Bandhan Bank: ಉಳಿತಾಯ ಖಾತೆ ಮೇಲೆ ಈ ಬ್ಯಾಂಕ್ನಲ್ಲಿ ಸಿಗಲಿದೆ ಶೇ 6ರ ಬಡ್ಡಿ
ಬಂಧನ್ ಬ್ಯಾಂಕ್ನಿಂದ ಉಳಿತಾಯ ಖಾತೆ ಮೇಲೆ ಶೇ 6ರ ಬಡ್ಡಿ ನೀಡಲಾಗುತ್ತದೆ. ಆ ಬಗ್ಗೆ ಸಂಪೂರ್ಣವಾದ ವಿವರ ಈ ಲೇಖನದಲ್ಲಿ ಇದೆ.
ಬಂಧನ್ ಬ್ಯಾಂಕ್ ತನ್ನ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರವನ್ನು ಪರಿಷ್ಕರಿಸಿದೆ. ಹೊಸ ಗ್ರಾಹಕರನ್ನು ತನ್ನ ಉಳಿತಾಯದ ಆಯ್ಕೆಗಳಿಗೆ ಆಕರ್ಷಿಸುವ ಪ್ರಯತ್ನದಲ್ಲಿ ಬ್ಯಾಂಕ್ನಿಂದ ಬಡ್ಡಿದರಗಳನ್ನು ಶೇ 6ರ ವರೆಗೆ ಪರಿಷ್ಕರಿಸಿದೆ. ಇತ್ತೀಚಿನ ದಿನಗಳಲ್ಲಿ ಬಡ್ಡಿದರದಲ್ಲಿ ನಿಧಾನಗತಿಯ ಕುಸಿತ ಕಂಡುಬಂದಿದೆ. ಸದ್ಯಕ್ಕೆ ಬಂಧನ್ ಬ್ಯಾಂಕ್ ಉಳಿತಾಯ ಬಡ್ಡಿ ದರವು ಮಾರುಕಟ್ಟೆಯಲ್ಲಿ ಅತ್ಯಧಿಕವಾಗಿದೆ. ಇದನ್ನು ಗಮನದಲ್ಲಿ ಇರಿಸಲು, ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್ಬಿಐ ಉಳಿತಾಯ ಖಾತೆಗಳ ಮೇಲೆ ಕೇವಲ ಶೇ 2.7ರಷ್ಟು ವಾರ್ಷಿಕ ಲಾಭವನ್ನು ನೀಡುತ್ತಿದೆ ಎಂಬುದನ್ನು ಗಮನಿಸಬೇಕು. ಬಂಧನ್ ಬ್ಯಾಂಕ್‌ನ ಹೊಸ ಬಡ್ಡಿ ದರಗಳು ನವೆಂಬರ್ 1, 2021ರಿಂದ ಅನ್ವಯವಾಗುತ್ತವೆ. ಆದರೂ ಶೇ 6ರ ಬಡ್ಡಿಯು ಬ್ಯಾಂಕಿನ ಸ್ಲ್ಯಾಬ್‌ನಲ್ಲಿ ಅತ್ಯಧಿಕ ದರವಾಗಿದೆ ಮತ್ತು ಎಲ್ಲ ಖಾತೆದಾರರಿಗೆ ಅನ್ವಯಿಸುವುದಿಲ್ಲ.
ಬಂಧನ್ ಬ್ಯಾಂಕ್ ಉಳಿತಾಯ ಬಡ್ಡಿ ದರ 10 ಲಕ್ಷ ರೂಪಾಯಿ ಮತ್ತು 2 ಕೋಟಿ ರೂಪಾಯಿವರೆಗಿನ ಕನಿಷ್ಠ ದೈನಂದಿನ ಬ್ಯಾಲೆನ್ಸ್ ಹೊಂದಿರುವ ದೇಶೀಯ ಮತ್ತು ಅನಿವಾಸಿ ಉಳಿತಾಯ ಬ್ಯಾಂಕ್ ಖಾತೆಗಳಿಗೆ ಗರಿಷ್ಠ ಶೇ 6ರ ಬಡ್ಡಿ ದರವು ಅನ್ವಯಿಸುತ್ತದೆ. ರೂ. 1 ಲಕ್ಷದವರೆಗಿನ ದೈನಂದಿನ ಬ್ಯಾಲೆನ್ಸ್ ಹೊಂದಿರುವ ಉಳಿತಾಯ ಖಾತೆಗಳಿಗೆ ನೀಡುವ ಬಡ್ಡಿಯು ರೂ. 1 ಲಕ್ಷ ಮತ್ತು 10 ಲಕ್ಷದ ಮಧ್ಯದ ದೈನಂದಿನ ಬ್ಯಾಲೆನ್ಸ್ ಮಿತಿಯನ್ನು ಹೊಂದಿರುವ ಖಾತೆಗಳಿಗೆ ಶೇ 3ರ ಬಡ್ಡಿ ಮತ್ತು ರೂ. 2 ಕೋಟಿಯಿಂದ ರೂ. 10 ಕೋಟಿಗೆ ದರವು ಶೇಕಡಾ 5ರಷ್ಟಿದೆ.
ಬಂಧನ್ ಬ್ಯಾಂಕ್ ಭಾರತದಲ್ಲಿ ತನ್ನ ಗ್ರಾಹಕರ ನೆಲೆಯನ್ನು ವಿಸ್ತರಿಸಲು ಆಕ್ರಮಣಕಾರಿಯಾಗಿ ಪ್ರಯತ್ನಿಸಿದೆ. ಬ್ಯಾಂಕ್ ಕೇವಲ ಠೇವಣಿಗಳಲ್ಲಿ ಮಾತ್ರವಲ್ಲದೆ ಅದರ ಸಾಲ ಪೋರ್ಟ್ಫೋಲಿಯೊದಲ್ಲಿಯೂ ಗಣನೀಯ ಬೆಳವಣಿಗೆಯನ್ನು ಪಡೆದುಕೊಂಡಿದೆ. ಕಳೆದ ವರ್ಷದ Q2 ಅಂಕಿ-ಅಂಶಗಳಿಗೆ ಹೋಲಿಸಿದರೆ, 2021-22ರ ಹಣಕಾಸು ವರ್ಷದಲ್ಲಿ ಬ್ಯಾಂಕ್‌ನ ಸಾಲದ ಪೋರ್ಟ್‌ಫೋಲಿಯೊ ಶೇ 6.6 ಜಿಗಿತವನ್ನು ಕಂಡಿದೆ. ಠೇವಣಿ ವಿಭಾಗದಲ್ಲಿ ಬೆಳವಣಿಗೆಯು ಹೆಚ್ಚು ಪ್ರಭಾವಶಾಲಿಯಾಗಿದೆ. 2020-21ರ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ವರ್ಷದ Q2ರಲ್ಲಿ ಬಂಧನ್ ಬ್ಯಾಂಕ್‌ನ ಠೇವಣಿ ಶೇ 23ರಷ್ಟು ಏರಿಕೆಯಾಗಿದೆ ಎಂದು ವರ್ಷದಿಂದ ವರ್ಷಕ್ಕೆ ಬೆಳವಣಿಗೆಯ ಅಂಕಿ-ಅಂಶಗಳು ಬಹಿರಂಗಪಡಿಸುತ್ತವೆ.
80ಲಕ್ಷಕ್ಕೂ ಹೆಚ್ಚು ಹೊಸ ಗ್ರಾಹಕರನ್ನು ಸೇರಿಸುವಲ್ಲಿ ಬ್ಯಾಂಕ್ ಯಶಸ್ವಿಯಾಗಿದೆ. ಅದರ ಒಟ್ಟಾರೆ ಗ್ರಾಹಕರ ಸಂಖ್ಯೆಯನ್ನು 24.3 ಕೋಟಿ ಮುಟ್ಟಿದೆ. ಬಂಧನ್ ಬ್ಯಾಂಕ್ 2021-22ರ Q2ರಲ್ಲಿ 3490 ಕೋಟಿ ರೂಪಾಯಿಗಳ EEB ಪೋರ್ಟ್‌ಫೋಲಿಯೊವನ್ನು ಪುನರ್ರಚಿಸಿದರೆ, EEB ಅಲ್ಲದ ಪೋರ್ಟ್‌ಫೋಲಿಯೊ ಅದೇ ತ್ರೈಮಾಸಿಕದಲ್ಲಿ 268 ಕೋಟಿ ರೂಪಾಯಿಗಳ ಮೌಲ್ಯವನ್ನು ಹೊಂದಿದೆ. ಈ ಮಧ್ಯೆ, ಬ್ಯಾಂಕಿನ ಒಟ್ಟು ಎನ್‌ಪಿಎ ಶೇ 10.8ರಲ್ಲಿ ಸ್ಥಿರವಾಗಿದೆ ಮತ್ತು ನಿವ್ವಳ ಎನ್‌ಪಿಎ ಶೇ 3 ಎಂದು ವರದಿಯಾಗಿದೆ.
ಇದನ್ನೂ ಓದಿ: Personal Loan: ಕಡಿಮೆ ಬಡ್ಡಿ ದರಕ್ಕೆ ಪರ್ಸನಲ್ ಲೋನ್ ನೀಡುತ್ತಿರುವ 9 ಬ್ಯಾಂಕ್ಗಳಿವು