ಶಾಲಾ-ಕಾಲೇಜುಗಳಲ್ಲಿ ಯಾವುದಾದರೂ ಕಾರ್ಯಕ್ರಮದಲ್ಲಿ ಶಿಕ್ಷಕರು ಡಾನ್ಸ್ ಮಾಡಿದ್ರೆ ಅಥವಾ ಸ್ಪೋರ್ಟ್ಸ್ ಡೇ ದಿನ ಸಖತ್ ಆಗಿ ಆಟವಾಡಿದ್ರೆ ಶಿಕ್ಷಕರ ಈ ಟ್ಯಾಲೆಂಟ್ ಕಂಡು ವಿದ್ಯಾರ್ಥಿಗಳು ಹುಚ್ಚೆದ್ದು ಕುಣಿಯುತ್ತಾರೆ. ಇಂತಹ ಸಾಕಷ್ಟು ಸಿಹಿ ಘಟನೆಗಳು ಶಾಲಾ-ಕಾಲೇಜುಗಳಲ್ಲಿ ನಡೆಯುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಶಿಕ್ಷಕಿಯೊಬ್ಬರು ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸ್ಟೇಜ್ ಮೇಲೆ ಸ್ಟೈಲಿಶ್ ಆಗಿ ರ‍್ಯಾಂಪ್ ವಾಕ್ ಮಾಡಿದ್ದು, ಇವರ ಈ ರ‍್ಯಾಂಪ್ ವಾಂಕ್‌ಗೆ ಅಲ್ಲಿದ್ದ ವಿದ್ಯಾರ್ಥಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.
ಮುಂಬೈನ ನರ್ಸೀ ಮೋಂಜಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮವೊಂದರಲ್ಲಿ ಅಲ್ಲಿನ ಮಹಿಳಾ ಶಿಕ್ಷಕಿಯೊಬ್ಬರು ಸ್ಟೈಲಿಶ್ ಆಗಿ ರ‍್ಯಾಂಪ್ ವಾಕ್ ಮಾಡಿದ್ದಾರೆ. ಕಪ್ಪು ಬಣ್ಣದ ಮಿನುಗುವ ಟಾಪ್ ಮತ್ತು ಬೆಲ್-ಬಾಟಮ್ ಪ್ಯಾಂಟ್ ಧರಿಸಿ ಶಿಕ್ಷಕಿ ಆತ್ಮ ವಿಶ್ವಾಸದಿಂದ ಸ್ಟೈಲಿಶ್ ಆಗಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ. ಇವರ ಈ ಬೋಲ್ಡ್ ವಾಕ್‌ಗೆ ವಿದ್ಯಾರ್ಥಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.
ಕಾವ್ಯ ಚೌಧರಿ (kavya)_chaudhary_30) ಎಂಬವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಶಿಕ್ಷಕಿಯೊಬ್ಬರು ಸ್ಟೇಜ್ ಮೇಲೆ ಸಖತ್ ಆಗಿ ರ‍್ಯಾಂಪ್ ವಾಕ್ ಮಾಡುತ್ತಾ ಬರುವ ದೃಶ್ಯವನ್ನು ಕಾಣಬಹುದು. ಶಿಕ್ಷಕಿಯ ಬೋಲ್ಡ್ ರ‍್ಯಾಂಪ್ ವಾಕ್‌ಗೆ ಸ್ಟೇಜ್ ಮೇಲಿದ್ದ ವಿದ್ಯಾರ್ಥಿಗಳು ಹುಚ್ಚೆದ್ದು ಕುಣಿದಿದ್ದಾರೆ.
ಇದನ್ನೂ ಓದಿ: ನಾಯಿ ಅಥವಾ ಪರ್ವತ, ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು? ಈ ಫೋಟೋ ನೋಡಿ ನಿಮ್ಮ ವ್ಯಕ್ತಿತ್ವವನ್ನು ತಿಳಿಯಿರಿ
ಸೆಪ್ಟೆಂಬರ್ 05 ರಂದು ಹಂಚಿಕೊಳ್ಳಲಾದ ಈ ವಿಡಿಯೋ 20.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮಾಡೆಲ್ ಆಗಬೇಕಿದ್ದ ಇವರು ತಪ್ಪಿ ಶಿಕ್ಷಕಿಯಾಗಿದ್ದಾರೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ವಿಡಿಯೋ ತುಂಬಾನೇ ಮುದ್ದಾಗಿದೆʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ