Video: ನನ್ನ ತಂಗಿ ಎಷ್ಟು ಮುದ್ದಾಗಿದ್ದಾಳೆ; ನವಜಾತ ಶಿಶುವನ್ನು ಕಂಡೊಡನೆ ಮುದ್ದಾಗಿ ರಿಯಾಕ್ಷನ್ ಕೊಟ್ಟ ಪುಟ್ಟ ಹುಡುಗ
ಪುಟ್ಟ ಮಕ್ಕಳ ಆಟ ತುಂಟಾಟ, ಮುದ್ದಾದ ರಿಯಾಕ್ಷನ್ ಗಳನ್ನು ನೋಡುವುದೇ ಚಂದ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಹೃದಯ ಸ್ಪರ್ಶಿ ದೃಶ್ಯ ವೈರಲ್ ಆಗುತ್ತಿರುತ್ತವೆ. ಇದೀಗ ಪುಟ್ಟ ಬಾಲಕನೊಬ್ಬ ತನ್ನ ನವಜಾತ ಸಹೋದರಿಯನಿ ಕಂಡೊಡನೆ ಮುದ್ದಾಗಿ ರಿಯಾಕ್ಷನ್ ನೀಡಿದ್ದಾನೆ. ಈ ದೃಶ್ಯ ವೈರಲ್ ಆಗಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ.

ಮನೆಯಲ್ಲಿ ಮಕ್ಕಳಿದ್ದರೆ ತಮ್ಮ ಮನೆಗೆ ಮತ್ತೊಂದು ಪುಟ್ಟ ಮಗು (little boy) ಬರುತ್ತದೆಯೆಂದರೆ ಅವರ ಖುಷಿ ಎಲ್ಲೇ ಮೀರುತ್ತದೆ. ಇನ್ನು ಆಗ ತಾನೇ ಹುಟ್ಟಿದ ಮಗುವನ್ನು ನೋಡಿದ ಬಳಿಕ ಪುಟ್ಟ ಮಕ್ಕಳು ಮುದ್ದಾಗಿ ರಿಯಾಕ್ಷನ್ ನೀಡುವುದನ್ನು ನೀವು ನೋಡಿರಬಹುದು. ಆದ್ರೆ ಇಲ್ಲೊಬ್ಬ ಪುಟ್ಟ ಹುಡುಗ ಆಗ ತಾನೇ ಹುಟ್ಟಿದ ನವಜಾತ ಸಹೋದರಿಯನ್ನು ನೋಡಲು ಆಸ್ಪತ್ರೆಗೆ ಬಂದಿದ್ದಾನೆ. ಮಗುವನ್ನು ನೋಡುತ್ತಿದ್ದಂತೆ ಕ್ಯೂಟ್ ರಿಯಾಕ್ಷನ್‌ನೊಂದಿಗೆ ತನ್ನ ತಾಯಿಯ ಬಳಿ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ್ದಾನೆ.
ರಿಚಾ ಅಗರ್ವಾಲ್ (baniya2bengali) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ಒಬ್ಬ ತಾಯಿಯ ನೋವು ಅಗೋಚರವಾಗಿರುತ್ತದೆ. ಆಕೆಯ ತ್ಯಾಗ ಸಾಮಾನ್ಯವಾದ ಪರಿಗಣನೆ ಆಗಿರುತ್ತದೆ ಎಂಬ ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಈ ವಿಡಿಯೋದಲ್ಲಿ ಪುಟಾಣಿಯೊಂದು ತನ್ನ ನವಜಾತ ಸಹೋದರಿಯನ್ನು ನೋಡಲು ಆಸ್ಪತ್ರೆಗೆ ಬಂದಿದ್ದಾನೆ. ತನ್ನ ತಾಯಿ ಹಾಗೂ ಪುಟಾಣಿಯನ್ನು ನೋಡುತ್ತಿದ್ದು, ಆ ಬಳಿಕ ತಾಯಿಯ ಬಳಿ ನಾನಾ ಪ್ರಶ್ನೆಗಳನ್ನು ಕೇಳುತ್ತಿದ್ದಾನೆ. ತನ್ನ ತಾಯಿಯನ್ನು ನೈಟ್ ಸೂಟ್ ಧರಿಸಿದ್ದೀರಾ ಎಂದು ಕೇಳುತ್ತಾನೆ. ಆ ಬಳಿಕ ಮಗುವು ನಿಜವೇ, ಆಟಿಕೆಯೇ ಎಂದು ಪ್ರಶ್ನೆ ಕೇಳುವುದನ್ನು ನೋಡಬಹುದು. ಆದರೆ ಮಗು ನಿಜ ಎಂದು ಅವನಿಗೆ ತಿಳಿದಾಗ, ಪುಟ್ಟ ಕಂದಮ್ಮನನ್ನು ನೋಡುತ್ತಾನೆ. ಗಂಡು ಮಗುವೋ ಅಥವಾ ಹೆಣ್ಣು ಮಗುವೋ ಎಂದು ಈ ಪುಟ್ಟ ಬಾಲಕ ಕೇಳಿದ್ದು, ಹೆಣ್ಣು ಮಗು ಎಂದು ಹೆತ್ತವರು ಉತ್ತರಿಸುವುದನ್ನು ನೋಡಬಹುದು.
ಇದನ್ನೂ ಓದಿ:ಮುದ್ದು ಕಂದನ ಬಾಯಲ್ಲಿ ಶ್ರೀ ಕೃಷ್ಣನ ಭಜನೆ ಹಾಡು, ವೈರಲ್ ಆಯ್ತು ದೃಶ್ಯ
ಈ ವಿಡಿಯೋ ಹನ್ನೆರಡು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ಕೊಂಡಿದ್ದು, ಒಬ್ಬ ಬಳಕೆದಾರ ಮುದ್ದಾಗಿದೆ ಎಂದಿದ್ದಾರೆ. ಇನ್ನೊಬ್ಬರು, ಪುಟ್ಟ ಹುಡುಗನು ಅಮ್ಮನ ಬಗ್ಗೆ ಕಾಳಜಿ ವಹಿಸುತ್ತಾನೆ. ಜೀವನದಲ್ಲಿ ಒಳ್ಳೆಯ ಮಗ ಮತ್ತು ಸಹೋದರನಾಗುತ್ತಾನೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
