AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ಕ್ರೆಡಿಟ್ ಕಾರ್ಡ್ ಟ್ರಿಕ್ಸ್; 3 ಲಕ್ಷ ರೂ ರೆಸಾರ್ಟ್ ಸ್ಟೇ ಉಚಿತವಾಗಿ ಅನುಭವಿಸಿದ ಮಹಿಳೆಯ ಕಥೆ

Using credit card efficiently: ಪುಣೆಯಲ್ಲಿ ಚಾರ್ಟರ್ಡ್ ಅಕೌಂಟ್ ಆಗಿರುವ ಪ್ರೀತಿ ಜೈನ್ ಅವರು ಉತ್ತರಾಖಂಡ್​ನ ಲಕ್ಷುರಿ ಮಾರಿಯಟ್ ಹೋಟೆಲ್​ನಲ್ಲಿ ಮೂರು ದಿನ ಯಾವ ಖರ್ಚಿಲ್ಲದೆ ಉಳಿದುಬಂದಿದ್ದಾರೆ. ತನ್ನ ಕ್ರೆಡಿಟ್ ಕಾರ್ಡ್ ಅನ್ನು ಸರಿಯಾಗಿ ಬಳಸಿಕೊಂಡು ಸಾಕಷ್ಟು ರಿವಾರ್ಡ್ ಪಾಯಿಂಟ್ಸ್ ಕಲೆಹಾಕಿದ್ದರಿಂದ ಲಕ್ಷುರಿ ಹೋಟೆಲ್​ನಲ್ಲಿ ಉಚಿತವಾಗಿ ಉಳಿಯಲು ಈಕೆಗೆ ಸಾಧ್ಯವಾಗಿದೆ.

ಇದು ಕ್ರೆಡಿಟ್ ಕಾರ್ಡ್ ಟ್ರಿಕ್ಸ್; 3 ಲಕ್ಷ ರೂ ರೆಸಾರ್ಟ್ ಸ್ಟೇ ಉಚಿತವಾಗಿ ಅನುಭವಿಸಿದ ಮಹಿಳೆಯ ಕಥೆ
ಸಾಂದರ್ಭಿಕ ಚಿತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 29, 2024 | 2:24 PM

Share

ನವದೆಹಲಿ, ಅಕ್ಟೋಬರ್ 29: ಲಕ್ಷುರಿ ಹೋಟೆಲ್​ನಲ್ಲಿ ಒಂದು ರಾತ್ರಿ ಉಳಿಯಬೇಕಾದರೆ ಸಾವಿರಾರು ರೂ ತೆರಬೇಕು. ಮಾರಿಯಟ್ ರೆಸಾರ್ಟ್​ನಲ್ಲಿ ಒಂದು ರಾತ್ರಿ ಸ್ಟೇ ಮಾಡಲು ಲಕ್ಷ ರೂ ಸಮೀಪದಷ್ಟು ಬೆಲೆ. ಅಲ್ಲಿ ಮಹಿಳೆಯೊಬ್ಬಳು ಮೂರು ದಿನ ಉಚಿತವಾಗಿ ಉಳಿದುಬಂದಿದ್ದಾಳೆ. ಇದ್ಯಾವುದೋ ಬಹುಮಾನದ ಭಾಗವಾಗಿ ಈಕೆ ಹೋಗಿದ್ದಲ್ಲ, ಅಥವಾ ವಂಚನೆ ಮಾಡಿ ಉಳಿದುಬಂದದ್ದಲ್ಲ. ಯಾವುದೇ ಅಕ್ರಮ ಇಲ್ಲದೆ ಈಕೆ ಉತ್ತರಾಖಂಡ್​ನ ಮಾರಿಯಟ್ ರೆಸಾರ್ಟ್​ನಲ್ಲಿ ಮೂರು ರಾತ್ರಿ ಸ್ಟೇ ಮಾಡಿ ಬಂದಿದ್ದಾಳೆ. ಈಕೆ ಪುಣೆಯ ಚಾರ್ಟರ್ಡ್ ಅಕೌಂಟೆಂಟ್ ಪ್ರೀತಿ ಜೈನ್. ಈಕೆ ರೆಸಾರ್ಟ್​ನಲ್ಲಿ ಒಂದು ಪೈಸೆ ಖರ್ಚಿಲ್ಲದೆ ಉಚಿತವಾಗಿ ಉಳಿಯಲು ಸಾಧ್ಯವಾಗಿಸಿದ್ದು ಆಕೆಯ ಕ್ರೆಡಿಟ್ ಕಾರ್ಡ್.

ಕ್ರೆಡಿಟ್ ಕಾರ್ಡ್​ನ ರಿವಾರ್ಡ್ ಪಾಯಿಂಟ್ಸ್ ಉಪಯೋಗಿಸುವ ತಂತ್ರ…

ಹಲವು ಕ್ರೆಡಿಟ್ ಕಾರ್ಡ್​ಗಳು ನಾನಾ ರೀತಿಯ ಆಫರ್ ನೀಡುತ್ತವೆ. ರಿವಾರ್ಡ್ ಪಾಯಿಂಟ್​ಗಳು, ಕ್ಯಾಷ್ ಬ್ಯಾಕ್​ಗಳನ್ನು ನೀಡುತ್ತವೆ. ಅವುಗಳನ್ನು ಹೇಗೆ ಉಪಯೋಗಿಸಿಕೊಳ್ಳುತ್ತೇವೆ ಎನ್ನುವುದು ಅವರವರ ವಿವೇಚನೆ, ಸಮಯಪ್ರಜ್ಞೆಗೆ ಬಿಟ್ಟಿದ್ದು.

ಇದನ್ನೂ ಓದಿ: Viral: ಎಸಿ ಸರಿಯಾಗಿ ವರ್ಕ್‌ ಆಗ್ತಿಲ್ಲ ಎಂದು ರೈಲ್ವೆ ಚೈನ್‌ ಎಳೆದ ಪ್ರಯಾಣಿಕನಿಗೆ ಥಳಿಸಿದ ರೈಲ್ವೇ ಪೊಲೀಸ್‌; ವೈರಲ್‌ ಆಯ್ತು ವಿಡಿಯೋ

ಸಿಎ ಆಗಿರುವ ಪ್ರೀತಿ ಜೈನ್ ಅವರು ಅಮೆರಿಕನ್ ಎಕ್ಸ್​ಪ್ರೆಸ್ ಪ್ಲಾಟಿನಂ ಕಾರ್ಡ್ ಹೊಂದಿದ್ದು, ಅದನ್ನು ಶಾಪಿಂಗ್​ಗೆ ಬಳಸಿ 58,000 ರಿವಾರ್ಡ್ ಪಾಯಿಂಟ್ ಪಡೆದಿದ್ದಾಳೆ. ನಂತರ ಅದಕ್ಕೆ ಶೇ. 30ರಷ್ಟು ಬೋನಸ್ ಪಾಯಿಂಟ್ ಕೂಡ ಸೇರಿದೆ. ಅದೇ ವೇಳೆ, ಮಾರಿಯಟ್​ನ ಗ್ಲೋಬಲ್ ಲಾಯಲ್ಟಿ ಸ್ಕೀಮ್ ಮೂಲಕ ಈ 75,000 ರಿವಾರ್ಡ್ ಪಾಯಿಂಟ್​ಗಳನ್ನು ಮಾರಿಯಟ್ ಬಾನ್ವೋಯ್ ಪಾಯಿಂಟ್ ಆಗಿ ಪರಿವರ್ತಿಸಿಕೊಂಡಿದ್ದಾಳೆ.

ಈ ಅಂಕಗಳನ್ನು ಉಪಯೋಗಿಸಿ ಈಕೆ ಉತ್ತರಾಖಂಡ್​ನ ಮಾರಿಯಟ್ ಲಕ್ಷುರಿ ಹೋಟೆಲ್​ನಲ್ಲಿ ಸ್ಟೇ ಮಾಡುವ ಅವಕಾಶ ಸಿಕ್ಕಿದೆ. ಈಕೆಗೆ ಮೊದಲ ದಿನವೇ ಪ್ರೀಮಿಯರ್ ರೂಮ್ ಸಿಕ್ಕಿತು. ನಂತರ ಎರಡು ದಿನ ಎಕ್ಸಿಕ್ಯೂಟಿವ್ ಸೂಟ್ ದೊರಕಿತು. ಈ ಎಕ್ಸಿಕ್ಯೂಟಿವ್ ಸೂಟ್ ಒಂದು ರಾತ್ರಿಗೆ ಕನಿಷ್ಠ 90,000 ರೂ ಬೆಲೆ ಹೊಂದಿದೆ. ಈಕೆ 3 ರಾತ್ರಿ ಅಲ್ಲಿ ತಂಗಿದ್ದಾಳೆ. ಅದಕ್ಕೆ 3 ಲಕ್ಷ ರೂ ವೆಚ್ಚವಾಗುತ್ತದೆ. ರಿವಾರ್ಡ್ ಪಾಯಿಂಟ್ ದೆಸೆಯಿಂದ ಈಕೆಗೆ ಅವೆಲ್ಲವೂ ಉಚಿತವಾಗಿ ಸಿಕ್ಕಿದೆ. ಆದರೆ, 58,000 ರಿವಾರ್ಡ್ ಪಾಯಿಂಟ್ ಸಂಗ್ರಹಕ್ಕೆ ಈಕೆ ಸಿಕ್ಕಾಪಟ್ಟೆ ಶಾಪಿಂಗ್ ಮಾಡಿರಬಹುದು ಎಂದನಿಸಬಹುದು. ಆದರೆ, ಈಕೆ ನೀಡಿರುವ ಮಾಹಿತಿ ಪ್ರಕಾರ, ಅಷ್ಟು ರಿವಾರ್ಡ್ ಪಾಯಿಂಟ್ ಕಲೆಹಾಕಲು ಈಕೆ 4 ಲಕ್ಷ ರೂ ಮಾತ್ರವೇ ಆ ಕ್ರೆಡಿಟ್ ಕಾರ್ಡ್​ನಿಂದ ಶಾಪಿಂಗ್ ಮಾಡಿರುವುದು.

ಇದನ್ನೂ ಓದಿ: ವಯಸ್ಸಾದವರಿಗೆ 5 ಲಕ್ಷ ಕವರೇಜ್ ಇರುವ ಪಿಎಂ ಆಯುಷ್ಮಾನ್ ಕಾರ್ಡ್ ಮಾಡಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಪ್ರೀತಿ ಜೈನ್ ತಮ್ಮ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಾಗಂತ ಈಕೆ ಬಳಸಿದ ಅಮೆರಿಕನ್ ಎಕ್ಸ್​ಪ್ರೆಸ್ ಪ್ಲಾಟಿನಂ ಕಾರ್ಡ್ ಮಾತ್ರವೇ ಈ ಅವಕಾಶ ನೀಡುತ್ತದೆ ಎಂದಲ್ಲ, ಬೇರೆ ಹಲವು ಕ್ರೆಡಿಟ್ ಕಾರ್ಡ್​ಗಳು ರಿವಾರ್ಡ್ ಪಾಯಿಂಟ್​ಗಳನ್ನು ನೀಡುತ್ತವೆ. ಬೇರೆ ಬೇರೆ ಶಾಪಿಂಗ್​ಗೆ ಡಿಸ್ಕೌಂಟ್ ಪಡೆಯುವುದು ಹೀಗೆ ವಿವಿಧ ರೀತಿಯಲ್ಲಿ ಇವು ಉಪಯುಕ್ತ ಎನಿಸುತ್ತವೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ