
ಗಣಿತ (Mathematics) ಎಂದರೆ ಹೆಚ್ಚಿನವರಿಗೆ ಕಬ್ಬಿಣದ ಕಡಲೆಯಾಗಿದ್ದು, ಈ ವಿಷಯದ ಬಗ್ಗೆ ಆಸಕ್ತಿ ತೋರಿಸುವವರು ಕಡಿಮೆಯೇ. ಆದರೆ ಸರಿಯಾಗಿ ಗಮನಿಸಿದಾಗ ಈ ಗಣಿತ ಕಲಿಯುವುದು ಮೋಜಿನ ಸಂಗತಿಯಾಗಿದ್ದು, ಗಣಿತದ ಸೂತ್ರ, ಲೆಕ್ಕವನ್ನು ಬಿಡಿಸುವ ವಿಧಾನವು ಬಹಳ ಆಸಕ್ತಿದಾಯಕವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಮ್ಯಾಜಿಕ್ ಸ್ಕ್ವೇರ್ ಗಳಿಗೆ (Magic Square) ಸಂಬಂಧ ಪಟ್ಟ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಈ ಮೋಜಿನ ಚೌಕದಲ್ಲಿ 1 ರಿಂದ 9 ಸಂಖ್ಯೆಯನ್ನು ಬರೆಯಲಾಗಿದೆ. ಪ್ರತಿ ಅಡ್ಡ ಹಾಗೂ ಲಂಬವಾಗಿ ಬರೆದ ಸಂಖ್ಯೆಯನ್ನು ಕೂಡಿಸಿದಾಗ ಉತ್ತರವು 15 ಎಂದು ಬರಬೇಕು. ಇಂತಹ ಮೋಜಿನ ಗಣಿತದ ಆಟವನ್ನು ಬಿಡಿಸಲು ನಿಮ್ಮಿಂದ ಸಾಧ್ಯವೇ ಎಂದು ನೋಡಿ.
Eliya Mohammed ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟ್ಟ ಹುಡುಗಿಯೊಬ್ಬಳು ಮ್ಯಾಜಿಕ್ ಸ್ಕ್ವೇರ್ ಬಿಡಿಸಲು ತಲೆ ಉಪಯೋಗಿಸಿದ್ದಾಳೆ. ಈ ಪುಟ್ಟ ಹುಡುಗಿಯ ಮುಂದಿದ್ದ ಸವಾಲು, ಈ ಮೋಜಿನ ಚೌಕದಲ್ಲಿ ಬರೆಯಲಾದ ಸಂಖ್ಯೆಗಳನ್ನು ಅಡ್ಡ ಹಾಗೂ ಲಂಬವಾಗಿ ಕೂಡಿಸಿದಾಗ ಉತ್ತರವು ಹದಿನೈದು ಬರಬೇಕು. ಹೀಗಾಗಿ ಈ ಮೋಜಿನ ಸ್ಕ್ವೇರ್ ಬಿಡಿಸಲು ಈ ಜಾಣೆ ಹುಡುಗಿಯೂ ಕೆಲವು ಟ್ರಿಕ್ಸ್ ಬಳಸಿದ್ದಾಳೆ.
ಇದನ್ನೂ ಓದಿ:ಈ ಚಿತ್ರದಲ್ಲಿ ಕಲ್ಲುಗಳ ನಡುವೆ ಅಡಗಿದೆ ಕಪ್ಪೆ, ನೀವು ಈ ಉಭಯವಾಸಿ ಜೀವಿಯನ್ನು ಹುಡುಕಬಲ್ಲಿರಾ
ಈ ವಿಡಿಯೋ ಇದುವರೆಗೆ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಅದ್ಭುತ ಎಂದಿದ್ದಾರೆ. ಇನ್ನೊಬ್ಬರು ಇದು ಮ್ಯಾಜಿಕ್ ಬಾಕ್ಸ್ ಪವರ್ ಈ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಶಿಕ್ಷಣವು ಅತ್ಯಗತ್ಯ ಆದರೆ ಜ್ಞಾನವು ಶಕ್ತಿ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ