AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅ. 29ರಂದು ಆಯುರ್ವೇದ ದಿನಾಚರಣೆಯಂದು 12,850 ಕೋಟಿ ರೂ ಮೌಲ್ಯದ ವಿವಿಧ ಆರೋಗ್ಯ ಯೋಜನೆಗಳಿಗೆ ಚಾಲನೆ

PM Modi to lauch healthcare projects worth Rs 12,850 crore: ಅಕ್ಟೋಬರ್ 29, ಮಂಗಳವಾರದಂದು ಧನ್ವಂತರಿ ಜಯಂತಿ ಮತ್ತು ಅಂತಾರಾಷ್ಟ್ರೀಯ ಆಯುರ್ವೇದ ದಿನಾಚರಣೆ ಇದೆ. ಅಂದು ಆರೋಗ್ಯ ಕ್ಷೇತ್ರದ ವಿವಿಧ ಯೋಜನೆಗಳಿಗೆ ಪ್ರಧಾನಿಗಳು ಚಾಲನೆ ಮತ್ತು ಅಡಿಗಲ್ಲು ಹಾಕಲಿದ್ದಾರೆ. ಕರ್ನಾಟಕದ ಕೆಲ ಯೋಜನೆಗಳೂ ಇದರಲ್ಲಿ ಒಳಗೊಂಡಿವೆ. 70 ವರ್ಷದ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆಯೂ ನಾಳೆಯೇ ಆಗಲಿದೆ.

ಅ. 29ರಂದು ಆಯುರ್ವೇದ ದಿನಾಚರಣೆಯಂದು 12,850 ಕೋಟಿ ರೂ ಮೌಲ್ಯದ ವಿವಿಧ ಆರೋಗ್ಯ ಯೋಜನೆಗಳಿಗೆ ಚಾಲನೆ
ನರೇಂದ್ರ ಮೋದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Oct 28, 2024 | 4:17 PM

Share

ನವದೆಹಲಿ, ಅಕ್ಟೋಬರ್ 28: ನಾಳೆ ಮಂಗಳವಾರ ಧನ್ವಂತರಿ ಜಯಂತಿ ಇದೆ. ಆ ದಿನವನ್ನು ಆಯುರ್ವೇದ ದಿನವಾಗಿಯೂ ಆಚರಿಸಲಾಗುತ್ತದೆ. ನಾಳೆಯದ್ದು 9ನೇ ಆಯುರ್ವೇದ ದಿನವಾಗಿದ್ದು, ಆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಈ ಯೋಜನೆಗಳ ಒಟ್ಟು ಮೌಲ್ಯ 12,850 ಕೋಟಿ ರೂಗೂ ಹೆಚ್ಚು ಎನ್ನಲಾಗಿದೆ.

ಆಯುಷ್ಮಾನ್ ಭಾರತ್ ಪಿಎಂ ಜನ್ ಆರೋಗ್ಯ ಯೋಜನೆಯ ವ್ಯಾಪ್ತಿಯನ್ನು 70 ವರ್ಷ ಮೇಲ್ಪಟ್ಟ ಎಲ್ಲಾ ವೃದ್ಧರಿಗೂ ವಿಸ್ತರಿಸಲಾಗುತ್ತದೆ. ಯಾವುದೇ ಸಮುದಾಯದ, ಯಾವುದೇ ಆರ್ಥಿಕ ಮಟ್ಟದ ಹಿರಿಯ ನಾಗರಿಕರಿಗೆ ಈ ಸ್ಕೀಮ್ ಲಭ್ಯ ಇರುತ್ತದೆ.

ಇದನ್ನೂ ಓದಿ: ವಡೋದರಾದಲ್ಲಿ ಟಾಟಾ ಗ್ರೂಪ್​ನಿಂದ ಮಿಲಿಟರಿ ವಿಮಾನದ ಫ್ಯಾಕ್ಟರಿ; ಸ್ಪೇನ್ ಪ್ರಧಾನಿ ಮತ್ತು ನರೇಂದ್ರ ಮೋದಿಯಿಂದ ಉದ್ಘಾಟನೆ

ಅಕ್ಟೋಬರ್ 29ರಂದು ಪಿಎಂ ಚಾಲನೆಗೊಳಿಸುತ್ತಿರುವ ವಿವಿಧ ಯೋಜನೆಗಳು

  • ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹಲವು ಹೆಲ್ತ್​ಕೇರ್ ಸಂಸ್ಥೆಗಳ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗುತ್ತದೆ.
  • ವಿವಿಧ ರಾಜ್ಯಗಳಲ್ಲಿ ಆಸ್ಪತ್ರೆ, ನರ್ಸಿಂಗ್ ಕಾಲೇಜು ಇತ್ಯಾದಿಗಳ ಉದ್ಘಾಟನೆ ಆಗಲಿದೆ.
  • ಭಾರತದ ಮೊದಲ ಅಖಿಲ ಭಾರತ ಆಯುರ್ವೇದ ಸಂಸ್ಥೆಯ ಎರಡನೇ ಹಂತದ ಯೋಜನೆಗೆ ಪಿಎಂ ಚಾಲನೆ ನೀಡಲಿದ್ದಾರೆ.
  • ದೇಶದ ವಿವಿಧೆಡೆ 11 ತೃತೀಯ ಆರೋಗ್ಯಪಾಲನಾ ಕೇಂದ್ರಗಳಲ್ಲಿ ಡ್ರೋನ್ ಸರ್ವಿಸ್​ಗೆ ಚಾಲನೆ ನೀಡಲಿದ್ದಾರೆ.
  • ಲಸಿಕೆ ಪ್ರಕ್ರಿಯೆ ಡಿಜಿಟಲೀಕರಣಕ್ಕಾಗಿ ಪ್ರಧಾನಿಗಳು ಯು-ವಿನ್ ಪೋರ್ಟಲ್ ಅನ್ನು ಪಿಎಂ ಚಾಲನೆ ನೀಡಲಿದ್ದಾರೆ. ಇದರಿಂದ ಗರ್ಭಿಣಿಯರು ಮತ್ತು ಶಿಶುಗಳಿಗೆ ಅನುಕೂಲವಾಗಲಿದೆ.
  • ಮೆಡಿಕಲ್ ಡಿವೈಸ್ ಮತ್ತು ಬಲ್ಕ್ ಆಗಿ ಔಷಧಗಳನ್ನು ಪಿಎಲ್​ಐ ಸ್ಕೀಮ್ ಅಡಿಯಲ್ಲಿ ತಯಾರಿಸಲು ಐದು ಯೋಜನೆಗಳಿಗೆ ಪಿಎಂ ಚಾಲನೆ ನೀಡಲಿದ್ದಾರೆ.
  • ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಅಂಡ್ ಡಿ) ಬಲಪಡಿಸಲು ವಿವಿಧ ಕ್ರಮಗಳಿಗೆ ಚಾಲನೆ ಸಿಗಲಿದೆ.

ಇದನ್ನೂ ಓದಿ: ಐದಾರು ವರ್ಷದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಸಾವಿರ ಹೊಸ ಸ್ಟಾರ್ಟಪ್​ಗಳ ಆರಂಭ: ಪ್ರಧಾನಿ ಮೋದಿ

ಆಯುಷ್ಮಾನ್ ಭಾರತ್ ಹೆಲ್ತ್ ಇನ್​ಫ್ರಾಸ್ಟ್ರಕ್ಚರ್ ಮಿಷನ್ ಅಡಿಯಲ್ಲಿ ದೇಶದ ವಿವಿಧೆಡೆ 21 ಕ್ರಿಟಿಕಲ್ ಕೇರ್ ಬ್ಲಾಕ್​ಗಳನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ ಕರ್ನಾಟಕವೂ ಒಳಗೊಂಡಿದೆ. ಇನ್ನು, ನರಸಾಪುರ ಮತ್ತು ಬೆಂಗಳೂರಿನ ಬೊಮ್ಮಸಂದ್ರದಲ್ಲಿ ಇಎಸ್​ಐ ಆಸ್ಪತ್ರೆ ನಿರ್ಮಾಣಕ್ಕೆ ನಾಳೆ ಅಡಿಗಲ್ಲು ಹಾಕಲಾಗುತ್ತಿದೆ.

ವೈದ್ಯಕೀಯ ಸಾಧನ ಮತ್ತು ಔಷಧಗಳ ತಯಾರಿಕೆಗೆ ಇರುವ ಪಿಎಲ್​ಐ ಸ್ಕೀಮ್ ಅಡಿಯಲ್ಲಿ ಐದು ಯೋಜನೆಗಳು ನಾಳೆ ಆರಂಭವಾಗುತ್ತಿವೆ. ಇದರಲ್ಲಿ ಬೆಂಗಳೂರಿನಲ್ಲಿ ಒಂದು ಸ್ಥಾಪನೆಯಾಗುತ್ತಿದೆ.

ಪಿಎಂ ಅವರು ನಾಲ್ಕು ಕಡೆ ಆಯುಷ್ ಎಕ್ಸಲೆನ್ಸ್ ಸೆಂಟರ್​ಗಳನ್ನು ಉದ್ಘಾಟಿಸುತ್ತಿದ್ದಾರೆ. ಬೆಂಗಳೂರಿಯ ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಸೈನ್ಸ್​ನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಡಯಾಬಿಟಿಸ್ ಅಂಡ್ ಮೆಟಬಾಲಿಕ್ ಡಿಸಾರ್ಡರ್ಸ್ ಎನ್ನುವ ಕೇಂದ್ರವೂ ಇದರಲ್ಲಿ ಸೇರಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:17 pm, Mon, 28 October 24

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಶಾಲೆಗಳಲ್ಲಿ ಕೇಸರಿ ಶಾಲಿಗೆ ಅವಕಾಶವಿಲ್ಲ: ಹಾಕಿಕೊಂಡು ಬಂದ್ರೆ ಕಾನೂನು ಕ್ರಮ
ಶಾಲೆಗಳಲ್ಲಿ ಕೇಸರಿ ಶಾಲಿಗೆ ಅವಕಾಶವಿಲ್ಲ: ಹಾಕಿಕೊಂಡು ಬಂದ್ರೆ ಕಾನೂನು ಕ್ರಮ
ಆರತಿ ಎತ್ತಿದ ಮಹಿಳೆಯರಿಗೆ ಗರಿಗರಿ ನೋಟ ನೀಡಿದ ಸಿಎಂ ಸಿದ್ದರಾಮಯ್ಯ
ಆರತಿ ಎತ್ತಿದ ಮಹಿಳೆಯರಿಗೆ ಗರಿಗರಿ ನೋಟ ನೀಡಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರಲ್ಲಿ ಸಿಎನ್​​ಜಿ ದರ 2 ರೂ ಏರಿಕೆ: ವಾಹನ ಸವಾರರು ಕಂಗಾಲು
ಬೆಂಗಳೂರಲ್ಲಿ ಸಿಎನ್​​ಜಿ ದರ 2 ರೂ ಏರಿಕೆ: ವಾಹನ ಸವಾರರು ಕಂಗಾಲು
ಸ್ಪೀಡ್ ಬ್ರೇಕರ್ ಕಾಣದೆ ವೇಗವಾಗಿ ಬಂದ ಬೈಕ್​; ಮುಂದೇನಾಯಿತು ನೋಡಿ
ಸ್ಪೀಡ್ ಬ್ರೇಕರ್ ಕಾಣದೆ ವೇಗವಾಗಿ ಬಂದ ಬೈಕ್​; ಮುಂದೇನಾಯಿತು ನೋಡಿ
ಬಳ್ಳಾರಿ: ಪಾಲಿಕೆ ಸದಸ್ಯೆ ಪತಿಯಿಂದ ಬಡವರಿಗೆ ಮಹಾವಂಚನೆ!
ಬಳ್ಳಾರಿ: ಪಾಲಿಕೆ ಸದಸ್ಯೆ ಪತಿಯಿಂದ ಬಡವರಿಗೆ ಮಹಾವಂಚನೆ!
ಕಾನ್​ ಸಿನಿಮೋತ್ಸವದಲ್ಲಿ ಫ್ಲೈಯಿಂಗ್ ಕಿಸ್ ಕೊಟ್ಟ ಐಶ್ವರ್ಯಾ ರೈ
ಕಾನ್​ ಸಿನಿಮೋತ್ಸವದಲ್ಲಿ ಫ್ಲೈಯಿಂಗ್ ಕಿಸ್ ಕೊಟ್ಟ ಐಶ್ವರ್ಯಾ ರೈ
ಗುರು ಸಂಚಾರ ಸಿಂಹ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಗುರು ಸಂಚಾರ ಸಿಂಹ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ, 80ಕ್ಕೂ ಅಧಿಕ ಮಂದಿ ಸಾವು
ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ, 80ಕ್ಕೂ ಅಧಿಕ ಮಂದಿ ಸಾವು
ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದ ಮೃತನ ತಂದೆ
ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದ ಮೃತನ ತಂದೆ
ಯುವಕರಿಗೆ ಸ್ವಿಮ್ಮಿಂಗ್ ಪೂಲ್ ಆಗಿದ್ದ ಹೊಂಡಕ್ಕೆ ಮೊಸಳೆ ಎಂಟ್ರಿ
ಯುವಕರಿಗೆ ಸ್ವಿಮ್ಮಿಂಗ್ ಪೂಲ್ ಆಗಿದ್ದ ಹೊಂಡಕ್ಕೆ ಮೊಸಳೆ ಎಂಟ್ರಿ