ವಯಸ್ಸಾದವರಿಗೆ 5 ಲಕ್ಷ ಕವರೇಜ್ ಇರುವ ಪಿಎಂ ಆಯುಷ್ಮಾನ್ ಕಾರ್ಡ್ ಮಾಡಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್

Ayushman Bharat health insurance scheme: ಆಯುಷ್ಮಾನ್ ಭಾರತ್ ಹೆಲ್ತ್ ಇನ್ಷೂರೆನ್ಸ್ ಯೋಜನೆಯ ವ್ಯಾಪ್ತಿಗೆ ಈಗ 70 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರನ್ನೂ ಒಳಗೊಳ್ಳಲಾಗಿದೆ. ಮೂಲತಃ ದುರ್ಬಲರು, ಅಸಹಾಯಕರು, ಹಿಂದುಳಿದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ ಹೆಲ್ತ್ ಇನ್ಷೂರೆನ್ಸ್ ಸೌಲಭ್ಯ ನೀಡಿತ್ತು. ಈಗ ಎಲ್ಲಾ ವಯೋವೃದ್ಧರಿಗೂ ಅವಕಾಶ ಕೊಡಲಾಗಿದೆ. ಪಿಎಂ ಜೆಎವೈ ಸ್ಕೀಮ್​ನ ಸಮಗ್ರ ಮಾಹಿತಿ ಇಲ್ಲಿದೆ...

ವಯಸ್ಸಾದವರಿಗೆ 5 ಲಕ್ಷ ಕವರೇಜ್ ಇರುವ ಪಿಎಂ ಆಯುಷ್ಮಾನ್ ಕಾರ್ಡ್ ಮಾಡಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್
ಆಯುಷ್ಮಾನ್ ಭಾರತ್ ಇನ್ಷೂರೆನ್ಸ್ ಯೋಜನೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 28, 2024 | 5:15 PM

ಆಯುಷ್ಮಾನ್ ಭಾರತ್ ಪಿಎಂ ಜನ್ ಆರೋಗ್ಯ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ ವರ್ಷಕ್ಕೆ 5 ಲಕ್ಷ ರೂವರೆಗೆ ಇನ್ಷೂರೆನ್ಸ್ ಕವರೇಜ್ ಸಿಗುತ್ತದೆ. ವಿಮಾ ಸೌಲಭ್ಯ ಪಡೆಯಲು ಅಶಕ್ತ ಎನಿಸುವ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲವಾಗಿರುವ ಜನರನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ಯೋಜನೆ ರೂಪಿಸಿದೆ. ಗ್ರಾಮೀಣ ಭಾಗದವರು, ಎಸ್ಸಿ ಎಸ್ಟಿ ಸಮುದಾಯದವರು, ನಿರ್ಗತಿಕರು, ಅಶಕ್ತರು ಈ ಸ್ಕೀಮ್ ಅಡಿಯಲ್ಲಿ ಉಚಿತವಾಗಿ ಇನ್ಷೂರೆನ್ಸ್ ಪಡೆಯಲು ಅವಕಾಶ ಇದೆ. ಇದೀಗ ಅಕ್ಟೊಬರ್ 29ರಿಂದ 70 ವರ್ಷ ವಯಸ್ಸು ದಾಟಿದ ಎಲ್ಲಾ ಹಿರಿಯ ನಾಗರಿಕರನ್ನೂ ಸ್ಕೀಮ್ ವ್ಯಾಪ್ತಿಗೆ ತರಲಾಗಿದೆ.

ಗ್ರಾಮೀಣ ಭಾಗದಲ್ಲಿ ಆಯುಷ್ಮಾನ್ ಭಾರತ್ ಯೋಜನೆಗೆ ಇವರು ಅರ್ಹರು

  • 16ರಿಂದ 59 ವರ್ಷ ವಯೋಮಾನದ ಯಾವುದೇ ವ್ಯಕ್ತಿ ಇರದ ಕುಟುಂಬ
  • 16ರಿಂದ 59 ವರ್ಷ ವಯೋಮಾನದ ಪುರುಷ ಸದಸ್ಯರು ಇಲ್ಲದ ಕುಟುಂಬ
  • ಮಣ್ಣಿನಿಂದ ನಿರ್ಮಿಸಿದ ಒಂಟಿ ಕೊಠಡಿಯಲ್ಲಿ ವಾಸಿಸುತ್ತಿರುವ ಕುಟುಂಬ
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಕುಟುಂಬ
  • ಎಲ್ಲರೂ ವಿಶೇಷಚೇತನರೇ ಇರುವ ಕುಟುಂಬ
  • ಅನಿಯಮಿತ ಕೂಲಿಯೇ ಪ್ರಮುಖ ಆದಾಯ ಮೂಲ ಇರುವ ನಿರ್ವಸತಿಗ ಕುಟುಂಬ
  • ಭಿಕ್ಷುಕ ಕುಟುಂಬ
  • ಚಿಂದಿ ಹಾಯುವವರ ಕುಟುಂಬ

ಇದನ್ನೂ ಓದಿ: ಕಸ ಗುಡಿಸುವ ಕಾಯಕ; ಸಾಯುವಾಗ ಹೊಂದಿದ್ದ ಆಸ್ತಿ 60 ಕೋಟಿ ರೂ; ಮಾದರಿಯಾಗುವ ರೊನಾಲ್ಡ್ ರೀಡ್ ಕಥೆ

ನಗರ ಭಾಗದ ಜನರಲ್ಲಿ ಇವರು ಆಯುಷ್ಮಾನ್ ಭಾರತ್ ಸ್ಕೀಮ್​ಗೆ ಅರ್ಹರು

  • ಬೀದಿ ಬದಿಯಲ್ಲಿ ಕೆಲಸ ಮಾಡುವ ವ್ಯಾಪಾರಿಗಳು, ಚಮ್ಮಾರರು ಮತ್ತಿತರರು
  • ಮನೆಗೆಲಸದವರು
  • ಚಿಂದಿ ಆಯುವವರು, ಭಿಕ್ಷುಕರು
  • ಕಟ್ಟಡ ಕಾರ್ಮಿಕರು, ಪ್ಲಂಬರ್​ಗಳು, ಗಾರೆ ಕೆಲಸದವರು, ಪೇಂಟರ್​ಗಳು, ವೆಲ್ಡರ್​ಗಳು, ಸೆಕ್ಯೂರಿಟಿ ಗಾರ್ಡ್ ಮತ್ತಿತರರು
  • ಕೂಲಿಗಳು, ಕಸಗುಡಿಸುವವರು, ಸ್ವಚ್ಛ ಕಾರ್ಮಿಕರು, ಹಮಾಲಿಗಳು
  • ಕಂಡಕ್ಟರ್, ಡ್ರೈವರ್, ಕೈಗಾಡಿಯವರು ಮತ್ತಿತರರು
  • ಕಲಕುಶಲ ಕರ್ಮಿಗಳು, ದರ್ಜಿಗಳು, ಡೋಬಿಯವರು, ವಾಚ್​ಮನ್​ಗಳು, ಎಲೆಕ್ಟ್ರಿಶಿಯನ್, ಮೆಕ್ಯಾನಿಕ್ಸ್, ರಿಪೇರಿ ಕೆಲಸಗಾರರು, ಅಸೆಂಬ್ಲರ್​ಗಳು
  • ಪಿಯೋನ್, ಹೆಲ್ಪರ್, ಶಾಪ್ ವರ್ಕರ್, ಡೆಲಿವರಿ ಸಹಾಯಕರು, ವೇಟರ್ಸ್ ಮೊದಲಾದವರು.

ಹಿರಿಯ ನಾಗರಿಕರಿಗೆ ಹೇಗೆ ಅನ್ವಯ ಈ ಸ್ಕೀಮ್?

70 ವರ್ಷ ಮೇಲ್ಪಟ್ಟ ಯಾವುದೇ ಹಿರಿಯ ನಾಗರಿಕರೂ ಆಯುಷ್ಮಾನ್ ಭಾರತ್ ಸ್ಕೀಮ್ ಪಡೆಯಬಹುದು. ಈ ವೃದ್ಧರು ಯಾವುದೇ ಆರ್ಥಿಕ ವರ್ಗದ ಮತ್ತು ಸಾಮಾಜಿಕ ಸ್ತರದ ಸಮುದಾಯಕ್ಕೆ ಸೇರಿದವರಾಗಿರಬಹುದು. ಕುಟುಂಬದಲ್ಲಿ ಈಗಾಗಲೇ ಆಯುಷ್ಮಾನ್ ಭಾರತ್ ಕಾರ್ಡ್ ಇದ್ದರೂ ಕೂಡ ವೃದ್ಧರಿಗೆ ಪ್ರತ್ಯೇಕವಾಗಿ ಕವರೇಜ್ ಸಿಗುತ್ತದೆ.

ಇದನ್ನೂ ಓದಿ: ಅ. 29ರಂದು ಆಯುರ್ವೇದ ದಿನಾಚರಣೆಯಂದು 12,850 ಕೋಟಿ ರೂ ಮೌಲ್ಯದ ವಿವಿಧ ಆರೋಗ್ಯ ಯೋಜನೆಗಳಿಗೆ ಚಾಲನೆ

ಆಯುಷ್ಮಾನ್ ಭಾರತ್ ಇನ್ಷೂರೆನ್ಸ್ ಯೋಜನೆಯ ಅನುಕೂಲಗಳಿವು

  • ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು.
  • ಫಲಾನುಭವಿ ಕುಟುಂಬಕ್ಕೆ ಒಂದು ವರ್ಷದಲ್ಲಿ 5 ಲಕ್ಷ ರೂವರೆಗೆ ಇನ್ಷೂರೆನ್ಸ್ ಕವರೇಜ್ ಇರುತ್ತದೆ.
  • ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲೂ ವಿಮಾ ಕವರೇಜ್ ಸಿಗುತ್ತದೆ. ಖಾಸಗಿ ಆಸ್ಪತ್ರೆಯಲ್ಲೂ ಅವಕಾಶ ಇದೆ. ಸ್ಕೀಮ್​ನಲ್ಲಿ ಪಟ್ಟಿ ಮಾಡಲಾಗಿರುವ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು.
  • ಆಸ್ಪತ್ರೆಗೆ ದಾಖಲಾಗುವ ಮುನ್ನ ಮತ್ತು ಆನಂತರದ ವೆಚ್ಚವನ್ನೂ ಭರಿಸಬಹುದು.
  • ಯಾವುದೇ ಪೂರ್ವಭಾಗಿ ಅನಾರೋಗ್ಯ ಇದ್ದರೂ ಇನ್ಷೂರೆನ್ಸ್ ಕವರೇಜ್ ಇರುತ್ತದೆ.

ಆಯುಷ್ಮಾನ್ ಭಾರತ್ ಸ್ಕೀಮ್ ಅಡಿ ಇನ್ಷೂರೆನ್ಸ್ ಪಡೆಯುವುದು ಹೇಗೆ?

  • ಪಿಎಂ ಜೆಎವೈ ಯೋಜನೆಯ ಪೋರ್ಟಲ್​ಗೆ ಹೋಗಿ ನೊಂದಣಿ ಮಾಡಬಹುದು. ಪೋರ್ಟಲ್ ವಿಳಾಸ ಇಂತಿದೆ: pmjay.gov.in
  • ಪೋರ್ಟಲ್​ನ ಮುಖ್ಯಪುಟದಲ್ಲಿ ರಿಜಿಸ್ಟ್ರೇಶನ್ ಅಥವಾ ‘ಅಪ್ಲೈ ಫಾರ್ ಪಿಎಂಜೆಎವೈ’ ಸೆಕ್ಷನ್ ಅನ್ನು ಕ್ಲಿಕ್ ಮಾಡಿ.
  • ಆಧಾರ್ ಕಾರ್ಡ್, ಮೊಬೈಲ್ ನಂಬರ್ ಹಾಗೂ ಇತರ ವೈಯಕ್ತಿಕ ಮಾಹಿತಿ ನೀಡಿ ನೊಂದಣಿಯನ್ನು ಆನ್​ಲೈನ್​ನಲ್ಲೇ ಮಾಡಬಹುದು.
  • ಒಟಿಪಿ ಮೂಕ ಮೊಬೈಲ್ ನಂಬರ್ ವೆರಿಫಿಕೇಶನ್ ಮಾಡಬೇಕಾಗುತ್ತದೆ.
  • ಜನ್ಮದಿನಾಂಕ, ಕುಟುಂಬ ಸದಸ್ಯರ ಹೆಸರು ಮತ್ತಿತರ ವೈಯಕ್ತಿಕ ಮಾಹಿತಿ ಭರ್ತಿ ಮಾಡಬೇಕು.
  • ಅಗತ್ಯ ದಾಖಲೆಗಳ ಸ್ಕ್ಯಾನ್ಡ್ ಕಾಪಿಯನ್ನು ಅಪ್​ಲೋಡ್ ಮಾಡಬೇಕಾಗುತ್ತದೆ.
  • ಇದಾದ ಬಳಿಕ ಎಲ್ಲ ಮಾಹಿತಿ ಸರಿ ಇರುವುದನ್ನು ಖಾತ್ರಿಪಡಿಸಿಕೊಂಡು ಕೊನೆಯಲ್ಲಿ ಸಬ್ಮಿಟ್ ಕ್ಲಿಕ್ ಮಾಡಿರಿ.

ಇಲ್ಲಿ ಹಿರಿಯ ನಾಗರಿಕರಾದರೆ ಆಧಾರ್ ಕಾರ್ಡ್, ವೋಟರ್ ಐಡಿ, ಸೀನಿಯರ್ ಸಿಟಿಜನ್ ಕಾರ್ಡ್ ದಾಖಲೆ ಇದ್ದರೆ ಸಾಕಾಗಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ