Viral: ಪೊಲೀಸ್‌ ವ್ಯಾನ್‌ ಕಿಟಕಿಯಿಂದ ಉಗುಳಿದ ಪೊಲೀಸ್‌ ಪೇದೆಗೆ ಸಖತ್‌ ಕ್ಲಾಸ್‌ ತೆಗೆದುಕೊಂಡು ವ್ಯಕ್ತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 09, 2024 | 5:38 PM

ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಬೇಲಿಯೇ ಎದ್ದು ಹೊಲ ಮೇಯ್ದಂತೆ ಕಾನೂನು ನೀತಿ-ನಿಯಮಾವಳಿಗಳನ್ನು ಕಾಪಾಡಬೇಕಾದ ಪೊಲೀಸಪ್ಪನೇ ವ್ಯಾನ್‌ ಕಿಟಕಿಯಿಂದ ರಸ್ತೆಗೆ ಉಗುಳಿದ್ದಾನೆ. ಈ ಉಗುಳು ಸ್ಕೂಟರ್‌ನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರ ಮೇಲೆ ಬಿದ್ದಿದ್ದು, ಕೋಪಗೊಂಡ ಆ ವ್ಯಕ್ತಿ ಪೊಲೀಸಪ್ಪನಿಗೆ ಸಖತ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಈ ವ್ಯಕ್ತಿಯ ನಡೆಗೆ ನೆಟ್ಟಿಗರು ಭೇಷ್‌ ಎಂದಿದ್ದಾರೆ.

ಸ್ವಚ್ಛತೆಯ ದೃಷ್ಟಿಯಿಂದ ನಮ್ಮ ದೇಶದಲ್ಲಿ ಕಂಡ ಕಂಡಲ್ಲಿ ಉಗುಳ ಬಾರದು ಎಂಬ ನಿಯಮವಿದೆ. ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಎಲ್ಲೆಂದರಲ್ಲಿ ಉಗುಳಿದವರಿಗೆ ಪೊಲೀಸರು ದಂಡ ವಿಧಿಸಿದ್ದೂ ಇದೆ. ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಬೇಲಿಯೇ ಎದ್ದು ಹೊಲ ಮೇಯ್ದಂತೆ ಕಾನೂನು ಸುವ್ಯಸ್ಥೆ, ನೀತಿ-ನಿಯಮಗಳನ್ನು ಕಾಪಾಡಬೇಕಾದ ಪೊಲೀಸಪ್ಪನೇ ವ್ಯಾನ್‌ ಕಿಟಕಿಯಿಂದ ಉಗುಳಿದ್ದಾನೆ. ಈ ಉಗುಳು ಸ್ಕೂಟರ್‌ನಲ್ಲಿದ್ದ ವ್ಯಕ್ತಿಯೊಬ್ಬರ ಮೇಲೆ ಬಿದ್ದಿದ್ದು, ರಸ್ತೆಯಲ್ಲಿಯೇ ಆ ವ್ಯಕ್ತಿ ಪೊಲೀಸ್‌ ಪೇದೆಗೆ ಸಖತ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ಪ್ರಜ್ಞಾವಂತ ನಾಗರಿಕನ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದ್ದು, ದಂಪತಿಗಳಿಬ್ಬರು ಸ್ಕೂಟರ್‌ನಲ್ಲಿ ಹೋಗುತ್ತಿರುವ ವೇಳೆ ಪೊಲೀಸ್‌ ವ್ಯಾನ್‌ನಲ್ಲಿ ಕುಳಿತಿದ್ದ ಪೊಲೀಸ್‌ ಪೇದೆಯೊಬ್ಬ ಕಿಟಕಿಯಿಂದ ಉಗುಳಿದ್ದಾನೆ. ಈ ಉಗುಳು ಆ ವ್ಯಕ್ತಿಯ ಮೇಲೆ ಬಿದ್ದಿದ್ದು, ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದವರೇ ಹೀಗೆ ಎಲ್ಲೆ ಮೀರಿ ನಡೆದುಕೊಳ್ಳುತ್ತಾರಲ್ಲಾ ಎಂದು ಕೋಪಗೊಂಡ ಆ ವ್ಯಕ್ತಿ ಉಗುಳಿದ ಪೊಲೀಸ್‌ ಪೇದೆಗೆ ಸರಿಯಾಗಿ ಕ್ಲಾಸ್‌ ತೆಗೆದುಕೊಂಡಿದ್ದಾರೆ.

gharkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಉಗುಳಿದ ಪೊಲೀಸ್‌ ಪೇದೆಗೆ ವ್ಯಕ್ತಿಯೊಬ್ಬರು ಬಹಳ ಸಂಯಮದಿಂದ ಕ್ಲಾಸ್‌ ತೆಗೆದುಕೊಳ್ಳುತ್ತಿರುವ ದೃಶ್ಯವನ್ನು ಕಾಣಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ತಪ್ಪಲ್ಲವೇ, ಇದು ಸ್ವಚ್ಛತೆಗೆ ಮಾತ್ರವಲ್ಲ ಇತತರ ಆರೋಗ್ಯಕ್ಕೂ ಕೂಡಾ ಅಪಾಯ ಎಂಬುದು ನಿಮಗೆ ಗೊತ್ತಿಲ್ವಾ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಮದುಮಗಳ ಜೊತೆ ಡಾನ್ಸ್‌ ಮಾಡು ಎಂದಿದ್ದಕ್ಕೆ ರೊಚ್ಚಿಗೆದ್ದ ವರ; ಮುಂದೇನಾಯ್ತು ನೋಡಿ

ಅಕ್ಟೋಬರ್‌ 7 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಯಾವುದೇ ಭಯವಿಲ್ಲದೆ ಆ ವ್ಯಕ್ತಿ ಮಾತನಾಡಿದ ರೀತಿ ತುಂಬಾ ಇಷ್ಟವಾಯಿತುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಪೊಲೀಸರೇ ಆಗಲಿ ಯಾರೇ ಆಗಲಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ತಪ್ಪುʼ ಎಂದು ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ