Video: ಮರಳಿ ಬಾಲ್ಯವನ್ನು ನೆನಪಿಸುವಂತಿದೆ ಈ ದೃಶ್ಯ; ಪಾಠದ ನಡುವೆ ತಿಂಡಿ ತಿಂದ ಪುಟಾಣಿ
ಪುಟಾಣಿ ಮಕ್ಕಳು ಶಾಲಾ ಶಿಕ್ಷಕರನ್ನು ಯಾಮಾರಿಸುವುದಿದೆ. ಕೆಲವೊಮ್ಮೆ ಕ್ಲಾಸ್ ರೂಮ್ ನಲ್ಲಿ ಟೀಚರ್ ಗೆ ತಿಳಿಯದಂತೆ ತಿಂಡಿ ತಿಂದು ಸಿಕ್ಕಿ ಬೀಳುತ್ತಾರೆ. ಈ ವಿಡಿಯೋ ನೋಡಿದ್ರೆ ನಿಮಗೆ ನಿಮ್ಮ ಬಾಲ್ಯ ಖಂಡಿತ ನೆನಪಾಗುತ್ತದೆ. ಪುಟ್ಟ ಹುಡುಗನು ಕ್ಲಾಸ್ ರೂಮ್ ನಲ್ಲಿ ಟೀಚರ್‌ಗೆ ತಿಳಿಯದಂತೆ ಟಿಫಿನ್ ಬಾಕ್ಸ್ ಓಪನ್ ಮಾಡಿ ತಿಂಡಿ ತಿಂದಿದ್ದಾನೆ. ಪುಟಾಣಿಯ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.

ಪುಟ್ಟ ಮಕ್ಕಳು (little kids) ಕ್ಲಾಸ್ ರೂಮ್ ನಲ್ಲಿ ಶಿಕ್ಷಕರಿಗೆ ತಿಳಿಯದಂತೆ ಚಾಕಲೇಟ್ ತಿನ್ನೋದು, ಟಿಫನ್ ಬಾಕ್ಸ್ ತೆರೆದು ತಿಂಡಿ ತಿನ್ನೋದು ಹೀಗೆ ಇನ್ನಿತ್ತರ ಚಟುವಟಿಕೆಯಲ್ಲಿ ತೊಡಗಿ ಸಿಕ್ಕಿ ಬೀಳುತ್ತಾರೆ. ನೀವು ಕೂಡ ಶಿಕ್ಷಕರಿಗೆ ಚಳ್ಳೆ ಹಣ್ಣು ತಿನ್ನಿಸಿರಬಹುದು. ಕೆಲವೊಮ್ಮೆ ಟೀಚರ್ ಕೈಯಲ್ಲಿ ಸಿಕ್ಕಿ ಬಿದ್ದು ನೆಪಗಳನ್ನು ಹೇಳಿದ್ದೀರಬಹುದು. ಈ ಪುಟಾಣಿಯದ್ದು ಅದೇ ಕಥೆ. ಪುಟಾಣಿಯು ಶಿಕ್ಷಕರನ್ನು ಯಾಮಾರಿಸುವ ವಿಡಿಯೋ ವೈರಲ್ ಆಗಿದೆ. ಟೀಚರ್ ಹೋಮ್ ವರ್ಕ್ ಮಾಡೋದಕ್ಕೆ ಹೇಳಿದ್ರೆ ಈ ಪುಟ್ಟ ಹುಡುಗ ಟಿಫನ್ ಬಾಕ್ಸ್ ತೆರೆದು ಮೆಲ್ಲನೆ ತಿಂಡಿ ತಿನ್ನುತ್ತಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.
ನಾಝಿಯಾ ಆಮೀರ್ (Nazia Aamir) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲೂ ಕ್ಲಾಸ್ ರೂಮ್ ದೃಶ್ಯವನ್ನು ನೋಡಬಹುದು. ಸಹಪಾಠಿಗಳು ಬರೆಯುವುದರಲ್ಲಿ ಬ್ಯುಸಿಯಾದ್ರೆ, ಈ ಪುಟ್ಟ ಹುಡುಗನು ಟೀಚರ್‌ಗೆ ತಿಳಿಯದಂತೆ ಮೆಲ್ಲನೆ ಟಿಫಿನ್ ಬಾಕ್ಸ್ ತೆರೆದು ತಿಂಡಿ ತಿನ್ನುತ್ತಿದ್ದಾನೆ. ತದನಂತರದಲ್ಲಿ ಏನು ಅರಿಯದಂತೆ ಬರೆಯಲು ಶುರು ಮಾಡಿದ್ದಾನೆ. ಈ ಪುಟ್ಟ ಹುಡುಗನ ಕಳ್ಳಾಟವನ್ನು ಶಿಕ್ಷಕರೊಬ್ಬರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ: ಮಾಲ್‌ನಲ್ಲಿದ್ದ ಗೊಂಬೆಗಳ ಪಾದ ಮುಟ್ಟಿ ನಮಸ್ಕರಿಸಿದ ಪುಟಾಣಿ
ಈ ವಿಡಿಯೋ ಆರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಬಾಲ್ಯದಲ್ಲಿ ನಾನು ಹೀಗೆ ಮಾಡಿದ್ದೆ ಎಂದು ಹೇಳಿದರೆ, ಇನ್ನೊಬ್ಬರು ತುಂಬಾ ಮುದ್ದಾದ ವಿಡಿಯೋ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಖಂಡಿತವಾಗಿ ಇದು ನಾನೇ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




