ವಾಹನ ಸವಾರರೇ ಎಚ್ಚರ ಎಚ್ಚರ: ಬೆಂಗಳೂರಲ್ಲಿ ಮತ್ತೆ ಸದ್ದು ಮಾಡಿದ ಪಂಕ್ಚರ್ ಮಾಫಿಯಾ
ಬೆಂಗಳೂರಿನ ಬಿಇಎಲ್ ಸರ್ಕಲ್ ಅಂಡರ್‌ಪಾಸ್‌ನಲ್ಲಿ ಕಿಡಿಗೇಡಿಗಳು ಕೆಜಿಗಟ್ಟಲೆ ಮೊಳೆಗಳನ್ನು ಚೆಲ್ಲಿ ವಾಹನ ಸವಾರರಿಗೆ ಅಪಾಯ ಸೃಷ್ಟಿಸಿದ್ದಾರೆ. ವಾಹನಗಳ ಪಂಕ್ಚರ್‌ಗೆ ಕಾರಣವಾಗುತ್ತಿರುವ ಈ ಕೃತ್ಯದಿಂದ ದರೋಡೆ ಅಥವಾ ಪಂಕ್ಚರ್ ಅಂಗಡಿಗಳಿಗೆ ಲಾಭ ಮಾಡಿಕೊಡುವ ಶಂಕೆ ವ್ಯಕ್ತವಾಗಿದೆ. ಇಂತಹ ಘಟನೆಗಳು ಬೆಂಗಳೂರಲ್ಲಿ ಮೇಲಿಂದ ಮೇಲೆ ನಡೆಯುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬೆಂಗಳೂರು, ಡಿಸೆಂಬರ್ 23: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಪಂಕ್ಚರ್ ಮಾಫಿಯಾ ಮತ್ತೆ ತಲೆ ಎತ್ತಿದೆ. ಬಿಇಎಲ್ ಸರ್ಕಲ್ ಅಂಡರ್ ಪಾಸ್ನಲ್ಲಿ ಕಿಡಿಗೇಡಿಗಳು ಕೆಜಿಗಟ್ಟಲೆ ಕಬ್ಬಿಣದ ಮೊಳೆ ಸುರಿದಿರೋದು ಕಂಡುಬಂದಿದ್ದು, ವಾಹನ ಸವಾರರು ರಸ್ತೆಯಲ್ಲಿ ಕೊಂಚ ಯಾಮಾರಿದ್ರೂ ಪ್ರಾಣಕ್ಕೆ ಕುತ್ತು ಬರುವ ಸ್ಥಿತಿ ಉದ್ಭವಿಸಿದೆ. ರಾತ್ರಿ ಹೊತ್ತು ರಾಬರಿ ಮಾಡಲು ಅಥವಾ ಪಂಕ್ಚರ್ ಅಂಗಡಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಕೂಡಲೇ ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ವಾಹನ ಸವಾರರು ಆಗ್ರಹಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Dec 23, 2025 02:15 PM
Latest Videos
ಬುರ್ಖಾ ಹಾಕಿಕೊಂಡು ಓಡಾಡಿದ್ರೂ ಪೊಲೀಸರ ಕೈಗೆ ಸಿಕ್ಕಿಬಿದ್ದ ಅತ್ಯಾಚಾರ ಆರೋಪಿ
ಜನರ ಸಪೋರ್ಟ್ ಹೇಗಿದೆ ಎಂಬುದನ್ನು ಸ್ಪರ್ಧಿಗಳಿಗೆ ತೋರಿಸಿದ ಬಿಗ್ ಬಾಸ್
ಎಚ್ಚರ, ದಕ್ಷಿಣ ದಿಕ್ಕಿಗೆ ತಿರುಗಿ ನಮಸ್ಕಾರ ಮಾಡಲೇಬಾರದು! ಕಾರಣ ಇಲ್ಲಿದೆ
ಮಕರ ರಾಶಿಗೆ ಶುಕ್ರ ಪ್ರವೇಶ: ಈ ದಿನದ ರಾಶಿ ಭವಿಷ್ಯ ಹೇಗಿದೆ ನೋಡಿ
