Video: ಈವಾಗ್ಲೇ ಹಿಂಗೇ, ಮುಂದೆ ಹೆಂಗೋ; ನಡು ರಸ್ತೆಯಲ್ಲೇ ಜಗಳಕ್ಕಿಳಿದ ಪುಟಾಣಿಗಳು

ಪುಟ್ಟ ಮಕ್ಕಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಕೆಲ ವಿಡಿಯೋ ನೋಡಿದ್ರೆ ನಗು ತಡೆಯಲು ಆಗಲ್ಲ. ಇದೀಗ ಮೂವರು ಪುಟ್ಟ ಹುಡುಗಿಯರು ನಡುರಸ್ತೆಯಲ್ಲೇ ಜಗಳಕ್ಕೆ ಇಳಿದಿದ್ದಾರೆ. ಆಟದ ವಿಚಾರವಾಗಿ ಶುರುವಾದ ಜಗಳವು ತಾರಕಕ್ಕೇರಿದ್ದು, ಇವರ ಫೈಟ್‌ ಬಿಗ್‌ ಬಾಸ್ ಸ್ಪರ್ಧಿಗಳನ್ನು ಮೀರಿಸುವಂತಿದೆ. ಈ ಕ್ಲಿಪಿಂಗ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ.

Video: ಈವಾಗ್ಲೇ ಹಿಂಗೇ, ಮುಂದೆ ಹೆಂಗೋ; ನಡು ರಸ್ತೆಯಲ್ಲೇ ಜಗಳಕ್ಕಿಳಿದ ಪುಟಾಣಿಗಳು
ಪುಟಾಣಿಗಳ ಜಗಳ
Image Credit source: Instagram

Updated on: Nov 18, 2025 | 1:42 PM

ಜಡೆ ಜಗಳಗಳು ಶುರುವಾದ್ರೆ ನಿಲ್ಲೋದೇ ಇಲ್ಲ ಅಂತಾರೆ. ಆದರೆ ಈ ಪುಟಾಣಿಗಳು ಜಗಳಕ್ಕೆ ಇಳಿದಿದ್ದು, ಮಾತಿಗೆ ಮಾತು ಬೆಳೆದಿದ್ದು ಜಗಳವಂತೂ ನಿಲ್ಲೋ ಹಾಗೆ ಕಾಣ್ತಾ ಇಲ್ಲ. ಚೋಟುದ್ದ ಇರುವ ಪುಟ್ಟ ಹುಡುಗಿಯರು (little girls) ಉತ್ತರ ಕರ್ನಾಟಕದ ಖಡಕ್ ಭಾಷೆಯಲ್ಲಿ ಕಾದಾಟಕ್ಕೆ ಇಳಿದಿದ್ದಾರೆ. ಹೌದು, ಉತ್ತರ ಕರ್ನಾಟಕದ (North Karnataka) ಭಾಷೆಯಲ್ಲೇ ಪುಟಾಣಿಗಳು ಜಗಳ ಮಾಡಿಕೊಳ್ಳುತ್ತಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಈ ಮೂವರು ಹುಡುಗಿಯರನ್ನು ದೊಡ್ಡವರಾದ ಮೇಲೆ ಸಂಭಾಳಿಸೋದು ತುಂಬಾನೇ ಕಷ್ಟ ಇದೆ ಎಂದು ತಮಾಷೆಯಾಗಿ ಹೇಳಿದ್ದಾರೆ.

ನಡುರಸ್ತೆಯಲ್ಲೇ ಪುಟಾಣಿಗಳ ಫೈಟ್‌ ನೋಡಿ

ವಿನಯ್ ರೆಡ್ಡಿ (Vinay Reddy) ಹೆಸರಿನ  ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾದ ಈ ವಿಡಿಯೋದಲ್ಲಿ ನಡುರಸ್ತೆಯಲ್ಲೇ ಪುಟಾಣಿಗಳು ಜಗಳ ಆಡುತ್ತಿರುವ ದೃಶ್ಯವನ್ನು ನೋಡಬಹುದು. ಹೌದು, ಸೇರಿಗೆ ಸವ್ವಾ ಸೇರು ಎನ್ನುವ ಹಾಗೆ ತಮ್ಮನ್ನು ಬಿಟ್ಟು ಕೊಡದೆ ಈ ಪುಟಾಣಿಗಳು ಜಗಳ ಆಡುತ್ತಿದ್ದಾರೆ. ಈ ಮೂವರು ಪುಟ್ಟ ಹುಡುಗಿಯರು ಉತ್ತರ ಕರ್ನಾಟಕ  ಭಾಷೆಯಲ್ಲೇ ಚಾಟಿ ಬೀಸಿದ್ದಾರೆ. ಮಾತು ಖಡಕ್ ಮಾತ್ರವಲ್ಲ, ಜಗಳದ ನಡುವೆ ಒಂದೊಂದೇ ಡೈಲಾಗ್ ಹೊಡೆಯುತ್ತಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಇವರಾಡುವ ಮಾತಿನ ಶೈಲಿ ಹುಬ್ಬೇರಿಸುವಂತಹದ್ದು; ಇದು ಉತ್ತರ ಕರ್ನಾಟಕದ ಜನಪದ ನಾಟಕದ ಝಲಕ್

ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಉತ್ತರ ಕರ್ನಾಟಕದ ಭಾಷೆ ಚಂದ ಅಲ್ವಾ?? ಕಾಡಿಸಿದೆ! ನೀ ಚಂದಂಗ್ ಮಾತಾಡು, ಒಳ್ಳೊಳ್ಳೆ ಪದಗಳು ಎಂದಿದ್ದಾರೆ. ಇನ್ನೊಬ್ಬರು, ಈ ಜಗಳ ನೋಡೋದ್ರಲ್ಲಿ ಏನೋ ಮಜಾ ಇದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಅಣ್ಣ ಯಾಕೆ ಜಗಳಕ್ಕೆ ಕಾರಣ ಆದೆ ಎಂದು ಕಾಮೆಂಟ್ ನಲ್ಲಿ ಕೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳು ಓದಲು ಇಲ್ಲಿ ಕ್ಲಿಕ್ ಮಾಡಿ