Afghanistan: ಕಾರ್ ಬಾಂಬ್ ಸ್ಫೋಟದಲ್ಲಿ 12 ಮಂದಿ ಸಾವು, ಇನ್ನೊಂದೆಡೆ ಫಿರಂಗಿ ಸ್ಫೋಟಿಸಿ 5 ಮಕ್ಕಳ ದುರ್ಮರಣ
ಕಳೆದ ಆಗಸ್ಟ್ನಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡಾಗಿನಿಂದಲೂ ಒಂದಲ್ಲ ಒಂದು ಸ್ಫೋಟ, ದಾಳಿ ಆಗುತ್ತಲೇ ಇದೆ. ಅದರಲ್ಲಿ ಬಹುತೇಕ ಸ್ಫೋಟದ ಹೊಣೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರಸಂಘಟನೆ ಹೊತ್ತುಕೊಂಡಿದೆ.
ಅಫ್ಘಾನಿಸ್ತಾನದ (Afghanistan) ಪಶ್ಚಿಮ ಪ್ರಾಂತ್ಯವಾದ ಹೆರಾತ್ನಲ್ಲಿನಡೆದ ಕಾರ್ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಂತ್ಯದ ಆರೋಗ್ಯ ಸಿಬ್ಬಂದಿ ತಿಳಿಸಿದ್ದಾರೆ. ಅಂದಹಾಗೇ, ಕ್ರೀಡಾಂಗಣವೊಂದರಲ್ಲಿ ಸ್ಫೋಟವುಂಟಾಗಿದ್ದು, ಈ ವೇಳೆ ಅಲ್ಲಿ ಅನೇಕ ಯುವಕರು ಆಟವಾಡುತ್ತಿದ್ದರು. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೂ ಯಾವುದೇ ಸಂಘಟನೆಗಳೂ ಈ ಸ್ಫೋಟದ ಹೊಣೆ ಹೊತ್ತಿಲ್ಲ. ಅಂದರೆ ಇದನ್ನು ಮಾಡಿದ್ದು ನಾವೇ ಎಂದು ಯಾರೂ ಒಪ್ಪಿಕೊಂಡಿಲ್ಲ.
ಇಂದು ಫಿರಂಗಿ ಸ್ಫೋಟ !
ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯದಲ್ಲಿ ಫಿರಂಗಿ ಸ್ಫೋಟವಾಗಿ ಐದು ಮಕ್ಕಳು ಮೃತಪಟ್ಟಿದ್ದಾರೆ. ಹಾಗೇ ಇಬ್ಬರು ಗಾಯಗೊಂಡಿದ್ದಾರೆ. ಈ ಘಟನೆ ಹೆಲ್ಮಂಡ್ ಪ್ರಾಂತ್ಯದ ಮರ್ಜಾ ಜಿಲ್ಲೆಯಲ್ಲಿ ನಡೆದಿದೆ. ಸುಮ್ಮನೆ ಇಡಲಾಗಿದ್ದ ಫಿರಂಗಿಯೊಂದಿಗೆ ಮಕ್ಕಳು ಆಟವಾಡುತ್ತಿದ್ದಾಗ ಅಕಸ್ಮಾತ್ ಆಗಿ ಸ್ಫೋಟಗೊಂಡು ಮಕ್ಕಳು ಮೃತಪಟ್ಟಿದ್ದಾರೆ.
ಕಳೆದ ಆಗಸ್ಟ್ನಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡಾಗಿನಿಂದಲೂ ಒಂದಲ್ಲ ಒಂದು ಸ್ಫೋಟ, ದಾಳಿ ಆಗುತ್ತಲೇ ಇದೆ. ಅದರಲ್ಲಿ ಬಹುತೇಕ ಸ್ಫೋಟದ ಹೊಣೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರಸಂಘಟನೆ ಹೊತ್ತುಕೊಂಡಿದೆ. ಇನ್ನು ಹೀಗೆ ಫಿರಂಗಿಗಳು, ರಾಕೆಟ್ಗಳಿಂದ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಇಲ್ಲಿ ನೋಡು ‘ಮಾರಾಯ’: ಮೈ ಆಟೋಗ್ರಾಫ್ ಚಿತ್ರದಲ್ಲಿ ಹೈಸ್ಕೂಲ್ ಹುಡುಗನಾಗಿದ್ದ ನಟ ಈಗ ಹೇಗಿದ್ದಾರೆ?