ಪವಿತ್ರ ಧನತ್ರಯೋದಶಿ: ಇವತ್ತು ಸಂಜೆ ಚಿನ್ನ, ಬೆಳ್ಳಿ ಖರೀದಿಗೆ ಶುಭ ಸಮಯ; ಇಲ್ಲಿದೆ ವಿವಿಧ ನಗರಗಳ ಶುಭಕಾಲದ ಪಟ್ಟಿ
Dhanteras time to buy Gold: ದೀಪಾವಳಿ ಸಂದರ್ಭದಲ್ಲಿ ಬರುವ ಧನ್ವಂತರಿ ಜಯಂತಿಯ ದಿನವನ್ನು ಧನತೇರಸ್ ಅಥವಾ ಧನತ್ರಯೋದಶಿ ಎಂದು ಕರೆಯಲಾಗುತ್ತದೆ. ಮೌಲ್ಯಯುತ ವಸ್ತುಗಳಾದ ಚಿನ್ನ, ಬೆಳ್ಳಿ ಇತ್ಯಾದಿಯನ್ನು ಈ ದಿನದಂದು ಖರೀದಿಸಿದರೆ ಜೀವನದಲ್ಲಿ ಸಮೃದ್ಧಿ ಒದಗಿ ಬರುತ್ತದೆ ಎನ್ನುವ ನಂಬಿಕೆ ಇದೆ. ಈ ದಿನದಂದು ಚಿನ್ನ ಖರೀದಿಸಲು ಶುಭಕಾಲಗಳ ನಗರವಾರು ಪಟ್ಟಿ ಇಲ್ಲಿದೆ..
ನವದೆಹಲಿ, ಅಕ್ಟೋಬರ್ 29: ಭಾರತದಲ್ಲಿ ವರ್ಷದಲ್ಲಿ ಎರಡು ದಿನವನ್ನು ಚಿನ್ನದ ಖರೀದಿಗೆ ಬಹಳ ಶುಭ ಸಮಯ ಎಂದು ಪರಿಗಣಿಸಲಾಗುತ್ತದೆ. ಮೊದಲನೆಯದು, ಅಕ್ಷಯ ತೃತೀಯ. ಎರಡನೆಯದು ಧನತ್ರಯೋದಶಿ. ಅಕ್ಷಯ ತೃತೀಯ ಸಾಮಾನ್ಯವಾಗಿ ಮೇ ತಿಂಗಳಲ್ಲಿ ಬರುತ್ತದೆ. ಧನತೇರಸ್ ಅಥವಾ ಧನತ್ರಯೋದಶಿ ಅಕ್ಟೋಬರ್-ನವಂಬರ್ ತಿಂಗಳಲ್ಲಿ ಬರುತ್ತದೆ. ಈ ಬಾರಿ ಅಕ್ಟೋಬರ್ 29, ಇಂದು ಇದೆ. ಚಿನ್ನ ಮತ್ತು ಬೆಳ್ಳಿಯನ್ನು ಇವತ್ತು ಖರೀದಿಸಿದರೆ ಜೀವನದಲ್ಲಿ ಸಂಪತ್ತು ಸಮೃದ್ಧವಾಗಿ ಉಕ್ಕಿ ಬರುತ್ತದೆ ಎನ್ನುವ ನಂಬಿಕೆ ಭಾರತೀಯ ಸಂಸ್ಕೃತಿಯಲ್ಲಿ ಇದೆ.
ಧನತ್ರಯೋದಶಿ 2024ರ ದಿನ ಮತ್ತು ಸಮಯ
ಧನ್ವಂತರಿ ತ್ರಯೋದಶಿ ಅಕಾ ಧನತ್ರಯೋದಶಿ ದಿನದಂದು ಸಂಜೆ 7ರಿಂದ 8:49ರವರೆಗಿನ ಸಮಯವು ದೇವರಿಗೆ ಪೂಜೆ ಸಲ್ಲಿಸಲು ಪ್ರಶಸ್ತ ಎನ್ನಲಾಗಿದೆ. ಈ ಅವಧಿಯಲ್ಲಿ ಯಮರಾಜನಿಗೆ ದೀಪ ಹಚ್ಚುವ ಪರಿಪಾಟವೂ ಇದೆ.
ಇದನ್ನೂ ಓದಿ: Gold Silver Price on 29th October: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಏರಿಕೆ; ಬೆಳ್ಳಿಯೂ ದುಬಾರಿ
ಇಂದು ಖರೀದಿಸಬೇಕೆನ್ನುವವರಿಗೆ ಪ್ರದೋಷ ಕಾಲ ಮತ್ತು ವೃಷಭ ಕಾಲ ಎರಡು ಶುಭಕಾಲಗಳಿವೆ. ಪ್ರದೋಷ ಕಾಲ ಅಕ್ಟೋಬರ್ 29, ಸಂಜೆ 6:12ರಿಂದ 8:53ರವರೆಗೆ ಇದೆ. ವೃಷಭ ಕಾಲ ಸಂಜೆ 7ರಿಂದ ಆರಂಭವಾಗಿ 8:49ರವರೆಗೂ ಇದೆ.
ಅಕ್ಟೋಬರ್ 29ರಂದು ಚಿನ್ನ, ಬೆಳ್ಳಿ ಖರೀದಿಗೆ ನಗರವಾರು ಶುಭಕಾಲಗಳ ಪಟ್ಟಿ
- ನವದೆಹಲಿ: ಸಂಜೆ 6:31ರಿಂದ 8:13ರವರೆಗೆ
- ಗುರುಗ್ರಾಮ್: ಸಂಜೆ 6:32ರಿಂದ 8:14ರವರೆಗೆ
- ನೋಯ್ಡಾ: ಸಂಜೆ 6:31ರಿಂದ 8:12ರವರೆಗೆ
- ಮುಂಬೈ: ಸಂಜೆ 7:04ರಿಂದ 8:37ರವರೆಗೆ
- ಪುಣೆ: ಸಂಜೆ 7:01ರಿಂದ 8:33ರವರೆಗೆ
- ಚೆನ್ನೈ: ಸಂಜೆ 6:44ರಿಂದ 8:11ರವರೆಗೆ
- ಜೈಪುರ್: ಸಂಜೆ 6:40ರಿಂದ 8:20ರವರೆಗೆ
- ಹೈದರಾಬಾದ್: ಸಂಜೆ 6:45ರಿಂದ 8:15ರವರೆಗೆ
- ಚಂಡೀಗಡ: ಸಂಜೆ 6:29ರಿಂದ 8:13ರವರೆಗೆ
- ಕೋಲ್ಕತಾ: ಸಂಜೆ 5:57ರಿಂದ 7:33ರವರೆಗೆ
- ಬೆಂಗಳೂರು: ಸಂಜೆ 6:55ರಿಂದ 8:22ರವರೆಗೆ
- ಅಹ್ಮದಾಬಾದ್: ಸಂಜೆ 6:59ರಿಂದ 8:35ರವರೆಗೆ
ಯಾವ್ಯಾವ ವಸ್ತುಗಳನ್ನು ಖರೀದಿಸಿದರೆ ಸಂಪತ್ತು ವೃದ್ಧಿ?
ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆಯ ವಸ್ತುಗಳನ್ನು ಖರೀದಿಸಬಹುದು. ಮಣ್ಣು ಅಥವಾ ಲೋಹದಲ್ಲಿ ಮಾಡಿದ ಲಕ್ಷ್ಮೀ ಮತ್ತು ಗಣಪತಿಯ ವಿಗ್ರಹ ಖರೀದಿಸುವುದು ಶುಭಕರ ಎನ್ನಲಾಗಿದೆ.
ಇದನ್ನೂ ಓದಿ: ಎಸ್ಜಿಬಿ vs ಗೋಲ್ಡ್ ಇಟಿಎಫ್ vs ಡಿಜಿಟಲ್ ಗೋಲ್ಡ್; ಯಾವುದು ಉತ್ತಮ? ಇಲ್ಲಿದೆ ಒಂದು ಹೋಲಿಕೆ
ಧನತ್ರಯೋದಶಿ ದಿನದಂದು ಕಾರು, ಫೋನ್, ಲ್ಯಾಪ್ಟಾಪ್, ಮೈಕ್ರೋವೇವ್, ಫ್ರಿಜ್ ಇತ್ಯಾದಿ ವಸ್ತುಗಳನ್ನು ಖರೀದಿಸುವುದೂ ಒಳ್ಳೆಯದು ಎಂಬ ನಂಬಿಕೆ ಇದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ