‘ಆವೇಶಂ’ ಚಿತ್ರವನ್ನು ರಿಮೇಕ್ ಮಾಡಲು ಮುಂದಾದ ಟಾಲಿವುಡ್ ಯುವ ನಟ
Avesham movie: ಫಹಾದ್ ಫಾಸಿಲ್ ನಟನೆಯ ‘ಆವೇಶಂ’ ಮಲಯಾಳಂ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಸಿನಿಮಾನಲ್ಲಿ ಫಹಾದ್ ನಟನೆಯನ್ನು ಕೊಂಡಾಡದವರೇ ಇಲ್ಲ. ಈ ಸಿನಿಮಾವನ್ನು ತೆಲುಗಿಗೆ ರೀಮೇಕ್ ಮಾಡಬೇಕು ಎಂದು ತೆಲುಗು ನಟ ಅಂದುಕೊಂಡಿದ್ದರಂತೆ. ಆದರೆ ಅವರಿಗೆ ‘ಆವೇಶಂ’ ಸಿನಿಮಾದ ಹಕ್ಕುಗಳು ಸಿಗಲಿಲ್ಲವಂತೆ.

2024ರಲ್ಲಿ ಮಲಯಾಳಂನಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆದ ಸಿನಿಮಾಗಳಲ್ಲಿ ‘ಆವೇಶಂ’ ಚಿತ್ರ ಕೂಡ ಒಂದು. ಈ ಚಿತ್ರದಲ್ಲಿ ಫಹಾದ್ ಫಾಸಿಲ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದರು. ಅವರದ್ದು ವಿಲನ್ ಪಾತ್ರ. ಈ ಚಿತ್ರ ಭಿನ್ನವಾಗಿ ಮೂಡಿ ಬಂದಿತ್ತು. ಈ ಸಿನಿಮಾನ ರಿಮೇಕ್ ಮಾಡಿದರೆ ಬೇರೆ ಭಾಷೆಯಲ್ಲಿ ಯಶಸ್ಸು ಕಾಣುತ್ತದೆ ಎಂದು ಹೇಳಲಾಗದು. ಏಕೆಂದರೆ ಈಗಾಗಲೇ ಆ ಪಾತ್ರ ಹಾಗೂ ಸಿನಿಮಾನ ಎಲ್ಲರೂ ನೋಡಿಯಾಗಿದೆ. ಆದಾಗ್ಯೂ ತೆಲುಗಿನ ಖ್ಯಾತ ಹೀರೋ ವಿಷ್ಣು ಮಂಚುಗೆ ಹೀಗೊಂದು ಐಡಿಯಾ ಬಂದಿದೆ.
‘ಕಣ್ಣಪ್ಪ’ ಸಿನಿಮಾದಲ್ಲಿ ವಿಷ್ಣು ಮಂಚು ನಟಿಸುತ್ತಿದ್ದಾರೆ. ಈ ಸಿನಿಮಾ ಈ ವಾರ ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ವಿಷ್ಣು ಅವರು ಕಣ್ಣಪ್ಪನ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಮೋಹನ್ ಬಾಬು, ಅಕ್ಷಯ್ ಕುಮಾರ್, ಮೋಹನ್ಲಾಲ್, ಪ್ರಭಾಸ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರದ ಪ್ರಚಾರದ ವೇಳೆ ಅವರಿಗೆ ವಿವಿಧ ರೀತಿಯ ಪ್ರಶ್ನೆಗಳು ಎದುರಾಗುತ್ತಿವೆ. ಈ ಚಿತ್ರದ ಈವೆಂಟ್ ಕೊಚ್ಚಿಯಲ್ಲಿ ನಡೆದಿದೆ. ಈ ವೇಳೆ ಅವರಿಗೆ ಮಲಯಾಳಂ ಸಿನಿಮಾಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನಿಡಿದ್ದಾರೆ.
‘ನಾನು ಮೋಹನ್ಲಾಲ್ ಹಾಗೂ ಮಮ್ಮೂಟಿ ಸಿನಿಮಾಗಳನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಫಹಾದ್ ಫಾಸಿಲ್ ಅವರ ನಟನೆ ನಂಗೆ ತುಂಬಾನೇ ಇಷ್ಟ. ಅವರ ಇಂಟೆನ್ಸಿಟಿ ಬೇರೆಯದೇ ಹಂತದಲ್ಲಿ ಇರುತ್ತದೆ’ ಎಂದು ವಿಷ್ಣು ಮಂಚು ಅವರು ಹೇಳಿದರು.
ಇದನ್ನೂ ಓದಿ:ಬಿಡುಗಡೆಗೂ ಮುನ್ನವೇ ‘ಕಣ್ಣಪ್ಪ’ ಸಿನಿಮಾ ನೋಡಿ ಭೇಷ್ ಎಂದ ರಜನಿಕಾಂತ್
2024ರಲ್ಲಿ ರಿಲೀಸ್ ಆದ ‘ಆವೇಶಂ’ ಸಿನಿಮಾ ಬಗ್ಗೆ ಅವರು ಮಾತನಾಡಿದರು. ‘ಆವೇಶಂ ಸಿನಿಮಾನ ನನಗೆ ತೆಲುಗಿಗೆ ರಿಮೇಕ್ ಮಾಡಬೇಕಿತ್ತು. ಆದರೆ, ದುರಾದೃಷ್ಟ ಎಂದರೆ ಇದರ ಹಕ್ಕನ್ನು ಈಗಾಗಲೇ ಯಾರೋ ಪಡೆದುಕೊಂಡು ಬಿಟ್ಟಿದ್ದಾರೆ’ ಎಂದು ಬೇಸರ ಹೊರಹಾಕಿದರು.
‘ಆವೇಶಂ’ ಸಿನಿಮಾ ಮಲಾಯಳಂನಲ್ಲಿ ಹಿಟ್ ಆಯಿತು. ಇದಕ್ಕೆ ಕಾರಣ ಫಹಾದ್ ಫಾಸಿಲ್ ಅವರ ನಟನೆ. ಅವರು ಇದಕ್ಕೆ ಬೇರೆಯದೇ ರೀತಿಯ ಚಾರ್ಮ್ ಕೊಟ್ಟರು. ಆದರೆ, ಈ ಸಿನಿಮಾ ಬೇರೆ ಭಾಷೆಗೆ ರಿಮೇಕ್ ಆದರೆ ಹಿಟ್ ಆಗೋದು ಅನುಮಾನವೇ. ಈ ಚಿತ್ರವನ್ನು ತೆಲುಗಿನಲ್ಲಿ ಯಾರು ಮಾಡುತ್ತಾರೆ ಎಂಬ ಕುತೂಹಲ ಮೂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



