ಎಸ್​ಜಿಬಿ vs ಗೋಲ್ಡ್ ಇಟಿಎಫ್ vs ಡಿಜಿಟಲ್ ಗೋಲ್ಡ್; ಯಾವುದು ಉತ್ತಮ? ಇಲ್ಲಿದೆ ಒಂದು ಹೋಲಿಕೆ

SGB vs Gold ETF vs Digital Gold: ಚಿನ್ನದ ಮೇಲೆ ಹೂಡಿಕೆ ಮಾಡಲು ಇವತ್ತು ವಿವಿಧ ಆಯ್ಕೆಗಳಿವೆ. ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್, ಗೋಲ್ಡ್ ಇಟಿಎಫ್, ಡಿಜಿಟಲ್ ಗೋಲ್ಡ್, ಗೋಲ್ಡ್ ಮ್ಯುಚುವಲ್ ಫಂಡ್ ಇತ್ಯಾದಿ ಇವೆ. ಎಸ್​ಜಿಬಿ ಸರ್ಕಾರದ ವತಿಯಿಂದ ಇರುವ ಸ್ಕೀಮ್. ಇತರ ಹೂಡಿಕೆಗಳಲ್ಲಿ ತೆರಿಗೆ ಮತ್ತಿತರ ಶುಲ್ಕಗಳಿರುತ್ತವೆ. ಈ ಬಗ್ಗೆ ಒಂದು ವರದಿ ಇಲ್ಲಿದೆ.

ಎಸ್​ಜಿಬಿ vs ಗೋಲ್ಡ್ ಇಟಿಎಫ್ vs ಡಿಜಿಟಲ್ ಗೋಲ್ಡ್; ಯಾವುದು ಉತ್ತಮ? ಇಲ್ಲಿದೆ ಒಂದು ಹೋಲಿಕೆ
ಗೋಲ್ಡ್ ಇಟಿಎಫ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 28, 2024 | 2:31 PM

ನೀವು ಆಭರಣ ಮಾಡಿಸಿಕೊಳ್ಳಲು ಚಿನ್ನವನ್ನು ಖರೀದಿಸುತ್ತಿಲ್ಲ ಎಂದಾದಲ್ಲಿ, ಅಂದರೆ ಕೇವಲ ಹೂಡಿಕೆಗಾಗಿ ಚಿನ್ನವನ್ನು ಖರೀದಿಸುತ್ತೀರಿ ಎಂದಾದಲ್ಲಿ ಹಲವು ಆಯ್ಕೆಗಳು ಸಿಗುತ್ತವೆ. ಭೌತಿಕ ಚಿನ್ನವನ್ನೇ ಖರೀದಿಸಬೇಕೆಂದಿಲ್ಲ. ಸಾವರಿನ್ ಗೋಲ್ಡ್ ಬಾಂಡ್, ಡಿಜಿಟಲ್ ಗೋಲ್ಡ್, ಗೋಲ್ಡ್ ಇಟಿಎಫ್, ಗೋಲ್ಡ್ ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡುವ ಆಯ್ಕೆಗಳಿವೆ. ಇವುಗಳ ಬಗ್ಗೆ ಒಂದು ಸಂಕ್ಷಿಪ್ತ ವಿವರಣೆ ಇಲ್ಲಿದ್ದು, ನಿಮಗೆ ಯಾವ ಹೂಡಿಕೆ ಸೂಕ್ತ ಎಂಬುದನ್ನು ನೀವೇ ನಿರ್ಧರಿಸಬಹುದು.

ಸಾವರಿನ್ ಗೋಲ್ಡ್ ಬಾಂಡ್ ಯೋಜನೆ

ಇದು ಚಿನ್ನದ ಮೌಲ್ಯದ ಮೇಲೆ ಮಾಡುವ ಹೂಡಿಕೆಯಾಗಿದೆ. ಸರ್ಕಾರದ ವತಿಯಿಂದ ನಡೆಯುವ ಈ ಸ್ಕೀಮ್​ನಲ್ಲಿ ಹೂಡಿಕೆಯು ಎಂಟು ವರ್ಷಕ್ಕೆ ಮೆಚ್ಯೂರ್ ಆಗುತ್ತದೆ. 1 ಗ್ರಾಮ್​ನಿಂದ ಹಿಡಿದು 4 ಕಿಲೋ ಚಿನ್ನದವರೆಗೆ ಹೂಡಿಕೆಗೆ ಅವಕಾಶ ಇದೆ. ಇವತ್ತು ಚಿನ್ನದ ಬೆಲೆ 8,000 ರೂ ಇದೆ ಎಂದಿಟ್ಟುಕೊಳ್ಳಿ. ನೀವು 100 ಗ್ರಾಮ್ ಚಿನ್ನದ ಮೇಲೆ ಹೂಡಿಕೆ ಮಾಡುತ್ತೀರಿ. ಅಂದರೆ ಎಂಟು ಲಕ್ಷ ರೂಗೆ ಎಸ್​ಜಿಬಿ ಪಡೆಯುತ್ತೀರಿ. ಎಂಟು ವರ್ಷದ ಬಳಿಕ ಚಿನ್ನದ ಬೆಲೆ ಗ್ರಾಮ್​ಗೆ 20,000 ರೂ ಆಗಿರುತ್ತದೆ ಎಂದರೆ ನಿಮ್ಮ ಹೂಡಿಕೆ 20 ಲಕ್ಷ ರೂ ಆಗಿರುತ್ತದೆ. ನಿಮ್ಮ ಕೈಗೆ ಚಿನ್ನದ ಬದಲು ಅದರ ಮೌಲ್ಯದಷ್ಟು ಹಣ ಸಿಗುತ್ತದೆ.

ಜೊತೆಗೆ, ಎಂಟು ವರ್ಷದಾದ್ಯಂತ ನಿಮ್ಮ ಹೂಡಿಕೆ ಮೊತ್ತದ ಮೇಲೆ ಶೇ. 2.5ರಷ್ಟು ಬಡ್ಡಿಯನ್ನೂ ನೀಡಲಾಗುತ್ತದೆ. ಯಾವ ಆದಾಯ ತೆರಿಗೆ ಇರುವುದಿಲ್ಲ. ಈ ಸ್ಕೀಮ್ ದೀರ್ಘಾವಧಿ ಹೂಡಿಕೆಗೆ ಹೇಳಿ ಮಾಡಿಸಿದೆ. ಮಧ್ಯದಲ್ಲಿ ಹೂಡಿಕೆ ಹಿಂಪಡೆಯಲು ಆಗುವುದಿಲ್ಲ ಎನ್ನುವುದು ಬಿಟ್ಟರೆ ಎಸ್​ಜಿಬಿಯಿಂದ ನಾನಾ ರೀತಿಯಲ್ಲಿ ಲಾಭ ಇದೆ.

ಇದನ್ನೂ ಓದಿ: SBIಯ ಹೊಸ ನಿಶ್ಚಿತ ಠೇವಣಿ ಯೋಜನೆ: ಅಮೃತ್ ವೃಷ್ಟಿ ಪ್ಲಾನ್​ನ ವಿವರ ಮತ್ತು ಬಡ್ಡಿ ದರ

ಡಿಜಿಟಲ್ ಗೋಲ್ಡ್

ಫೋನ್ ಪೇ, ಪೇಟಿಎಂ ಇತ್ಯಾದಿ ಪ್ಲಾಟ್​ಫಾರ್ಮ್​ಗಳಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಆದರೆ, ನೀವು ಚಿನ್ನ ಖರೀದಿಸುವಾಗ ಶೇ. 3ರಷ್ಟು ಜಿಎಸ್​ಟಿ ಕಟ್ಟುತ್ತೀರಿ. ಮಾರುವಾಗಲೂ ಶೇ. 3 ಜಿಎಸ್​ಟಿ ಕಟ್ಟುತ್ತೀರಿ. ಹೀಗಾಗಿ, ಡಿಜಿಟಲ್ ಗೋಲ್ಡ್ ಮೇಲಿನ ಹೂಡಿಕೆ ಒಂದೆರಡು ವರ್ಷಕ್ಕೆ ಸೂಕ್ತವಿರುವುದಿಲ್ಲ. ಇದೂ ಕೂಡ ದೀರ್ಘಾವಧಿಗೆ ಇರಬೇಕಾಗುತ್ತದೆ.

ಇದರ ಅನುಕೂಲತೆ ಎಂದರೆ ನೀವು ಯಾವಾಗ ಬೇಕಾದರೂ ಹೂಡಿಕೆ ಹಿಂಪಡೆಯಬಹುದು. ಭೌತಿಕ ಚಿನ್ನದ ರೂಪದಲ್ಲಾದರೂ ಸರಿ, ಹಣದ ರೂಪದಲ್ಲಾದರೂ ಸರಿ ರಿಟರ್ನ್ ಪಡೆಯಬಹುದು.

ಗೋಲ್ಡ್ ಇಟಿಎಫ್

ಇಟಿಎಫ್ ಎಂದರೆ ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್. ಷೇರು ಮಾರುಕಟ್ಟೆಯಲ್ಲಿ ವಿನಿಮಯವಾಗುವ ಫಂಡ್ ಇದು. ಚಿನ್ನದ ಬೆಲೆಗೆ ಅನುಗುಣವಾಗಿ ಗೋಲ್ಡ್ ಇಟಿಎಫ್​ನ ರಿಟರ್ನ್​ನಲ್ಲಿ ಏರಿಳಿತಗಳಾಗುತ್ತವೆ. ಗೋಲ್ಡ್ ಇಟಿಎಫ್​ನಲ್ಲಿ ನೀವು ಮಾಡುವ ಹೂಡಿಕೆಯನ್ನು ಫಂಡ್​ನವರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಹೀಗಾಗಿ, ಚಿನ್ನದ ಬೆಲೆ ಹೆಚ್ಚಾದಂತೆ ಅದಕ್ಕೆ ಅನುಗುಣವಾಗಿ ಗೋಲ್ಡ್ ಇಟಿಎಫ್ ಯೂನಿಟ್ ಬೆಲೆಯೂ ಹೆಚ್ಚುತ್ತಾ ಹೋಗುತ್ತದೆ.

ಇದನ್ನೂ ಓದಿ: ನ್ಯಾಷನಲ್ ಪೆನ್ಷನ್ ಸ್ಕೀಮ್ ಮೂಲಕ ಲಕ್ಷ ರೂ ಪಿಂಚಣಿ ಸೃಷ್ಟಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ಗೋಲ್ಡ್ ಇಟಿಎಫ್​ನಲ್ಲಿ ಹೆಚ್ಚಿನ ಶುಲ್ಕ ಇರುವುದಿಲ್ಲ. ಪ್ಲಾಟ್​ಫಾರ್ಮ್ ಫೀ ಹಾಗೂ ಫಂಡ್ ಫೀ ಒಂದಷ್ಟು ಕಟ್ಟಬೇಕಾಗುತ್ತದೆ. ಈ ಇಟಿಎಫ್​ನ ಅನುಕೂಲವೆಂದರೆ ನೀವು ಯಾವಾಗ ಬೇಕಾದರೂ ಹೂಡಿಕೆಯನ್ನು ಹಿಂಪಡೆಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ