಜನೆಯನ್ನು ಮಾರ್ಚ್ 31, 2022ರ ನಂತರ ವಿಸ್ತರಿಸಿಲ್ಲ. ಆದ್ದರಿಂದ ರೂ. 1.5 ಲಕ್ಷದ ಈ ಹೆಚ್ಚುವರಿ ಕಡಿತವು 1 ಏಪ್ರಿಲ್ 2022ರಿಂದ ತೆರಿಗೆದಾರರಿಗೆ ಲಭ್ಯ ಇರುವುದಿಲ್ಲ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 24ರ ಅಡಿಯಲ್ಲಿ ರೂ. 2 ಲಕ್ಷದವರೆಗಿನ ಗೃಹ ಸಾಲದ ಬಡ್ಡಿಯ ಖಾತೆಯಲ್ಲಿ ಅಸ್ತಿತ್ವದಲ್ಲಿರುವ ಇತರ ಕಡಿತಗಳನ್ನು ಮುಂದುವರಿಸಲಾಗುವುದು.

9) ಕೊವಿಡ್-19 ಚಿಕಿತ್ಸಾ ವೆಚ್ಚಗಳ ಮೇಲಿನ ತೆರಿಗೆ ವಿನಾಯಿತಿ 2021ರ ಜೂನ್ ತಿಂಗಳ ಪತ್ರಿಕಾ ಪ್ರಕಟಣೆ ಪ್ರಕಾರ, ಕೊವಿಡ್ ವೈದ್ಯಕೀಯ ಚಿಕಿತ್ಸೆಗಾಗಿ ಹಣವನ್ನು ಪಡೆದ ವ್ಯಕ್ತಿಗಳಿಗೆ ತೆರಿಗೆ ವಿನಾಯಿತಿಯನ್ನು ಒದಗಿಸಲಾಗಿದೆ. ಅದೇ ರೀತಿ ಕೊವಿಡ್‌ನಿಂದ ವ್ಯಕ್ತಿಯ ಮರಣದ ನಂತರ ಕುಟುಂಬ ಸದಸ್ಯರು ಸ್ವೀಕರಿಸುವ ಹಣಕ್ಕೆ ರೂ. 10 ಲಕ್ಷದವರೆಗೆ ವಿನಾಯಿತಿ ನೀಡಲಾಗುತ್ತದೆ. ಮರಣದ ದಿನಾಂಕದಿಂದ 12 ತಿಂಗಳೊಳಗೆ ಅಂತಹ ಪಾವತಿಯನ್ನು ಸ್ವೀಕರಿಸಿದರೆ ಕುಟುಂಬದ ಸದಸ್ಯರಿಗೆ ವಿನಾಯಿತಿ ಸಿಗುತ್ತದೆ. ಈ ತಿದ್ದುಪಡಿಯು ಏಪ್ರಿಲ್ 1, 2020ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ.

10) ಅಂಗ ವೈಕಲ್ಯ ಇರುವ ವ್ಯಕ್ತಿಗಳಿಗೆ ತೆರಿಗೆ ವಿನಾಯಿತಿ ಅಂಗ ವೈಕಲ್ಯ ಇರುವ ವ್ಯಕ್ತಿಯ ಪೋಷಕರು ಅಥವಾ ಪಾಲಕರು ಅಂತಹ ವ್ಯಕ್ತಿಗೆ ವಿಮಾ ಯೋಜನೆಯನ್ನು ತೆಗೆದುಕೊಳ್ಳಬಹುದು.

ಇದನ್ನೂ ಓದಿ: Income Tax Return Filing: ಆದಾಯ ತೆರಿಗೆ ರಿಟರ್ನ್​ನ ಈ ನಿಯಮ ಉಲ್ಲಂಘನೆಯಿಂದ ದಂಡ ಪಾವತಿ ಜತೆ ಜೈಲು ಶಿಕ್ಷೆ

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM