Viral: ಭಾರತದ ರಾಷ್ಟ್ರೀಯ ಪ್ರಾಣಿಯಾಗಿ ಹುಲಿಯನ್ನು ಆಯ್ಕೆ ಮಾಡಿಕೊಂಡದ್ದರ ಹಿಂದಿದೆ ಈ ಕಾರಣ
ನಮ್ಮ ರಾಷ್ಟ್ರೀಯ ಪ್ರಾಣಿ ಯಾವುದೆಂದು ಸಣ್ಣ ಮಕ್ಕಳನ್ನು ಕೇಳಿದ್ರು ಕೂಡ ಹೇಳುವ ಉತ್ತರ ಹುಲಿ. ಹೌದು, ಭಾರತದ ರಾಷ್ಟ್ರೀಯ ಪ್ರಾಣಿಯಾಗಿರುವ ಹುಲಿಯೂ ಹಳದಿ ಹಾಗೂ ಕಿತ್ತಳೆ ಚರ್ಮದ ಮೇಲೆ ಕಪ್ಪು ಪಟ್ಟೆಗಳನ್ನು ಹೊಂದಿದ್ದು ತನ್ನ ಶಕ್ತಿ ಹಾಗೂ ಚುರುಕುತನದಿಂದಲೇ ಹೆಸರುವಾಸಿಯಾಗಿದೆ. ಆದರೆ ಹುಲಿಯನ್ನು ರಾಷ್ಟ್ರೀಯ ಪ್ರಾಣಿಯಾಗಿ ಆಯ್ಕೆ ಮಾಡಿಕೊಂಡದ್ದು ಯಾಕೆಂದು ಒಮ್ಮೆಯಾದ್ರೂ ಯೋಚಿಸಿದ್ದೀರಾ.ಇದಕ್ಕೆ ಉತ್ತರ ಇಲ್ಲಿದೆ.

ಕಾಡಿನ ರಾಜ ಸಿಂಹವಿರುವಾಗ ಭಾರತದ ರಾಷ್ಟ್ರೀಯ ಪ್ರಾಣಿಯಾಗಿ (National Animal) ಹುಲಿಯನ್ನೇ ಯಾಕೆ ಆಯ್ಕೆ ಮಾಡಲಾಯಿತು, ಹೀಗೊಂದು ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಆದರೆ ನಾವೆಲ್ಲರೂ ಸಣ್ಣವರಿರುವಾಗಲೇ ಶಿಕ್ಷಕರು ರಾಷ್ಟ್ರೀಯ ಪ್ರಾಣಿ ಹುಲಿ ಅಥವಾ ಬೆಂಗಾಲ್ ಟೈಗರ್ (Bengal Tiger) ಎಂದೇ ಹೇಳಿಕೊಟ್ಟದ್ದು. ಈ ಪ್ರಾಣಿಯನ್ನೇ ಯಾಕೆ ಆಯ್ಕೆ ಮಾಡಲಾಯಿತು ಎನ್ನುವ ಪ್ರಶ್ನೆಯನ್ನು ನಾವು ಕೇಳಲೇ ಇಲ್ಲ. ಆದರೆ ಹುಲಿಯು ತನ್ನ ಸೌಂದರ್ಯ ಹಾಗೂ ಶಕ್ತಿಶಾಲಿಯಾಗಿರುವ ಕಾರಣವೇ ರಾಷ್ಟ್ರ ಪ್ರಾಣಿಯಾಗಿದೆ ಎಂದುಕೊಂಡಿದ್ದೇವೆ. ಆದರೆ ಈ ಪ್ರಾಣಿಯ ಆಯ್ಕೆಯ ಹಿಂದೆ ಈ ಕಾರಣಗಳು ಇವೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ರಾಷ್ಟ್ರೀಯ ಪ್ರಾಣಿಯಾಗಿ ಹುಲಿಯ ಆಯ್ಕೆಗೆ ಕಾರಣವಿದು
ದಿವ್ಯಾ ಭಟ್ (Divya Bhat) ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಈ ವಿಡಿಯೋದಲ್ಲಿ ರಾಷ್ಟ್ರೀಯ ಪ್ರಾಣಿಯಾಗಿ ಹುಲಿಯನ್ನು ಆಯ್ಕೆ ಮಾಡಿಕೊಂಡಿರುವುದರ ಹಿಂದಿನ ಕಾರಣವನ್ನು ವಿವರಿಸಿದ್ದಾರೆ. ಹೌದು, 1972 ರವರೆಗೆ ಭಾರತದ ರಾಷ್ಟ್ರೀಯ ಪ್ರಾಣಿಯಾಗಿ ಇದ್ದದ್ದು ಕಾಡಿನ ರಾಜ ಸಿಂಹ. ಆದರೆ 1973 ರಲ್ಲಿ ಭಾರತವು ಅಧಿಕೃತವಾಗಿ ಬೆಂಗಾಲ್ ಟೈಗರ್‌ನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿತು. ಹುಲಿ ಅತ್ಯಂತ ಶಕ್ತಿ ಶಾಲಿ ಎನ್ನುವುದು ಮಾತ್ರ ಇದಕ್ಕೆ ಕಾರಣವಾಗಿಲ್ಲ. ಈ ಪ್ರಾಣಿ ಸುಂದರ್ ಬನ್ಸ್‌ನಿಂದ ಪಶ್ಚಿಮ ಘಟ್ಟಗಳವರೆಗೆ ಕಾಣಸಿಗುತ್ತವೆ. ಇದು ಜೈವಿಕ ವೈವಿಧ್ಯತೆಯಲ್ಲಿ ಹುಲಿಯು ರಾಷ್ಟ್ರೀಯ ಏಕತೆಯ ಸಂಕೇತವಾಗಿದೆ. ಇನ್ನು ಹುಲಿಯ ಸಂಖ್ಯೆಯೂ ಕಡಿಮೆಯಾಗುತ್ತಿರುವುರಿಂದ ಅದನ್ನು ರಕ್ಷಿಸುವ ಉದ್ದೇಶದಿಂದ ಭಾರತ ಸರ್ಕಾರವು 1973 ರಲ್ಲಿ ಐತಿಹಾಸಿಕ ಪ್ರಾಜೆಕ್ಟ್ ಟೈಗರ್ ಅನ್ನು ಪ್ರಾರಂಭಿಸಿತು ಎನ್ನಲಾಗಿದೆ.
ವಿಡಿಯೋ ಇಲ್ಲಿದೆ ನೋಡಿ
ಇದನ್ನೂ ಓದಿ:ಪ್ರವಾಸಿಗ ಹುಲಿ ಬಾಯಿಂದ ಜಸ್ಟ್ ಮಿಸ್; ಭಯಾನಕ ವೈರಲ್ ವಿಡಿಯೋ ಇಲ್ಲಿದೆ
ಏನಿದು ಪ್ರಾಜೆಕ್ಟ್ ಟೈಗರ್?
ಭಾರತ ಸರ್ಕಾರವು 1973 ರಲ್ಲಿ ಪ್ರಾರಂಭಿಸಿದ ಪ್ರಾಜೆಕ್ಟ್ ಟೈಗರ್ ಇದೊಂದು ಅಭಿಯಾನವಾಗಿದ್ದು, ಹುಲಿಯನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಮಾಡುವುದು ಉದ್ದೇಶವಾಗಿತ್ತು. ಈ ಹಿನ್ನಲೆಯನ್ನು ಈ ಅಭಿಯಾನವನ್ನು ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಿಂದ ಪ್ರಾರಂಭವಾಯಿತು. ಇದರ ಮೂಲ ಉದ್ದೇಶವೇ ಜೀವ ವೈವಿಧ್ಯತೆಯ ಪ್ರಮುಖ ಭಾಗವಾದ ಹುಲಿಯನ್ನು ರಕ್ಷಿಸುವುದಾಗಿತ್ತು. ಈ ಪ್ರಾಜೆಕ್ಟ್ ಟೈಗರ್ ಅಡಿಯಲ್ಲಿ, ದೇಶದಲ್ಲಿ 37,761 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿರುವ 27 ಹುಲಿ ಮೀಸಲು ಪ್ರದೇಶಗಳನ್ನು ರಚಿಸಲಾಯಿತು. ಈ ಮೂಲಕ ಹುಲಿಗಳ ಸಂತತಿ ನಶಿಸಿ ಹೋಗುವುದನ್ನು ಕಡಿಮೆ ಮಾಡಿ ಅವುಗಳ ಆವಾಸಸ್ಥಾನವನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿತ್ತು. ಈ ಎಲ್ಲಾ ಕಾರಣದಿಂದ ಹುಲಿಯೂ ನಮ್ಮ ರಾಷ್ಟ್ರೀಯ ಪ್ರಾಣಿಯಾಗಿ ಹೊರಹೊಮ್ಮಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:33 am, Tue, 18 November 25




