ಪ್ರಿಯಾಂಕಾ ಚೋಪ್ರಾಗೆ ಪತಿ ನಿಕ್ಕಿ ಕೊಟ್ಟ ಸರ್ಪ್ರೈಸ್ ಯಾರೂ ಕೊಡಲಾರರೇನೊ?
Priyanka Chopra and Nick Jonas: ಪ್ರಿಯಾಂಕಾ ಚೋಪ್ರಾ ಹಾಲಿವುಡ್ನಲ್ಲಿ ಸೆಟಲ್ ಆಗಿ ಬಹಳ ಕಾಲವಾಗಿದೆ. ಅವರ ಪತಿ ನಿಕ್ ಜೋನಸ್ ಜೊತೆಗೆ ಅವರು ಲಾಸ್ ಏಂಜಲ್ಸ್ನಲ್ಲಿ ವಾಸವಾಗಿದ್ದಾರೆ. ಇತ್ತೀಚೆಗೆ ಕಪಿಲ್ ಶರ್ಮಾ ಶೋಗೆ ಬಂದಿದ್ದ ಪ್ರಿಯಾಂಕಾ ಚೋಪ್ರಾ, ತಮ್ಮ ಪತಿ ನಿಕ್ ಜೋನಸ್ ತಮಗೆ ನೀಡಿದ ಸರ್ಪ್ರೈಸ್ ಒಂದರ ಬಗ್ಗೆ ಪ್ರಿಯಾಂಕಾ ಹೇಳಿಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ (Priyanka Chopra) ಹಾಲಿವುಡ್ಗೆ ಹಾರಿ ಬಹು ಸಮಯವಾಗಿದೆ. ಆದರೆ ಇದೀಗ ‘ವಾರಣಾಸಿ’ ಸಿನಿಮಾ ಮೂಲಕ ಮತ್ತೆ ಭಾರತೀಯ ಚಿತ್ರರಂಗಕ್ಕೆ ಅದರಲ್ಲೂ ದಕ್ಷಿಣ ಭಾರತ ಚಿತ್ರರಂಗಕ್ಕೆ ಮರಳಿ ಬಂದಿದ್ದಾರೆ. ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಕಪಿಲ್ ಶರ್ಮಾ ನಡೆಸಿಕೊಡುವ ಟಾಕ್ ಶೋಗೂ ಬಂದಿದ್ದರು. ಈ ವೇಳೆ ‘ವಾರಣಾಸಿ’ ಸಿನಿಮಾದ ಬಗ್ಗೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ತಮ್ಮ ಪತಿ ನಿಕ್ ಜೋನಸ್ ನೀಡಿದ ವಿಶೇಷ ಸರ್ಪ್ರೈಸ್ ಬಗ್ಗೆಯೂ ಪ್ರಿಯಾಂಕಾ ಚೋಪ್ರಾ ಮಾತನಾಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ನೆಲೆಸಿರುವುದು ವಿದೇಶದಲ್ಲಿ ಆದರೂ ಭಾರತದ ಹಬ್ಬಗಳ ಆಚರಣೆಗಳನ್ನು ತಪ್ಪದೇ ಮಾಡುತ್ತಾರೆ. ಹೋಳಿ, ಗಣೇಶ ಚತುರ್ಥಿ, ದೀಪಾವಳಿ ಇನ್ನಿತರೆಗಳನ್ನು ಆಚರಿಸುವ ಅವರು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಇವುಗಳ ಜೊತೆಗೆ ಕರ್ವಾ ಚೌತ್ ಹೆಸರಿನ ಉತ್ತರದಲ್ಲಿ ಬಹಳ ಜನಪ್ರಿಯವಾಗಿರುವ ವೃತವೊಂದನ್ನು ಸಹ ಪ್ರಿಯಾಂಕಾ ಚೋಪ್ರಾ ಆಚರಿಸುತ್ತಾರಂತೆ. ಈ ವೃತ್ತದಲ್ಲಿ ಕರ್ವಾ ಚೌತ್ ದಿನ ಪತ್ನಿ ಆದವರು, ಪತಿಗಾಗಿ ಉಪವಾಸವಿದ್ದು ವೃತ ಆಚರಿಸುತ್ತಾರೆ. ಸಂಜೆ ಆದ ಬಳಿಕ ಹುಣ್ಣಿಮೆ ಚಂದ್ರನ ಜೊತೆಗೆ ಪತಿಯ ಮುಖ ನೋಡಿ ಪತಿಯ ಕೈಯ್ಯಿಂದ ನೀರು ಸೇವಿಸಿ ವೃತ ಅಂತ್ಯ ಮಾಡುತ್ತಾರೆ.
ಪ್ರಿಯಾಂಕಾ ಚೋಪ್ರಾ ಸಹ ಪತಿ ನಿಕ್ ಜೋನಸ್ ಅವರಿಗಾಗಿ ಕರ್ವಾ ಚೌತ್ ವೃತ ಆಚರಿಸಿದ್ದರಂತೆ. ಆದರೆ ಸಂಜೆ ಆಗುತ್ತಲೇ ಅವರಿದ್ದ ಕಡೆ ಮೋಡಗಳುಂಟಾಗಿ, ಜೋರು ಮಳೆ ಬಂದು ಚಂದ್ರನೇ ಕಾಣಿಸಲಿಲ್ಲವಂತೆ. ಆದರೆ ಚಂದ್ರನ ನೋಡದೆ ವೃತ ಮುರಿಯುವಂತಿಲ್ಲ. ಆಗ ನಿಕ್ ಜೋನಸ್, ಖಾಸಗಿ ವಿಮಾನ ಬುಕ್ ಮಾಡಿ, ಮೋಡಗಳಿಗಿಂತಲೂ ಮೇಲೆ ಅದನ್ನು ಹಾರಿಸಿ ಚಂದ್ರನ ತೋರಿಸಿದರಂತೆ. ವಿಮಾನದ ಮೂಲಕ ಚಂದ್ರನ ನೋಡಿದ ಅದರ ಜೊತೆಯಲ್ಲೇ ಪತಿಯನ್ನು ನೋಡಿ, ಅಲ್ಲಿಯೇ ವೃತ ಬಿಟ್ಟರಂತೆ ಪ್ರಿಯಾಂಕಾ ಚೋಪ್ರಾ.
ಇದನ್ನೂ ಓದಿ:ಮಹೇಶ್ ಬಾಬು vs ಪ್ರಿಯಾಂಕಾ ಚೋಪ್ರಾ; ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು?
ಅಂದಹಾಗೆ ಪ್ರಿಯಾಂಕಾ ಚೋಪ್ರಾ ಇದನ್ನೆಲ್ಲ ಹೇಳಿದ ಬಳಿಕ ಕಮಿಡಿಯನ್ ಕಪಿಲ್ ಶರ್ಮಾ ಒಂದು ತುಂಟ ಪ್ರಶ್ನೆ ಕೇಳಿದ್ದಾರೆ. ವೃತ ಮುಗಿದ ಬಳಿಕ ಏನು ಮಾಡಿದಿರಿ? ಎಂದು. ಆದರೆ ಕಪಿಲ್ ಶರ್ಮಾ ಅವರ ಆ ತುಂಟ ಪ್ರಶ್ನೆಗೆ ನಕ್ಕು ಸುಮ್ಮನಾಗಿದ್ದಾರೆ.
ನಿಕ್ ಜೋನಸ್, ಹಾಲಿವುಡ್ನ ಖ್ಯಾತ ಪಾಪ್ ಗಾಯಕ. ವಿಶ್ವದಾದ್ಯಂತ ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಕೆಲವಾರು ಹಾಲಿವುಡ್ ಸಿನಿಮಾಗಳಲ್ಲಿಯೂ ಸಹ ನಿಕ್ ಜೋನಸ್ ನಟಿಸಿದ್ದಾರೆ. ಇಬ್ಬರೂ 2018ರ ಡಿಸೆಂಬರ್ ನಲ್ಲಿ ವಿವಾಹವಾದರು. ಇಬ್ಬರಿಗೂ ಮಾಲತಿ ಹೆಸರಿನ ಮುದ್ದಾದ ಮಗಳಿದ್ದಾಳೆ. ಇದೀಗ ಪ್ರಿಯಾಂಕಾ ಚೋಪ್ರಾ ‘ವಾರಣಾಸಿ’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ಒಂದು ಹಿಂದಿ ಸಿನಿಮಾನಲ್ಲಿಯೂ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




