IDFC First Bank: ಐಡಿಎಫ್​ಸಿ ಬ್ಯಾಂಕ್​ ಉಳಿತಾಯ ಖಾತೆ ಬಡ್ಡಿ ದರಗಳಲ್ಲಿ ಹೆಚ್ಚಳ; ಏಪ್ರಿಲ್ 1ರಿಂದ ಜಾರಿ

ಐಡಿಎಫ್​ಸಿ ಫಸ್ಟ್​ ಬ್ಯಾಂಕ್​ನಿಂದ ಉಳಿತಾಯ ಖಾತೆ ಮೇಲಿನ ಬಡ್ಡಿ ದರವನ್ನು ಏಪ್ರಿಲ್ 1ನೇ ತಾರೀಕಿನ 2022ರಿಂದ ಹೆಚ್ಚಳ ಮಾಡಲಾಗುವುದು ಎಂದು ತಿಳಿಸಲಾಗಿದೆ.

IDFC First Bank: ಐಡಿಎಫ್​ಸಿ ಬ್ಯಾಂಕ್​ ಉಳಿತಾಯ ಖಾತೆ ಬಡ್ಡಿ ದರಗಳಲ್ಲಿ ಹೆಚ್ಚಳ; ಏಪ್ರಿಲ್ 1ರಿಂದ ಜಾರಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Mar 27, 2022 | 7:49 AM

ಖಾಸಗಿ ವಲಯದ ಬ್ಯಾಂಕ್​ ಆದ ಐಡಿಎಫ್‌ಸಿ ಫಸ್ಟ್ ಬ್ಯಾಂಕ್​ನಿಂದ ಉಳಿತಾಯ ಖಾತೆಗಳ (Savings Account) ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದೆ. ಗ್ರಾಹಕರು ಈಗ ಏಪ್ರಿಲ್ 1, 2022ರಿಂದ ಅನ್ವಯ ಆಗುವಂತೆ ತಮ್ಮ ಉಳಿತಾಯ ಖಾತೆಗಳ ಮೇಲೆ ಶೇ 6ರ ವರೆಗೆ (ಇದು ಮೊದಲು ಶೇ 5 ಆಗಿತ್ತು) ಬಡ್ಡಿಯನ್ನು ಗಳಿಸಬಹುದು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಗಸೂಚಿಗಳ ಪ್ರಕಾರ, ಉಳಿತಾಯ ಬ್ಯಾಂಕ್ ಖಾತೆಗಳ ಮೇಲಿನ ಬಡ್ಡಿಯನ್ನು ದೈನಂದಿನವಾಗಿ ದಿನದ ಕೊನೆಯಲ್ಲಿ ಇರುವ ಬ್ಯಾಲೆನ್ಸ್​ನಲ್ಲಿ ನಿರ್ಧರಿಸಲಾಗುತ್ತದೆ. ಐಡಿಎಫ್​ಸಿ ಫಸ್ಟ್​ ಬ್ಯಾಂಕ್​ನಿಂದ ಬಡ್ಡಿಯನ್ನು ಮಾಸಿಕ ಆಧಾರದ ಮೇಲೆ ಪಾವತಿಸಲಾಗುತ್ತದೆ.

ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಉಳಿತಾಯ ಖಾತೆ ಹೊಸ ಬಡ್ಡಿ ದರಗಳು ಹೊಂದಾಣಿಕೆಯ ನಂತರ, ಬ್ಯಾಂಕ್ ಈಗ ರೂ. 1 ಲಕ್ಷಕ್ಕಿಂತ ಕಡಿಮೆ ಉಳಿತಾಯ ಖಾತೆಯ ಬ್ಯಾಲೆನ್ಸ್‌ಗಳ ಮೇಲೆ ಶೇಕಡಾ 4.00ರ ಬಡ್ಡಿ ದರವನ್ನು ಮತ್ತು ರೂ. 1 ಲಕ್ಷಕ್ಕಿಂತ ಹೆಚ್ಚು ಹಾಗೂ 10 ಲಕ್ಷಕ್ಕಿಂತ ಕಡಿಮೆ ಬ್ಯಾಲೆನ್ಸ್ ಇದ್ದಲ್ಲಿ ಶೇಕಡಾ 4.50 ಬಡ್ಡಿ ದರವನ್ನು ಒದಗಿಸುತ್ತದೆ. ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಈಗ 10 ಲಕ್ಷಕ್ಕಿಂತ ಹೆಚ್ಚು ಆದರೆ 25 ಲಕ್ಷಕ್ಕಿಂತ ಕಡಿಮೆ ಇರುವ ಉಳಿತಾಯ ಖಾತೆಯ ಬ್ಯಾಲೆನ್ಸ್‌ಗಳ ಮೇಲೆ ಶೇ 5.00ರ ಬಡ್ಡಿ ದರವನ್ನು ನೀಡುತ್ತಿದೆ. ಉಳಿತಾಯ ಖಾತೆಯ ಗ್ರಾಹಕರು ಈಗ 25 ಲಕ್ಷ ರೂಪಾಯಿಗಳಿಂದ 1 ಕೋಟಿಗಿಂತ ಕಡಿಮೆ ಮೊತ್ತದ ಬ್ಯಾಲೆನ್ಸ್‌ಗಳ ಮೇಲೆ ಗರಿಷ್ಠ ಶೇ 6ರ ಬಡ್ಡಿದರವನ್ನು ಪಡೆಯುತ್ತಾರೆ.

ರೂ. 1 ಕೋಟಿಗಿಂತ ಹೆಚ್ಚಿನ, ಆದರೆ ರೂ. 100 ಕೋಟಿಗಿಂತ ಕಡಿಮೆ ಇರುವ ದೈನಂದಿನ ಅಂತ್ಯದ ಬಾಕಿಗಳ ಮೇಲಿನ ಬಡ್ಡಿ ದರವು ಈಗ ಶೇಕಡ 5.00 ಆಗಿರುತ್ತದೆ. 100 ಕೋಟಿ ರೂಪಾಯಿಗಳಿಂದ 200 ಕೋಟಿ ರೂಪಾಯಿಗಿಂತ ಕಡಿಮೆ ಇರುವ ದಿನದ ಅಂತ್ಯದ ಬಾಕಿಗಳ ಮೇಲಿನ ಬಡ್ಡಿ ದರವು ಈಗ ಶೇಕಡಾ 4.50 ಆಗಿರುತ್ತದೆ. ಇನ್ನು 200 ಕೋಟಿ ರೂಪಾಯಿಗಿಂತ ಬ್ಯಾಲೆನ್ಸ್ ಹೆಚ್ಚಿದ್ದಲ್ಲಿ ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಶೇ 3.50ರ ಬಡ್ಡಿ ದರವನ್ನು ನೀಡುತ್ತದೆ. ಈ ದರಗಳು ಏಪ್ರಿಲ್ 1, 2022ರಂದು ಜಾರಿಗೆ ಬರುತ್ತವೆ. “1ನೇ ಏಪ್ರಿಲ್ 2022ರಿಂದ ಉಳಿತಾಯ ಖಾತೆಯಲ್ಲಿ ಶೇ 6ರ ವರೆಗೆ ಬಡ್ಡಿದರಗಳನ್ನು ಗಳಿಸಿ” ಎಂದು ಬ್ಯಾಂಕ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದೆ.

ಬ್ಯಾಲೆನ್ಸ್ (ರೂಪಾಯಿಗಳು)                                                                           ಬಡ್ಡಿ ದರ (ವಾರ್ಷಿಕ)  1 ಲಕ್ಷಕ್ಕಿಂತ ಕಡಿಮೆ ಅಥವಾ ಸಮ                                                                           ಶೇ 4.00 1 ಲಕ್ಷಕ್ಕಿಂತ ಹೆಚ್ಚು ಅಥವಾ 10 ಲಕ್ಷಕ್ಕಿಂತ ಕಡಿಮೆ ಅಥವಾ ಸಮ                         ಶೇ 4.50 10 ಲಕ್ಷಕ್ಕಿಂತ ಹೆಚ್ಚು 25 ಲಕ್ಷಕ್ಕಿಂತ ಕಡಿಮೆ ಅಥವಾ ಸಮ                                      ಶೇ 5 25 ಲಕ್ಷಕ್ಕಿಂತ ಹೆಚ್ಚು 1 ಕೋಟಿಗಿಂತ ಕಡಿಮೆ ಅಥವಾ ಸಮ                                    ಶೇ 6 1 ಕೋಟಿಗಿಂತ ಹೆಚ್ಚು 100 ಕೋಟಿಗಿಂತ ಕಡಿಮೆ ಅಥವಾ ಸಮ                              ಶೇ 5 100 ಕೋಟಿಗಿಂತ ಹೆಚ್ಚು 200 ಕೋಟಿಗಿಂತ ಕಡಿಮೆ ಅಥವಾ ಸಮ                       ಶೇ 4.50 200 ಕೋಟಿಗಿಂತ ಹೆಚ್ಚು                                                                                           ಶೇ 3.50

ಮೂಲ: ಬ್ಯಾಂಕ್​ ವೆಬ್​ಸೈಟ್ (ಏಪ್ರಿಲ್ 1, 2022ರಿಂದ ಜಾರಿ)​

ಇದನ್ನೂ ಓದಿ: Bandhan Bank: ಉಳಿತಾಯ ಖಾತೆ ಮೇಲೆ ಈ ಬ್ಯಾಂಕ್​ನಲ್ಲಿ ಸಿಗಲಿದೆ ಶೇ 6ರ ಬಡ್ಡಿ

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು