ಸಾಮಾಜಿಕ ಜಾಲತಾಣ ಒಂದಲ್ಲ ಒಂದು ಕ್ಯೂಟ್ ವಿಡಿಯೋ ಮೂಲಕ ಬಳಕೆದಾರರನ್ನು ಆಕರ್ಷಿಸುತ್ತದೆ. ಈಗಾಗಲೇ ಸಾಕಷ್ಟು ಪ್ರಾಣಿ, ಪಕ್ಷಿಗಳ ವಿಡಿಯೋ ವೈರಲ್ ಆಗಿವೆ. ಇದೀಗ ಪುಟ್ಟ ಬಾಲಕಿಯೊಬ್ಬಳು ಮೊದಲ ಬಾರಿ ಮೇಕಪ್ (Makeup) ಮಾಡಿಕೊಂಡು ಕನ್ನಡಿಯನ್ನು ನೋಡಿದಾಗ ಆಕೆಯ ಪ್ರತಿಕ್ರಿಯೆಯ ವಿಡಿಯೋ ವೈರಲ್ ಆಗಿದೆ. ಮಗಳಿಗೆ ಮೇಕಪ್ ಮಾಡಿ ನಂತರ ಕನ್ನಡಿಯನ್ನು ಆಕೆಯ ಎದುರು ಹಿಡಿದು ತಾಯಿ ತೋರಿಸುತ್ತಾಳೆ. ಆಗ ಆಕೆ ಅವಳ ಮುಖವನ್ನೇ ನೋಡಿ ಅಚ್ಚರಿಗೊಳ್ಳುತ್ತಾಳೆ. ಇನ್ಸ್ಟಾಗ್ರಾಮ್ (Instagram)ನಲ್ಲಿ ಇದರ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಬ್ರಿಟ್ಟಿಕ್ರಿಟ್ಟಿ (brittikitty) ಎನ್ನುವ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು 2 ಲಕ್ಷಕ್ಕೂ ಹೆಚ್ಚು ಲೈಕ್ಸ್ ಗಳಿಸಿದೆ. ಸದ್ಯ ವಿಡಿಯೋ ನೋಡಿ ನೆಟ್ಟಿಗರು ಕ್ಯೂಟ್ ಎಂದಿದ್ದಾರೆ.
ವಿಡಿಯೋದಲ್ಲಿ ಪುಟ್ಟ ಬಾಲಕಿಯು ಹಸಿರು, ಬಿಳಿ ಬಣ್ಣದ ಫ್ರಾಕ್ ಧರಿಸಿ ಕುಳಿತಿರುತ್ತಾಳೆ. ಆಕೆಗೆ ಅವಳ ಅಮ್ಮ ಲಿಪ್ಸ್ಟಿಕ್, ಐಲ್ಯಾಷ್, ಐಶ್ಯಾಡೋ, ಮಸ್ಕರಾ ಎಲ್ಲವನ್ನೂ ಹಚ್ಚುತ್ತಾಳೆ. ಈ ವೇಳೆ ಬಾಲಕಿ ಕಣ್ಣನ್ನು ಆಗಾಗ ಮಿಟುಕಿಸುತ್ತಾಳೆ. ಆಗ ಆಕೆಯ ತಾಯಿ ನೋ ಎಂದು ಸುಮ್ಮನಿರಿಸುತ್ತಾಳೆ. ಅಮ್ಮ ಮಗಳ ಈ ಕ್ಯೂಟ್ ವಿಡಿಯೋ ಒಂದೆಡೆ ನೆಟ್ಟಿಗರನ್ನು ಸೆಳೆದರೆ, ವಿಡಿಯೋದ ಕೊನೆಯಲ್ಲಿ ಕನ್ನಡಿಯೆದರು ನಿಂತಾಗ ಬಾಲಕಿ ಆಕೆಯದ್ದೇ ಸುಂದರವಾದ ಮುಖವನ್ನು ಕಂಡು ಅಚ್ಚರಿಯಿಂದ ಕಣ್ಣರಳಿಸಿ ಓಹ್ ಸ್ಕೇರಿ (Oh! I scary!) ಎನ್ನುತ್ತಾಳೆ. ಈ ವಿಡಿಯೋ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವಿಡಿಯೋ ನೋಡಿ ನೆಟ್ಟಿಗರು ಬಾಲಕಿಯನ್ನು ಅಂದವನ್ನು ಹೊಗಳಿದ್ದಾರೆ. ಆಕೆಯ ಕಣ್ಣು ಲ್ಯಾಶಸ್ಗಳಿಂದ ಸುಂದರವಾಗಿ ಕಾಣುತ್ತಿದೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು ಸುಂದರವಾಗಿ ಕಾಣಿಸುತ್ತಿದ್ದಾಳೆ ಎಂದಿದ್ದಾರೆ.
ಇದನ್ನೂ ಓದಿ:
Viral Video: ಮಾತನಾಡಲು ಅವಕಾಶ ಸಿಗಲಿಲ್ಲವೆಂದು ಟಿವಿ ಚಾನೆಲ್ ಲೈವ್ನಲ್ಲೇ ಎದ್ದು ಡ್ಯಾನ್ಸ್ ಮಾಡಿದ ಪಾನಲಿಸ್ಟ್