
ಪುಟಾಣಿಗಳು (little kids) ಏನು ಮಾಡಿದರೂ ಕೂಡ ಚಂದನೇ. ಪುಟ್ಟ ಮಕ್ಕಳು ಆಟ ಆಡುತ್ತಾ ಮುಗ್ಗರಿಸಿಕೊಂಡು ಬೀಳುವುದನ್ನು ನೀವು ನೋಡಿರುತ್ತೀರಿ. ಆದರೆ ಈ ಮೊಮ್ಮಗನು ಒಂದು ಹೆಜ್ಜೆ ಮುಂದೆ ಹೋಗಿದ್ದು, ತನ್ನ ಅಜ್ಜಿಯೂ (grand mother) ಬೀಳುವಂತೆ ಮಾಡಿದ್ದಾನೆ. ತನ್ನ ಅಜ್ಜಿಯನ್ನು ಸೈಕಲ್ ಮೇಲೆ ಏರಲು ಹೇಳಿ, ಅಜ್ಜಿ ಮೊಮ್ಮಗ ಇಬ್ಬರೂ ಮುಗ್ಗರಿಸಿಕೊಂಡು ಬಿದ್ದಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ.
Bardhaman_kora_kuri_dp_battle ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಅಜ್ಜಿ ಮೊಮ್ಮಗನ ಸೈಕಲ್ ಸವಾರಿಯನ್ನು ನೋಡಬಹುದು. ಅಜ್ಜಿಯನ್ನು ತನ್ನ ಪುಟ್ಟ ಸೈಕಲ್ ಮೇಲೆ ಕೂರಿಸಿಕೊಂಡು ರೈಡ್ ಹೋಗಲು ಮುಂದಾಗಿದ್ದಾನೆ ಈ ಪುಟಾಣಿ. ಕೊನೆಗೆ ಮೊಮ್ಮಗ ಹಾಗೂ ಅಜ್ಜಿ ಮುಗ್ಗರಿಸಿ ಕೆಳಗೆ ಬಿದ್ದಿರುವುದನ್ನು ನೀವು ನೋಡಬಹುದು.
ಇದನ್ನೂ ಓದಿ:ನನ್ನಮ್ಮನಿಗೆ ಫೋನ್ ಮಾಡಿ, ನನ್ನ ಅಮ್ಮನ ಹೆಸರು ಮಮ್ಮಾ; ಶಾಲೆಯಲ್ಲಿ ಕಣ್ಣೀರಿಟ್ಟ ಪುಟಾಣಿ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಅಜ್ಜಿ ಮೊಮ್ಮಗನ ಜಾಲಿ ರೈಡ್ ಎಂದಿದ್ದಾರೆ. ಮತ್ತೊಬ್ಬರು ಕಿಲಾಡಿ ಮೊಮ್ಮಗ ಎಂದರೆ ಇನ್ನು ಕೆಲವರು ನಗುವ ಇಮೋಜಿ ಕಳುಹಿಸಿ ಪ್ರತಿಕ್ರಿಯಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ