AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಬುದ್ಧಿವಂತಿಕೆಗೆ ಸವಾಲು; ಪ್ರತಿ ಸಾಲಿನ ಉತ್ತರ 15 ಬರುವಂತೆ ಈ ಮ್ಯಾಜಿಕ್ ಸ್ಕ್ವೇರ್ ಬಿಡಿಸಿದ್ರೆ ನೀವು ಜಾಣರು ಎಂದರ್ಥ

ಈ ಗಣಿತದ ಲೆಕ್ಕಗಳು ತಲೆಗೆ ಹತ್ತಲ್ಲ ಎಂದು ಹೇಳುವುದನ್ನು ನೀವು ಕೇಳಿರಬಹುದು. ಆದರೆ ಈ ಮ್ಯಾಜಿಕ್ ಸ್ಕ್ವೇರ್ ಮೂಲಕ ಸುಲಭವಾಗಿ ಲೆಕ್ಕವನ್ನು ಬಿಡಿಸಬಹುದು ಎಂದರೆ ನೀವು ನಂಬುತ್ತೀರಾ. ಇದೊಂದು ನಿಮ್ಮ ಬುದ್ಧಿವಂತಿಕೆ ಸವಾಲೆಸಗುವ ಮೋಜಿನ ಲೆಕ್ಕದ ಆಟವಾಗಿದ್ದು, ಇದೀಗ 1 ರಿಂದ 9 ಸಂಖ್ಯೆಗಳನ್ನು ಚೌಕದೊಳಗೆ ಪ್ರತಿ ಅಡ್ಡ ಹಾಗೂ ಲಂಬವಾಗಿ ಬರೆಯಲಾಗಿರುವ ಸಂಖ್ಯೆಯನ್ನು ಕೂಡಿಸಿದಾಗ ಮೊತ್ತವು 15 ಬರಬೇಕು. ಅದೇಗೆ ಸಾಧ್ಯ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ನಿಮ್ಮ ಬುದ್ಧಿವಂತಿಕೆಗೆ ಸವಾಲು; ಪ್ರತಿ ಸಾಲಿನ ಉತ್ತರ 15 ಬರುವಂತೆ ಈ ಮ್ಯಾಜಿಕ್ ಸ್ಕ್ವೇರ್ ಬಿಡಿಸಿದ್ರೆ ನೀವು ಜಾಣರು ಎಂದರ್ಥ
ಮ್ಯಾಜಿಕ್ ಸ್ಕ್ವೇರ್Image Credit source: Facebook
ಸಾಯಿನಂದಾ
|

Updated on: Nov 06, 2025 | 11:42 AM

Share

ಗಣಿತ (Mathematics) ಎಂದರೆ ಹೆಚ್ಚಿನವರಿಗೆ ಕಬ್ಬಿಣದ ಕಡಲೆಯಾಗಿದ್ದು, ಈ ವಿಷಯದ ಬಗ್ಗೆ ಆಸಕ್ತಿ ತೋರಿಸುವವರು ಕಡಿಮೆಯೇ. ಆದರೆ ಸರಿಯಾಗಿ ಗಮನಿಸಿದಾಗ ಈ ಗಣಿತ ಕಲಿಯುವುದು ಮೋಜಿನ ಸಂಗತಿಯಾಗಿದ್ದು, ಗಣಿತದ ಸೂತ್ರ, ಲೆಕ್ಕವನ್ನು ಬಿಡಿಸುವ ವಿಧಾನವು ಬಹಳ ಆಸಕ್ತಿದಾಯಕವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಮ್ಯಾಜಿಕ್ ಸ್ಕ್ವೇರ್ ಗಳಿಗೆ (Magic Square) ಸಂಬಂಧ ಪಟ್ಟ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಈ ಮೋಜಿನ ಚೌಕದಲ್ಲಿ 1 ರಿಂದ 9 ಸಂಖ್ಯೆಯನ್ನು ಬರೆಯಲಾಗಿದೆ. ಪ್ರತಿ ಅಡ್ಡ ಹಾಗೂ ಲಂಬವಾಗಿ ಬರೆದ ಸಂಖ್ಯೆಯನ್ನು ಕೂಡಿಸಿದಾಗ ಉತ್ತರವು 15 ಎಂದು ಬರಬೇಕು. ಇಂತಹ ಮೋಜಿನ ಗಣಿತದ ಆಟವನ್ನು ಬಿಡಿಸಲು ನಿಮ್ಮಿಂದ ಸಾಧ್ಯವೇ ಎಂದು ನೋಡಿ.

Eliya Mohammed ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟ್ಟ ಹುಡುಗಿಯೊಬ್ಬಳು ಮ್ಯಾಜಿಕ್ ಸ್ಕ್ವೇರ್ ಬಿಡಿಸಲು ತಲೆ ಉಪಯೋಗಿಸಿದ್ದಾಳೆ. ಈ ಪುಟ್ಟ ಹುಡುಗಿಯ ಮುಂದಿದ್ದ ಸವಾಲು, ಈ ಮೋಜಿನ ಚೌಕದಲ್ಲಿ ಬರೆಯಲಾದ ಸಂಖ್ಯೆಗಳನ್ನು ಅಡ್ಡ ಹಾಗೂ ಲಂಬವಾಗಿ ಕೂಡಿಸಿದಾಗ ಉತ್ತರವು ಹದಿನೈದು ಬರಬೇಕು. ಹೀಗಾಗಿ ಈ ಮೋಜಿನ ಸ್ಕ್ವೇರ್ ಬಿಡಿಸಲು ಈ ಜಾಣೆ ಹುಡುಗಿಯೂ ಕೆಲವು ಟ್ರಿಕ್ಸ್ ಬಳಸಿದ್ದಾಳೆ.

ಮ್ಯಾಜಿಕ್ ಸ್ಕ್ವೇರ್ ವಿಡಿಯೋ ಇಲ್ಲಿದೆ

ಮ್ಯಾಜಿಕ್ ಸ್ಕ್ವೇರ್ ಬಿಡಿಸುವ ವಿಧಾನ ಇಲ್ಲಿದೆ

  • ಮೊದಲಿಗೆ ಮೋಜಿನ ಚೌಕಗಳಲ್ಲಿ ಒಂದರಿಂದ ಒಂಭತ್ತರ ಸಂಖ್ಯೆಯನ್ನು ಕ್ರಾಸ್ ಆಗಿ ಬರೆಯಬೇಕು.
  • ಈ ಚೌಕದಲ್ಲಿರುವ ಹೆಚ್ಚುವರಿ ಬಾಕ್ಸ್ ಗಳನ್ನು ಅಳಿಸಿ, ಅದರಲ್ಲಿರುವ ಸಂಖ್ಯೆಯನ್ನು ಖಾಲಿಯಿರುವ ಚೌಕದಲ್ಲಿ ಭರ್ತಿ ಮಾಡಬೇಕು.
  • ಈ ರೀತಿ ಬರೆಯದಾಗ ಮೋಜಿನ ಗಣಿತ ಆಟದಲ್ಲಿ ಚೌಕವು ಒಂದರಿಂದ ಒಂಬತ್ತು ಸಂಖ್ಯೆಗಳಿಂದ ಭರ್ತಿಯಾಗುತ್ತದೆ.
  •  ಚೌಕದಲ್ಲಿ ಭರ್ತಿ ಮಾಡಲಾದ ಅಡ್ಡ ಸಾಲಿನ ಸಂಖ್ಯೆ 276, 951 ಹಾಗೂ 438 ಆಗಿದ್ದು, ಲಂಬವಾಗಿ 295,753 ಹಾಗೂ 658 ಸಂಖ್ಯೆಯನ್ನು ಹೊಂದಿದೆ.
  • ಕೊನೆಗೆ ಈ ಚೌಕದ ಅಡ್ಡ ಹಾಗೂ ಲಂಬವಾಗಿ ಪ್ರತಿ ಸಾಲಿನ ಸಂಖ್ಯೆಯನ್ನು ಕೂಡಿಸಿದಾಗ ಉತ್ತರವು ಹದಿನೈದು ಬರುತ್ತದೆ.

ಇದನ್ನೂ ಓದಿ:ಈ ಚಿತ್ರದಲ್ಲಿ ಕಲ್ಲುಗಳ ನಡುವೆ ಅಡಗಿದೆ ಕಪ್ಪೆ, ನೀವು ಈ ಉಭಯವಾಸಿ ಜೀವಿಯನ್ನು ಹುಡುಕಬಲ್ಲಿರಾ

ಈ ವಿಡಿಯೋ ಇದುವರೆಗೆ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಅದ್ಭುತ ಎಂದಿದ್ದಾರೆ. ಇನ್ನೊಬ್ಬರು ಇದು ಮ್ಯಾಜಿಕ್ ಬಾಕ್ಸ್ ಪವರ್ ಈ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಶಿಕ್ಷಣವು ಅತ್ಯಗತ್ಯ ಆದರೆ ಜ್ಞಾನವು ಶಕ್ತಿ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ