ಮನೆಕೆಲಸದವರಿಗೆ ದುಬಾರಿ ಬೆಲೆಯ ಐಫೋನ್‌ ಗಿಫ್ಟ್‌ ಕೊಟ್ಟ ದಂಪತಿ; ವಿಡಿಯೋ ವೈರಲ್‌

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 10, 2024 | 3:42 PM

ಮನೆ ಕೆಲಸದವರನ್ನು ನಾಯಿಗಿಂತ ಕೀಳಾಗಿ ಕಂಡು ಅವರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ತೊಂದರೆಕೊಟ್ಟ ಕ್ರೂರಿಗಳನ್ನು ನೋಡಿರುತ್ತೇವೆ. ಆದ್ರೆ ಇಲ್ಲೊಂದು ದಂಪತಿ ತಮ್ಮ ಮನೆಯ ಸದಸ್ಯರಲ್ಲಿ ಒಬ್ಬರಂತಿರುವ ಮನೆ ಕೆಲಸದವರಿಗೆ ಅವರ ಸುದೀರ್ಘ ಸೇವೆಗಾಗಿ ಪ್ರೀತಿಯಿಂದ ದುಬಾರಿ ಬೆಲೆಯ ಐಫೋನ್‌ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ನಾವು ಕೂಡಾ ನಿಮ್ಮ ಮನೆ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದೇ ಬರಬಹುದೇ ಎಂದು ನೆಟ್ಟಿಗರು ಕಾಮೆಂಟ್ಸ್‌ ಮಾಡಿದ್ದಾರೆ.

ಮನೆಕೆಲಸದವರಿಗೆ ದುಬಾರಿ ಬೆಲೆಯ ಐಫೋನ್‌ ಗಿಫ್ಟ್‌ ಕೊಟ್ಟ ದಂಪತಿ; ವಿಡಿಯೋ ವೈರಲ್‌
ವೈರಲ್​​​ ವಿಡಿಯೋ
Follow us on

ಮನೆ ಕೆಲಸದವರನ್ನು ನಾಯಿಗಿಂತ ಕೀಳಾಗಿ ನೋಡಿ ಅವರಿಗೆ ದೈಹಿಕ, ಮಾನಸಿಕ ಹಿಂಸೆಯನ್ನು ನೀಡುವವರು ಕೆಲವರಿದ್ರೆ, ಮನೆ ಕೆಲಸದವರನ್ನೂ ತಮ್ಮ ಕುಟುಂಬ ಸದಸ್ಯರಂತೆ ನೋಡಿಕೊಂಡು ಅವರಿಗೆ ತುಂಬು ಪ್ರೀತಿಯನ್ನು ನೀಡುವ ಹಲವರಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆಯಂತಿರುವ ವಿಡಿಯೋವೊಂದು ಇದೀಗ ವೈರಲ್‌ ಆಗಿದ್ದು, ದಂಪತಿಗಳಿಬ್ಬರು ತಮ್ಮ ಮನೆಯ ಸದಸ್ಯರಂತೇ ಇರುವ ಮನೆ ಕೆಲಸದವರಿಗೆ ಅವರ ಸುದೀರ್ಘ ಸೇವೆಗಾಗಿ ಪ್ರೀತಿಯಿಂದ ದುಬಾರಿ ಬೆಲೆಯ ಐಫೋನ್‌ ಮೊಬೈಲ್‌ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ನೋಡುಗರ ಮನಗೆದ್ದಿದ್ದು, ನಾವು ಕೂಡಾ ನಿಮ್ಮ ಮನೆ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದೇ ಬರಬಹುದೇ ಎಂದು ನೆಟ್ಟಿಗರು ಕಾಮೆಂಟ್ಸ್‌ ಮಾಡಿದ್ದಾರೆ.

ಮಲೇಷ್ಯಾದ ದಂಪತಿ ತಮ್ಮ ಇಬ್ಬರು ಮನೆಕೆಲಸದವರಿಗೆ ಐಫೋನ್‌ ಗಿಫ್ಟ್‌ ನೀಡಿದ್ದಾರೆ. ಯೂಟ್ಯೂಬರ್ಸ್‌ ಆಗಿರುವ ಜೆಫ್‌ ಲಿಯಾಂಗ್‌ ಮತ್ತು ಅವರ ಶ್ರೀಮತಿ ಇಂತಿರಾ ಕಲಾಂಜಿಯಂ ತಮ್ಮ ಮನೆಯ ಸದಸ್ಯರಲ್ಲಿ ಒಬ್ಬರಂತಿರುವ ಮನೆ ಕೆಲಸದವರಿಗೆ ದುಬಾರಿ ಬೆಲೆಯ ಐಫೋನ್‌ನನ್ನು ಉಡುಗೊರೆಯಾಗಿ ನೀಡಿದ್ದಾರೆ. ಇವರು ಸುಮಾರು ಎರಡು ವರ್ಷಗಳ ಹಿಂದೆ ಇಂಡೋನೇಷ್ಯಾದ ಇಬ್ಬರು ಮಹಿಳೆಯರನ್ನು ಮನೆ ಕೆಲಸಕ್ಕೆ ನೇಮಿಸಿದ್ದರು. ಈ ಇಬ್ಬರು ಅಡುಗೆ ಮಾಡುವುದರಿಂದ ಹಿಡಿದು ಮಕ್ಕಳನ್ನು ನೋಡಿಕೊಳ್ಳುವುದರವರೆಗೆ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು. ಇವರ ಈ ಸೇವೆಗಾಗಿ ನಾವು ಏನಾದರೂ ಉಡುಗೊರೆ ಕೊಡಬೇಕಲ್ಲವೇ ಎನ್ನುತ್ತಾ ಈ ದಂಪತಿ ದುಬಾರಿ ಬೆಲೆಯ ಐಫೋನ್‌ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಈ ವಿಡಿಯೋವನ್ನು ದಂಪತಿ ತಮ್ಮ ಯುಟ್ಯೂಬ್‌ (jeff&Inthira) ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಜೆಫ್‌ ಲಿಯಾಂಗ್‌ ಮತ್ತು ಇಂತಿರಾ ಇಬ್ಬರು ಮನೆ ಕೆಲಸದವರಿಗೆ ಸರ್ಪ್ರೈಸ್‌ ಆಗಿ ಐಫೋನ್‌ ಗಿಫ್ಟ್‌ ನೀಡುವಂತಹ ದೃಶ್ಯವನ್ನು ಕಾಣಬಹುದು. ಈ ದುಬಾರಿ ಉಡುಗೊರೆಯನ್ನು ಕಂಡು ಆ ಇಬ್ಬರೂ ಮಹಿಳೆಯರು ಖುಷಿಯಲ್ಲಿ ಕುಣಿದಾಡಿದ್ದಾರೆ.


ಎರಡು ವಾರಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಾನು ಕೂಡಾ ನಿಮ್ಮ ಮನೆಯಲ್ಲಿ ಕೆಲಸಕ್ಕೆ ಸೇರಿಕೊಳ್ಳಲೇʼ ಎಂದು ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಕೆಲಸದವರನ್ನೂ ಮನೆಯಲ್ಲಿ ಒಬ್ಬರಂತೆ ನೋಡಿಕೊಳ್ಳುವ ನಿಮ್ಮ ಈ ಗುಣ ತುಂಬಾನೇ ಇಷ್ಟವಾಯಿತುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಕೆಲಸದವರ ಕಣ್ಣಲ್ಲಿ ಖುಷಿ ಕಂಡು ನನಗೆ ಅಳು ಬಂತುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 3:41 pm, Thu, 10 October 24