Optical Illusion: ಈ ಚಿತ್ರದಲ್ಲಿ ಕಲ್ಲುಗಳ ನಡುವೆ ಅಡಗಿದೆ ಕಪ್ಪೆ, ನೀವು ಈ ಉಭಯವಾಸಿ ಜೀವಿಯನ್ನು ಹುಡುಕಬಲ್ಲಿರಾ
ಮೋಜಿನ ಆಟಗಳು ಎಲ್ಲರಿಗೂ ಇಷ್ಟನೇ. ಇಂತಹ ಆಪ್ಟಿಕಲ್ ಇಲ್ಯೂಷನ್ ಸೇರಿದಂತೆ ಇನ್ನಿತ್ತರ ಒಗಟಿನ ಚಿತ್ರಗಳನ್ನು ಬಿಡಿಸುವಾಗ ಹತ್ತರಲ್ಲಿ ಒಂಬತ್ತು ಜನರು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಇನ್ನು ಕೆಲವರು ಬಹುಬೇಗನೆ ಉತ್ತರ ಕಂಡುಕೊಂಡು ಬುದ್ಧಿವಂತರೆನಿಸಿಕೊಳ್ಳುತ್ತಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಚಿತ್ರದಲ್ಲಿ ಅಡಗಿರುವ ಕಪ್ಪೆಯನ್ನು ಕಂಡುಹಿಡಿಯಬೇಕು. ಈ ಒಗಟು ಬಿಡಿಸಲು ನೀವು ರೆಡಿನಾ.

ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್ ಇಲ್ಯೂಷನ್ (Optical Illusion) ಹಾಗೂ ಬ್ರೈನ್ ಟೀಸರ್‌ನಂತಹ ಟ್ರಿಕ್ಕಿ ಒಗಟಿನ ಚಿತ್ರಗಳು ವೈರಲ್ ಆಗುತ್ತವೆ. ಈ ಒಗಟುಗಳನ್ನು ಬಿಡಿಸುವುದೆಂದರೆ ಕೆಲವರಿಗೆ ಇಷ್ಟ, ಇನ್ನು ಕೆಲವರಿಗೆ ಕಷ್ಟ. ನಿಮ್ಮ ಮೆದುಳಿಗೆ ವ್ಯಾಯಾಮ ನೀಡುವುದಲ್ಲದೇ, ನಿಮ್ಮ ದೃಷ್ಟಿ ಸಾಮರ್ಥ್ಯ, ಯೋಚನಾ ಸಾಮರ್ಥ್ಯ ಎಷ್ಟಿದೆ ಪರೀಕ್ಷಿಸಲು ಸಹಾಯ ಮಾಡುತ್ತದೆ. ಇಂತಹದ್ದೇ ಕಠಿಣ ಸವಾಲಿನ ಚಿತ್ರವೊಂದು ವೈರಲ್ ಆಗಿದೆ. ಕಲ್ಲುಗಳ ನಡುವೆ ಅಡಗಿ ಕುಳಿತಿರುವ ಕಪ್ಪೆಯನ್ನು (frog) ಕಂಡು ಹಿಡಿಯುವ ಸವಾಲು ನೀಡಲಾಗಿದೆ. ನೀವು ಈ ಒಗಟು ಬಿಡಿಸಿ ಜಾಣರು ಎನಿಸಿಕೊಳ್ಳಲು ರೆಡಿ ಇದ್ದೀರಾ ಅಂತಾದ್ರೆ ಈ ಚಿತ್ರದತ್ತ ಒಮ್ಮೆ ಕಣ್ಣು ಹಾಯಿಸಿ.
ಈ ಚಿತ್ರದಲ್ಲಿ ಏನಿದೆ?
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಗೊಂದಲಕ್ಕೀಡು ಮಾಡಿ ನಿಮ್ಮ ಕಣ್ಣನ್ನು ಮೋಸಗೊಳಿಸಬಹುದು. ಈ ಚಿತ್ರವು ನೋಡುವುದಕ್ಕೆ ಸಹಜವಾಗಿ ಕಂಡರೂ ಇದರಲ್ಲಿರುವ ಸವಾಲು ಸ್ವಲ್ಪ ಕಠಿಣವಾಗಿದೆ. ಆ ಫೋಟೋದಲ್ಲಿ, ಕಲ್ಲುಗಳು ಮತ್ತು ಕಪ್ಪು ಬಣ್ಣದ ಪೈಪ್‌ಗಳು ಗೋಚರಿಸುತ್ತವೆ. ಆದಾಗ್ಯೂ, ಈ ಚಿತ್ರದಲ್ಲಿ ಕಪ್ಪೆಯೊಂದು ಅಡಗಿದೆ. ಇಲ್ಲಿರುವ ಸವಾಲು ಕಪ್ಪೆ ಎಲ್ಲಿದೆ ಎಂಬುದನ್ನು ಕಂಡುಹಿಡಿಯುವುದು. ನೀವು 5 ಸೆಕೆಂಡುಗಳಲ್ಲಿ ಈ ಉಭಯವಾಸಿ ಜೀವಿಯನ್ನು ಕಂಡುಹಿಡಿಯಲು ಸಾಧ್ಯವಾದರೆ, ನಿಮ್ಮ ವೀಕ್ಷಣಾ ಕೌಶಲ್ಯಕ್ಕೆ ನೀವು ಹ್ಯಾಟ್ಸ್ ಆಫ್ ಹೇಳುತ್ತೇವೆ.
ಈ ಸವಾಲನ್ನು ಸ್ವೀಕರಿಸಿದ್ದೀರಾ?
ಈ ಒಗಟಿನ ಆಟಗಳು ಟೈಮ್ ಪಾಸ್ ಮಾಡುವ ಜೊತೆಗೆ ಮೆದುಳಿಗೆ ಕೆಲಸ ನೀಡುತ್ತದೆ. ಈ ಚಿತ್ರವು ಕೂಡ ನಿಮ್ಮ ಮೆದುಳಿಗೆ ವ್ಯಾಯಾಮ ನೀಡಲಿದ್ದು, ಕೇವಲ ಐದು ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಕಪ್ಪೆಯನ್ನು ಗುರುತಿಸಬೇಕು. ನೀವು ಈ ಸವಾಲನ್ನು ಸ್ವೀಕರಿಸಲು ರೆಡಿ ಇದ್ರೆ ನಿಮ್ಮ ಸಮಯವೇ ಈಗಲೇ ಆರಂಭವಾಗುತ್ತದೆ.
ಇದನ್ನೂ ಓದಿ:ಬೆಡ್ ರೂಮ್‌ನಲ್ಲಿ ಅಡಗಿ ಕುಳಿತಿರುವ ಬೆಕ್ಕನ್ನು ಕಂಡುಹಿಡಿಯುವಿರಾ
ನಿಮ್ಮ ಕಣ್ಣಿಗೆ ಕಪ್ಪೆ ಕಂಡಿತೇ?
ಈ ಚಿತ್ರವನ್ನು ಎಷ್ಟೇ ಸೂಕ್ಷ್ಮವಾಗಿ ಗಮನಿಸಿದರೂ ಐದು ಸೆಕೆಂಡುಗಳಲ್ಲಿ ಕಪ್ಪೆಯನ್ನು ಹುಡುಕಲು ಸಾಧ್ಯವಾಗಲಿಲ್ಲವೇ. ಹೆಚ್ಚು ಯೋಚಿಸಬೇಡಿ. ನೂರರಲ್ಲಿ ಹತ್ತು ಜನರಿಗೆ ಮಾತ್ರ ಕಪ್ಪೆಯನ್ನು ಹುಡುಕಲು ಸಾಧ್ಯವಾಗಿದೆ. ನೀವು ಅವರಲ್ಲಿ ಒಬ್ಬರಾಗಿದ್ದರೆ ನಿಮಗೆ ಅಭಿನಂದನೆಗಳು. ನಿಮ್ಮ ಕಣ್ಣಿಗೆ ಕಪ್ಪೆ ಗೋಚರಿಸಲಿಲ್ಲ ಎಂದಾದರೆ ನಾವೇ ಕಪ್ಪೆ ಎಲ್ಲಿದೆ ಎಂದು ಹೇಳುತ್ತೇವೆ. ಈ ಕೆಳಗಿನ ಫೋಟೋವನ್ನು ನೋಡಿ, ಆ ಫೋಟೋದಲ್ಲಿ ಕಪ್ಪೆ ಎಲ್ಲಿದೆ ಎದು ಕೆಂಪು ಬಣ್ಣದಿಂದ ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:15 am, Thu, 6 November 25




