AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲೋಕ್ ಕುಮಾರ್ ವಿಶೇಷ ಕಾರ್ಯಾಚರಣೆ: ಬೆಂಗಳೂರು ಬಳಿಕ ಮಂಗಳೂರು ಜೈಲು ಪರಿಶೀಲನೆ

ಅಲೋಕ್ ಕುಮಾರ್ ವಿಶೇಷ ಕಾರ್ಯಾಚರಣೆ: ಬೆಂಗಳೂರು ಬಳಿಕ ಮಂಗಳೂರು ಜೈಲು ಪರಿಶೀಲನೆ

ಭಾವನಾ ಹೆಗಡೆ
|

Updated on: Dec 23, 2025 | 2:24 PM

Share

ಇತ್ತೀಚೆಗೆ ಪರಪ್ಪನ ಅಗ್ರಹಾರ, ಕಾರವಾರ ಜೈಲು ಸೇರಿದಂತೆ ಬಳ್ಳಾರಿಯಲ್ಲಿಯೂ ಹಲವು ಅಕ್ರಮಗಳು ನಡೆದಿದದ್ದವು. ಕೈದಿಗಳ ಬಳಿ ಮೊಬೈಲ್ ಫೋನ್​ಗಳು ಸಿಕ್ಕಿದ್ದಲ್ಲದೆ, ಜಗಳ, ರಂಪಾಟಗಳೂ ನಡೆದಿದದ್ದವು. ಈ ಎಲ್ಲದರ ನಡುವೆ ಕಾರಾಗೃಹದ ಭದ್ರತೆ ಮತ್ತು ಆಡಳಿತಾತ್ಮಕ ವ್ಯವಸ್ಥೆಗಳನ್ನು ಪರಿಶೀಲಿಸುವ ಉದ್ದೇಶದಿಂದ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು. ಕಾರಾಗೃಹ ಡಿಜಿಪಿಯಾದ ಬಳಿಕ ಅಲೋಕ್ ಕುಮಾರ್ ಅವರಿಗೆ ಮಂಗಳೂರು ಜೈಲಿಗೆ ಇದು ಮೊದಲ ಭೇಟಿಯಾಗಿದೆ. ಮಂಗಳೂರು ನಗರದ ಪಿವಿಎಸ್ ಪ್ರದೇಶದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಆಗಮಿಸಿದ ಡಿಜಿಪಿ ಗೌರವ ವಂದನೆ ಸ್ವೀಕರಿಸಿದ ನಂತರ ಜೈಲಿನೊಳಗೆ ತೆರಳಿ ಪರಿಶೀಲನಾ ಕಾರ್ಯವನ್ನು ಕೈಗೊಂಡರು. ಈ ಭೇಟಿಗೂ ಮುನ್ನ ಜೈಲಿನ ಅಧಿಕಾರಿಗಳು ಈಗಾಗಲೇ ಕಾರಾಗೃಹದೊಳಗೆ ಅಕ್ರಮವಾಗಿ ಇರಿಸಲಾಗಿದ್ದ ಆರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದರು.

ಮಂಗಳೂರು, ಡಿಸೆಂಬರ್ 23: ಇತ್ತೀಚೆಗೆ ಪರಪ್ಪನ ಅಗ್ರಹಾರ, ಕಾರವಾರ ಜೈಲು ಸೇರಿದಂತೆ ಬಳ್ಳಾರಿಯಲ್ಲಿಯೂ ಹಲವು ಅಕ್ರಮಗಳು ನಡೆದಿದದ್ದವು. ಕೈದಿಗಳ ಬಳಿ ಮೊಬೈಲ್ ಫೋನ್​ಗಳು ಸಿಕ್ಕಿದ್ದಲ್ಲದೆ, ಜಗಳ, ರಂಪಾಟಗಳೂ ನಡೆದಿದದ್ದವು. ಈ ಎಲ್ಲದರ ನಡುವೆ ಕಾರಾಗೃಹದ ಭದ್ರತೆ ಮತ್ತು ಆಡಳಿತಾತ್ಮಕ ವ್ಯವಸ್ಥೆಗಳನ್ನು ಪರಿಶೀಲಿಸುವ ಉದ್ದೇಶದಿಂದ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು. ಕಾರಾಗೃಹ ಡಿಜಿಪಿಯಾದ ಬಳಿಕ ಅಲೋಕ್ ಕುಮಾರ್ ಅವರಿಗೆ ಮಂಗಳೂರು ಜೈಲಿಗೆ ಇದು ಮೊದಲ ಭೇಟಿಯಾಗಿದೆ. ಮಂಗಳೂರು ನಗರದ ಪಿವಿಎಸ್ ಪ್ರದೇಶದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಆಗಮಿಸಿದ ಡಿಜಿಪಿ ಗೌರವ ವಂದನೆ ಸ್ವೀಕರಿಸಿದ ನಂತರ ಜೈಲಿನೊಳಗೆ ತೆರಳಿ ಪರಿಶೀಲನೆ ನಡೆಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.