ರೇಂಜ್ ರೋವರ್ ಕಾರು ಕೊಡ್ತೀನಿ, ಫ್ಲಾಟ್ ಕೊಡ್ತೀನಿ ಎಂದ ಮಾವ, ಬೇಡವೆಂದಿದ್ದಕ್ಕೆ ವರನೇ ಬೇಡವೆಂದ ವಧು

ವರದಕ್ಷಿಣೆಗಾಗಿ ಹಾತೊರೆಯುವ ಯುವಕರ ನಡುವೆ ವರದಕ್ಷಿಣೆ ಏನೂ ಬೇಡ ಮಗಳನ್ನು ಮದುವೆ ಮಾಡಿಕೊಡಿ ಎಂದು ಕೇಳಿದ್ದಕ್ಕೆ ಈ ವರನೇ ಬೇಡ ಎಂದು ವಧು ಮದುವೆಯನ್ನು ನಿರಾಕರಿಸಿರುವ ವಿಚಿತ್ರ ಘಟನೆ ನಡೆದಿದೆ. ರೆಡಿಟ್​ನಲ್ಲಿ ಈ ಕುರಿತು ಒಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಹೆಣ್ಣಿನ ಕಡೆಯವರು ರೇಂಜ್ ರೋವರ್ ಕಾರು, ಫ್ಲಾಟ್​ ಕೊಡುತ್ತೀನಿ ಎಂದಿದ್ದಕ್ಕೆ ವರ ಇದೆಲ್ಲಾ ಬೇಡ ನಿಮ್ಮ ಮಗಳನ್ನು ಮದುವೆ ಮಾಡಿಕೊಡಿ ಸಾಕು ಎಂದಿದ್ದಕ್ಕೆ ಆ ವರನನ್ನೇ ರಿಜೆಕ್ಟ್​ ಮಾಡಿರುವ ಘಟನೆ ಇದಾಗಿದೆ.

ರೇಂಜ್ ರೋವರ್ ಕಾರು ಕೊಡ್ತೀನಿ, ಫ್ಲಾಟ್ ಕೊಡ್ತೀನಿ ಎಂದ ಮಾವ, ಬೇಡವೆಂದಿದ್ದಕ್ಕೆ ವರನೇ ಬೇಡವೆಂದ ವಧು
ಮದುವೆ

Updated on: Oct 03, 2025 | 12:19 PM

ವರದಕ್ಷಿಣೆ(Dowry) ಕೊಟ್ಟಿಲ್ಲ, ಕಾರು, ಮನೆ ಕೊಟ್ಟಿಲ್ಲ ಎನ್ನುವ ಕೋಪದಲ್ಲಿ ಮದುವೆಯನ್ನು ತಿರಸ್ಕರಿಸುವ ಹುಡುಗರು ಸಾಕಷ್ಟು ಮಂದಿ ಇದ್ದಾರೆ. ಮದುವೆಯಾದ ಮೇಲೆ ಮನೆಯಿಂದ ಮತ್ತಷ್ಟು ಹಣ ತೆಗೆದುಕೊಂಡು ಬಾ ಎಂದು ಪತ್ನಿಯನ್ನು ಹಿಂಸಿಸುವ ಜನರು ಕೂಡ ಸಮಾಜದಲ್ಲಿದ್ದಾರೆ. ಇದೇ ಕಾರಣದಿಂದಾಗಿ ಎಷ್ಟೋ ಹೆಣ್ಣುಮಕ್ಕಳು ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ, ರೆಡಿಟ್​ನಲ್ಲಿ ಈ ಕುರಿತು ಒಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಹೆಣ್ಣಿನ ಕಡೆಯವರು ರೇಂಜ್ ರೋವರ್ ಕಾರು, ಫ್ಲಾಟ್​ ಕೊಡುತ್ತೀನಿ ಎಂದಿದ್ದಕ್ಕೆ ವರ ಇದೆಲ್ಲಾ ಬೇಡ ನಿಮ್ಮ ಮಗಳನ್ನು ಮದುವೆ ಮಾಡಿಕೊಡಿ ಸಾಕು ಎಂದಿದ್ದಕ್ಕೆ ಆ ವರನನ್ನೇ ರಿಜೆಕ್ಟ್​ ಮಾಡಿರುವ ಘಟನೆ ಇದಾಗಿದೆ. ಆ ಘಟನೆ ಎಲ್ಲಿ ನಡೆದಿದೆ, ವ್ಯಕ್ತಿ ಯಾರು ಎನ್ನುವ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಭಾರತೀಯ ವಿವಾಹಗಳಲ್ಲಿ ಕುಟುಂಬ ಮೌಲ್ಯಕ್ಕಿಂತ ವರದಕ್ಷಿಣೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಘಟನೆಗಳನ್ನು ವಿವರಿಸುತ್ತಾ, ಪೋಸ್ಟ್‌ನಲ್ಲಿ ತನ್ನ 27 ವರ್ಷದ ಸಂಬಂಧಿಯೊಬ್ಬನಿಗೆ ಉತ್ತಮ ಸಂಪಾದನೆ ಇದೆ. ಆತನ ಬಳಿ BMW M340i ಕಾರಿದೆ. ಹಾಗಾಗಿ ಆತನನ್ನು ತಿರಸ್ಕರಿಸಲು ಕಾರಣವೇ ಇರಲಿಲ್ಲ. ಆದರೆ ವರದಕ್ಷಿಣೆ ತೆಗೆದುಕೊಳ್ಳಲು ನಿರಾಕರಿಸಿದ್ದರಿಂದ ಆತನನ್ನು ತಿರಸ್ಕರಿಸಲಾಯಿತು ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ನೊಯ್ಡಾ ವರದಕ್ಷಿಣೆ ಕಿರುಕುಳ ಪ್ರಕರಣ; ನಿಕ್ಕಿಯನ್ನು ಸುಟ್ಟು ಕೊಲ್ಲಲು 1 ತಿಂಗಳಿಂದ ರೆಡಿಯಾಗಿತ್ತು ಪ್ಲಾನ್!

ಆತನದ್ದು ರಿಯಲ್ ಎಸ್ಟೇಟ್, ರೆಸ್ಟೋರೆಂಟ್‌ಗಳು ಮತ್ತು ಪಬ್‌ಗಳ ವ್ಯವಹಾರವೆ ಮತ್ತು ಪೂರ್ವಜರ ಆಸ್ತಿಯನ್ನು ಹೊಂದಿರುವ ಶ್ರೀಮಂತ ಕುಟುಂಬದಿಂದ ಬಂದಿದ್ದಾನೆ.

ಹಾಗಾಗಿ ತನ್ನ ಆರ್ಥಿಕ ಪರಿಸ್ಥಿತಿ ಇಷ್ಟು ಚೆನ್ನಾಗಿರುವಾಗ ಹುಡುಗಿಯ ಮನೆಯಿಂದ ಹಣ ಪಡೆಯುವುದೇಕೆ, ಆಕೆಯ ಉತ್ತಮ ಜೀವನ ಕೊಡುವ ಕನಸ್ಸನ್ನು ಆತ ಕಂಡಿದ್ದ. ಆದರೆ ವರದಕ್ಷಿಣೆ ಬೇಡವೆಂದನೆಂದು ಆತನನ್ನು ರಿಜೆಕ್ಟ್​ ಮಾಡಲಾಗಿದೆ ಎಂಬುದು ಅಚ್ಚರಿ ಮೂಡಿಸಿದೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 11:29 am, Fri, 3 October 25