Video: ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನ ಫುಟ್‌ಪಾತ್ ವೇಯಲ್ಲಿ ಸಂಚರಿಸಿ ವಾಸ್ತವ ಸ್ಥಿತಿ ಬಿಚ್ಚಿಟ್ಟ ವಿದೇಶಿಗ
ಮಾಯಾನಗರಿ ಬೆಂಗಳೂರು ಅಭಿವೃದ್ಧಿಯತ್ತ ಸಾಗಿದ್ರೂ ರಸ್ತೆಗುಂಡಿಗಳು ಹಾಗೂ ಹದಗೆಟ್ಟ ಪಾದಚಾರಿ ಮಾರ್ಗಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಹೌದು ಇದೀಗ ಬೆಂಗಳೂರಿನ ಹೆಚ್ಎಸ್‌ಆರ್ ಲೇಔಟ್‌ನಲ್ಲಿನ ಪಾದಚಾರಿ ಮಾರ್ಗಗಳ ಕಳಪೆ ಸ್ಥಿತಿಯ ಬಗ್ಗೆ ವಿದೇಶಿ ವ್ಯಕ್ತಿ ಬೆಳಕು ಚೆಲ್ಲಿದ್ದಾರೆ. ಇಲ್ಲಿನ ಪಾದಚಾರಿ ಮಾರ್ಗಗಳು ಎಷ್ಟು ಹದಗೆಟ್ಟಿದೆ ಎಂದು ತೋರಿಸಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಬೆಂಗಳೂರು, ನವೆಂಬರ್ 06: ಸಾಮಾನ್ಯವಾಗಿ ಬೆಂಗಳೂರಿನಲ್ಲಿ (Bengaluru) ಕೆಲ ರಸ್ತೆಗಳಲ್ಲಿ ಹಾಗೂ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುವುದು ಸವಾಲಿನ ಸಂಗತಿ. ಇಲ್ಲಿನ ರಸ್ತೆ ಗುಂಡಿಗಳು, ತೀರಾ ಹದಗೆಟ್ಟಿರುವ ಪಾದಚಾರಿಗಳು ನಡೆದುಕೊಂಡು ಹೋಗಲು ಸಾಧ್ಯವಾಗದ ಫುಟ್‌ಪಾತ್‌ಗಳಿವೆ. ಈ ಬಗ್ಗೆ ವಿದೇಶಿ ಪ್ರಜೆಯೊಬ್ಬರು ಗಮನ ಹರಿಸಿದ್ದಾರೆ. ಹೌದು ಕಳೆದ ಎಂಟು ವರ್ಷಗಳಿಂದ ಭಾರತದಲ್ಲಿ ನೆಲೆಸಿರುವ ಕೆನಡಾದ ಪ್ರಜೆ ಕ್ಯಾಲೆಬ್ ಫ್ರೈಸೆನ್ ಅವರು ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್‌ನಲ್ಲಿ (HSR Layout) ಪಾದಚಾರಿ ಮಾರ್ಗಗಳು ಡಂಪಿಂಗ್ ಸ್ಪಾಟ್‌ಗಳಾಗಿವೆ ಎಂದು ಇಲ್ಲಿನ ವಾಸ್ತವ ಸ್ಥಿತಿಯನ್ನು ವಿವರಿಸಿದ್ದಾರೆ. ಕಸದ ರಾಶಿಯಿಂದ ತುಂಬಿಕೊಂಡಿರುವ ಈ ಪಾದಚಾರಿ ಮಾರ್ಗ ಹೇಗಿದೆ ಎಂದು ಹೇಳಿರುವ ವಿಡಿಯೋ ಸದ್ಯ ವೈರಲ್ ಆಗಿದೆ.
ಕ್ಯಾಲೆಬ್ (Caleb) ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ “ನಾನು ಇತ್ತೀಚೆಗೆ ಹೆಚ್‌ಆರ್‌ಎಸ್ ಲೇಔಟ್‌ನಲ್ಲಿ ನಡೆದುಕೊಂಡು ಹೋದೆ. ನಾನು ಅರಿತುಕೊಂಡದ್ದು ಇಲ್ಲಿದೆ: ಅತಿಕ್ರಮಣದಿಂದಾಗಿ ಫುಟ್‌ಪಾತ್‌ಗಳು ಪ್ರವೇಶಿಸಲಾಗುವುದಿಲ್ಲ. ಪ್ರವೇಶಿಸಲಾಗದ ಫುಟ್‌ಪಾತ್‌ಗಳನ್ನು ನಿರ್ವಹಿಸಲಾಗುವುದಿಲ್ಲ. ನಿರ್ವಹಿಸದ ಫುಟ್‌ಪಾತ್‌ಗಳು ಡಂಪಿಂಗ್ ಸ್ಪಾಟ್‌ಗಳಾಗುತ್ತವೆ. ಡಂಪಿಂಗ್ ಸ್ಪಾಟ್‌ಗಳು ಶೌಚಾಲಯಗಳಾಗುತ್ತವೆ. ಇದೆಲ್ಲವೂ ಅತಿಕ್ರಮಣದಿಂದ ಪ್ರಾರಂಭವಾಗುತ್ತದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಈ ವಿಡಿಯೋದಲ್ಲಿ ವಿದೇಶಿಗ ಬೆಂಗಳೂರಿನ ಹೆಚ್ ಆರ್ ಲೇಔಟ್ ನಲ್ಲಿ ಪಾದಚಾರಿ ಮಾರ್ಗಗಳು ಎಷ್ಟು ಕಳಪೆಯಾಗಿದೆ ಎಂದು ತೋರಿಸಿರುವುದನ್ನು ಕಾಣಬಹುದು. ಅಸ್ತವ್ಯಸ್ತವಾದ ಪಾದಚಾರಿ ಮಾರ್ಗಗಳು ಕಸದ ರಾಶಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳ ಅತಿಕ್ರಮಣಗಳು ಪಾದಚಾರಿಗಳಿಗೆ ಫುಟ್ ಪಾತ್ ನಲ್ಲಿ ನಡೆದುಕೊಂಡು ಹೋಗಲು ಕಷ್ಟವಾಗುತ್ತಿರುವುದನ್ನು ವಿದೇಶಿಗ ತೋರಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
I took a walk in HSR Layout recently.
Here’s what I realised:
1. Footpaths are inaccessible due to encroachment
2. Inaccessible footpaths aren’t maintained
3. Unmaintained footpaths become dumping spots
4. Dumping spots become toilets
It all starts with encroachment. pic.twitter.com/QQ36B6Syuw
— Caleb (@caleb_friesen2) November 4, 2025
ಇದನ್ನೂ ಓದಿ:ಗುಂಡಿಯಿಂದಾಗಿ ಕಾರು ರಿಪೇರಿಗೆ 23 ಸಾವಿರ ರೂ ಖರ್ಚು, ಗುಂಡಿ ಮುಚ್ಚಲು ನಾನು ಹಣ ಕೊಡ್ತೇನೆ ಎಂದ ನಿವಾಸಿ
ನವೆಂಬರ್ 4 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಇದುವರೆಗೆ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಹೆಚ್ ಆರ್ ಎಸ್ ಲೇಔಟ್‌ನಲ್ಲಿ ಮಾತ್ರವಲ್ಲದೆ ನಗರದಾದ್ಯಂತ ಇಂತಹ ಪರಿಸ್ಥಿತಿಗಳು ಸಾಮಾನ್ಯವಾಗಿದೆ ಎಂದಿದ್ದಾರೆ. ಇನ್ನೊಬ್ಬರು ಫುಟ್ ಪಾತ್ ಗಳು ಆಹಾರ ಮಳಿಗೆಗಳಿಗೆ ಮಾತ್ರ ಎಂದು ಹೇಳಿದ್ದಾರೆ. ಮತ್ತೊಬ್ಬರು ಬೆಂಗಳೂರಿನಲ್ಲಿ ಈ ಸಮಸ್ಯೆ ಭಾರಿ ಜಟಿಲವಾಗಿದೆ. ಕೈ ತುಂಬಾ ಹಣದೊಂದಿಗೆ ಕುಳಿತಿರುವ ಪ್ರಭುಗಳು ಇಲ್ಲಿ ಇದ್ದಾರೆ. ಕೆಲವರಿಗೆ ಇದು ಆದಾಯದ ಮೂಲವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:46 pm, Thu, 6 November 25




