AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಇವರಾಡುವ ಮಾತಿನ ಶೈಲಿ ಹುಬ್ಬೇರಿಸುವಂತಹದ್ದು; ಇದು ಉತ್ತರ ಕರ್ನಾಟಕದ ಜನಪದ ನಾಟಕದ ಝಲಕ್

ಉತ್ತರ ಕರ್ನಾಟಕದ ಜವಾರಿ ಭಾಷೆಯ ಜಾನಪದ ಹಾಡುಗಳು ಹಾಗೂ ಕಲಾವಿದರ ನಾಟಕದ ವಿಡಿಯೋಗಳು ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇಲ್ಲಿನ ಭಾಷೆಯನ್ನು ಇಷ್ಟ ಪಡುವವರಿಗೆ ಕಲಾವಿದರು ಆಡುವ ಪ್ರತಿಯೊಂದು ಮಾತೇ ಇಂಪು. ಇದೀಗ ಉತ್ತರ ಕರ್ನಾಟಕದ ಕಲಾವಿದರು ವೇದಿಕೆಯ ಮೇಲೆ ನಟನೆ ಹಾಗೂ ಜವಾರಿ ಭಾಷಾ ಸೊಗಡಿನಿಂದಲೇ ಪ್ರೇಕ್ಷಕ ವರ್ಗವನ್ನು ರಂಜಿಸಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿವೆ.

Video: ಇವರಾಡುವ ಮಾತಿನ ಶೈಲಿ ಹುಬ್ಬೇರಿಸುವಂತಹದ್ದು; ಇದು ಉತ್ತರ ಕರ್ನಾಟಕದ ಜನಪದ ನಾಟಕದ ಝಲಕ್
ವೈರಲ್ ವಿಡಿಯೋImage Credit source: Facebook
ಸಾಯಿನಂದಾ
|

Updated on: Nov 06, 2025 | 2:16 PM

Share

ಉತ್ತರ ಕರ್ನಾಟಕದ (North Karnataka) ಖಡಕ್ ಭಾಷಾ ಶೈಲಿಯೇ ಹಾಗೆ, ಮೃದುವಾಗಿ ಮಾತನಾಡುವವರಿಗೆ ಇವರೇನೋ ಬೈಯುತ್ತಿದ್ದಾರೋ ಎಂದೆನಿಸುತ್ತದೆ. ಮಾತು ಖಾರವಾಗಿದ್ರೂ ಮನಸ್ಸು ಬೆಣ್ಣೆಯಷ್ಟೇ ಮೃದು ಇವರದ್ದು. ನಾಟಕ ಸೇರಿದಂತೆ ಜಾನಪದ ಹಾಡುಗಳಲ್ಲಿ ಇಲ್ಲಿನ ಭಾಷಾ ಸೊಗಡು ಎದ್ದು ಕಾಣುತ್ತದೆ. ಹೌದು, ಉತ್ತರ ಕರ್ನಾಟಕ ಭಾಷಾ ಶೈಲಿಯ ನಾಟಕಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತವೆ. ಇದೀಗ ಬಡವ ಬೀಸಿದ ಕೊಡ್ಲಿ ಎಂಬ ನಾಟಕವೂ ಉತ್ತರ ಕರ್ನಾಟಕ ಭಾಷಾ ಸೊಗಡಿನಲ್ಲಿ ಮೂಡಿ ಬಂದಿದ್ದು, ಇದರ ಸಣ್ಣ ತುಣುಕು ವೈರಲ್ ಆಗಿದ್ದು ಕಲಾವಿದರ ಮಾತಿನ ಶೈಲಿ, ನಟನೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಜವಾರಿ ಜನಪದ (Javari Janapada) ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಬಡವ ಬೀಸಿದ ಕೊಡ್ಲಿ ಈ ನಾಟಕದ ಸಣ್ಣ ಝಲಕ್ ನೋಡಬಹುದು. ಕಲಾವಿದರು ವೇದಿಕೆಯ ವೇಳೆ ಅತ್ಯದ್ಭುತ ಅಭಿನಯ, ಉತ್ತರ ಕರ್ನಾಟಕ ಭಾಷಾ ಶೈಲಿಯಿಂದ ಪ್ರೇಕ್ಷಕವರ್ಗವನ್ನು ಹಿಡಿದಿಟ್ಟುಕೊಂಡಿದ್ದಾರೆ. ಗಂಡನ ಮನೆಗೆ ಕಾಲಿಟ್ಟ ಹೆಣ್ಣು ತನ್ನ ಸ್ವಾರ್ಥಕ್ಕಾಗಿ ಅಣ್ಣ ತಮ್ಮಂದಿರ ನಡುವೆ ಜಗಳ ತಂದಿಟ್ಟ ಕ್ಷಣವನ್ನು ಇಲ್ಲಿ ಚಿತ್ರಿಸಲಾಗಿದೆ. ಅಣ್ಣ ತಮ್ಮನ ನಡುವಿನ ಸಂಭಾಷಣೆಯನ್ನು ನೀವಿಲ್ಲಿ ನೋಡಬಹುದು.

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಮುದ್ದು ಮುದ್ದಾಗಿ ಕನ್ನಡ ಮಾತನಾಡಿ ಕನ್ನಡಿಗರ ಹೃದಯ ಗೆದ್ದ ಜರ್ಮ್‌ನ್‌ ಮಹಿಳೆ

ಈ ವಿಡಿಯೋವು ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ದ್ವಂದರ್ಥ ನಾಟಕ ಎಂದಿದ್ದಾರೆ. ಇನ್ನೊಬ್ಬರು, ಅತ್ಯದ್ಭುತ ನಾಟಕ, ಸೂಪರ್ ಕಾಮಿಡಿ ದೃಶ್ಯಗಳು ಎಂದು ಕಾಮೆಂಟ್ ಮಾಡಿದ್ದಾರೆ. ಉತ್ತರ ಕರ್ನಾಟಕದ ಜವಾರಿ ಭಾಷೆಯ ನಾಟಕ ಚೆನ್ನಾಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ