Biggest Airplanes: ಇವು ವಿಶ್ವದ 5 ಅತಿದೊಡ್ಡ ವಿಮಾನಗಳು
ವಿಶ್ವದ 5 ಅತಿದೊಡ್ಡ ವಿಮಾನಗಳ ಬಗ್ಗೆ ನಿಮಗೆ ತಿಳಿದಿದೆಯೇ? ಆ ವಿಮಾನಗಳು ಯಾವುವು? ಅವು ಯಾವಾಗ ಹಾರಾಟ ನಡೆಸಿತು, ಈ ಅತಿದೊಡ್ಡ ವಿಮಾನಗಳ ವಿಶೇಷತೆ ಏನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
1 / 6
ಆಕಾಶದಲ್ಲಿ ವಿಮಾನ ಹಾರುವಾಗ ಒಂದು ಸಲವಾದರೂ ವಿಮಾನದಲ್ಲಿ ಪ್ರಯಾಣಿಸಬೇಕು ಎಂಬುದು ಪ್ರತಿಯೊಬ್ಬರ ಬಾಲ್ಯದ ಕನಸು. ಅದರಂತೆ ಕನಸನ್ನು ನನಸು ಮಾಡಿಕೊಂಡವರೂ ಕೂಡ ಇದ್ದಾರೆ. ನೀವು ಸಾಕಷ್ಟು ವಿಮಾನಗಳನ್ನು ನೋಡಿರಬಹುದು. ಆದರೆ ವಿಶ್ವದ 5 ಅತಿದೊಡ್ಡ ವಿಮಾನಗಳ ಬಗ್ಗೆ ನಿಮಗೆ ತಿಳಿದಿದೆಯೇ? ಹಾಗಿದ್ರೆ ಇಲ್ಲಿ ತಿಳಿದುಕೊಳ್ಳಿ.
2 / 6
Antonov An-225 Mriya ವಿಶ್ವದ ಅತಿದೊಡ್ಡ ವಿಮಾನ ಎಂದು ಹೇಳಲಾಗುತ್ತದೆ. ಈ ವಿಮಾನ 1980 ರ ದಶಕದಲ್ಲಿ ಉಕ್ರೇನ್‌ನಲ್ಲಿ ವಿನ್ಯಾಸಗೊಳಿಸಲಾಯಿತು. ಈ ವಿಮಾನದ ಮುಖ್ಯ ಉದ್ದೇಶವೆಂದರೆ ಭಾರವಾದ ಮತ್ತು ದೊಡ್ಡ ಸರಕುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವುದು. ಇದು 21 ಡಿಸೆಂಬರ್ 1988 ರಂದು ತನ್ನ ಮೊದಲ ಹಾರಾಟವನ್ನು ನಡೆಸಿತು. ಈ ವಿಮಾನದ ವಿಶೇಷತೆ ಎಂದರೆ ಸುಮಾರು 250 ಟನ್ ಭಾರವನ್ನು ಎತ್ತಬಲ್ಲದು.
3 / 6
ಏರ್‌ಬಸ್ A380 ವಿಶ್ವದ ಅತಿ ದೊಡ್ಡ ಪ್ರಯಾಣಿಕ ವಿಮಾನ ಎಂದು ಹೇಳಲಾಗುತ್ತದೆ. ಪ್ರಯಾಣಿಕರ ಸಾರಿಗೆಗಾಗಿ ವಿನ್ಯಾಸಗೊಳಿಸಲಾಗಿದೆ. ಈ ವಿಮಾನದಲ್ಲಿ ಸುಮಾರು 800 ಜನರು ಪ್ರಯಾಣಿಸಬಹುದು. A380 ವಿಮಾನವು 27 ಏಪ್ರಿಲ್ 2005 ರಂದು ತನ್ನ ಮೊದಲ ಹಾರಾಟವನ್ನು ನಡೆಸಿತು.
4 / 6
ಆಂಟೊನೊವ್ ಆನ್ -124 ಆಂಟೊನೊವ್ ಆನ್ -225 ನಂತರ ರಷ್ಯಾದ ಎರಡನೇ ಅತಿದೊಡ್ಡ ಸರಕು ವಿಮಾನವಾಗಿದೆ. ಈ ವಿಮಾನದ ಮೊದಲ ಹಾರಾಟವು 1982 ರಲ್ಲಿ ನಡೆಯಿತು. AN-124 ಮುಂಭಾಗದ ತೆರೆಯುವ ಬಾಗಿಲನ್ನು ಹೊಂದಿದ್ದು, ಭಾರವಾದ ಸರಕುಗಳನ್ನು ಸುಲಭವಾಗಿ ಲೋಡ್ ಮಾಡಲು ಮತ್ತು ಇಳಿಸಲು ಅನುವು ಮಾಡಿಕೊಡುತ್ತದೆ. ಈ ವಿಮಾನ ಗರಿಷ್ಠ 150 ಟನ್ ಎತ್ತುವ ಸಾಮರ್ಥ್ಯ ಹೊಂದಿದೆ.
5 / 6
ಬೋಯಿಂಗ್ 747-8 ವಿಮಾನವು ದೊಡ್ಡ ವಿಮಾನವಾಗಿದೆ. ಈ ವಿಮಾನವು ಪ್ರಯಾಣಿಕರಿಗೆ ಮತ್ತು ಸರಕು ಎರಡಕ್ಕೂ ಸೂಕ್ತವಾಗಿದೆ. ಈ ವಿಮಾನದ ಉದ್ದ 76.3 ಮೀಟರ್. ಇದು ಅತಿ ಉದ್ದದ ಪ್ರಯಾಣಿಕ ವಿಮಾನವಾಗಿದೆ.
6 / 6
ಏರ್‌ಬಸ್ A340-600 ವಿಮಾನವು ನಾಲ್ಕು ಎಂಜಿನ್‌ಗಳನ್ನು ಹೊಂದಿದ್ದು, ದೀರ್ಘ-ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಈ ವಿಮಾನ 75.36 ಮೀಟರ್ ಉದ್ದವಿದೆ. A340-600 ವಿಮಾನದ ಮೊದಲ ಹಾರಾಟವು 2002 ರಲ್ಲಿ ನಡೆಯಿತು.