ಮಹಾನಗರಗಳಲ್ಲಿ ದಾರಿ ತಿಳಿಯೋಕೆ ಅನೇಕರು ಗೂಗಲ್ ಮ್ಯಾಪ್ ಬಳಕೆ ಮಾಡಿಕೊಳ್ಳುತ್ತಾರೆ. ಆದರೆ, ಕೆಲವೊಮ್ಮೆ ಗೂಗಲ್ ಮ್ಯಾಪ್ ಮಾಡೋ ಎಡವಟ್ಟಿನಿಂದ ನಾವು ಪೇಚಿಗೀಡಾಗುತ್ತೇವೆ. ಗೂಗಲ್ ಮ್ಯಾಪ್ ಬಳಸುವಾಗ ದಾರಿಯೇ ಇಲ್ಲದ ಜಾಗದಲ್ಲೂ ದಾರಿ ತೋರಿಸಿ, ಡೆಡ್ ಎಂಡ್ನಲ್ಲಿ ತಂದು ನಿಲ್ಲಿಸಿದ ಉದಾಹರಣೆ ಬೇಕಷ್ಟಿದೆ. ಈಗ ಇಂಡೋನೇಷ್ಯಾದಲ್ಲೂ ಇದೇ ರೀತಿ ಆಗಿದೆ. ಗೂಗಲ್ ಮ್ಯಾಪ್ ತೋರಿಸಿದ ದಾರಿಯಿಂದಾಗಿ ಹುಡುಗನ ಕಡೆಯವರು ಬೇರೆ ಮದುವೆಗೆ ಕಾಲಿಟ್ಟಿದ್ದಾರೆ.
ಈ ಘಟನೆ ನಡೆದಿದ್ದು ಇಂಡೊನೇಷ್ಯಾದ ಪಾಕಿಸ್ ಜಿಲ್ಲೆಯಲ್ಲಿ. ಇಲ್ಲಿ ಎರಡು ಮದುವೆ ನಡೆಯುತ್ತಿತ್ತು. ಗಂಡಿನ ಕಡೆಯವರು ಗೂಗಲ್ ಮ್ಯಾಪ್ ಹಾಕಿಕೊಂಡು ಮದುವೆ ನಡೆಯುತ್ತಿರುವ ಕಲ್ಯಾಣ ಮಂಟಪಕ್ಕೆ ಬಂದಿದ್ದರು. ಅಲ್ಲಿ ದೊಡ್ಡದಾಗಿ ಕಾರ್ಯಕ್ರಮ ನಡೆಯುತ್ತಿತ್ತು. ತಾವು ಸರಿಯಾದ ಜಾಗಕ್ಕೆ ಬಂದು ತಲುಪಿದ್ದೇವೆ ಎಂದು ತಿಳಿದ ಹುಡುಗನ ಕಡೆಯವರು ಕಲ್ಯಾಣ ಮಂಟಪದ ಒಳಗೆ ಪ್ರವೇಶ ಪಡೆದಿದ್ದರು.
ಗಂಡಿನ ಕಡೆಯವರನ್ನು ಸ್ವಾಗತಿಸೋಕೆ ಕಲ್ಯಾಣ ಮಂಟಪದಲ್ಲಿ ವಿಶೇಷ ಏರ್ಪಾಡು ಮಾಡಲಾಗಿತ್ತು. ಅದರಂತೆಯೇ, ಬಂದ ಅತಿಥಿಗಳಿಗೆ ಅದ್ದೂರಿಯಾಗಿ ಸ್ವಾಗತ ಸಿಕ್ಕಿತ್ತು. ಗಂಡಿನ ಕಡೆಯವರಿಗೆ ಹಾಗೂ ಹೆಣ್ಣಿನ ಕಡೆಯವರಿಗೆ ವಿಚಿತ್ರ ಎನಿಸಿತ್ತು. ಏಕೆಂದರೆ, ಮದುವೆ ಗಂಡು ಇಲ್ಲಿ ಬದಲಾಗಿದ್ದ! ಅಷ್ಟೇ ಅಲ್ಲ, ಹುಡುಗಿ ಕೂಡ ಬದಲಾಗಿದ್ದಳು!
ಪರಸ್ಪರ ಮಾತುಕತೆ ನಡೆಸಿದಾಗ ವರನ ಕಡೆಯವರಿಗೆ ತಾವು ತಪ್ಪಾದ ಲೊಕೇಷನ್ಗೆ ಬಂದಿದ್ದೇವೆ ಎನ್ನುವುದು ಗೊತ್ತಾಗಿದೆ. ಆಮೇಲೆ ವಿಚಾರಿಸಿದಾಗ ಅಲ್ಲಿ ನಡೆಯುತ್ತಿರುವುದು ಎಂಗೇಜ್ಮೆಂಟ್, ಮದುವೆ ಅಲ್ಲ ಎನ್ನುವ ವಿಚಾರ ಕೂಡ ತಿಳಿದಿದೆ. ಗೂಗಲ್ ಮ್ಯಾಪ್ ತಪ್ಪು ಕಲ್ಯಾಣ ಮಂಟಪಕ್ಕೆ ಕರೆದುಕೊಂಡು ಬಂದಿರುವುದರಿಂದ ಈ ಎಡವಟ್ಟಾಗಿದೆ. ನಂತರ ವರನ ಕಡೆಯವರು ಸ್ಥಳೀಯರ ಸಹಾಯದಿಂದ ತಾವು ಎಲ್ಲಿಗೆ ತೆರಳಬೇಕೋ ಅಲ್ಲಿಗೆ ತೆರಳಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಟ್ರಾಫಿಕ್ನಿಂದ ಬೇಸತ್ತ ರಾಹುಲ್ ದ್ರಾವಿಡ್; ಬ್ಯಾಟ್ನಿಂದ ಎದುರು ಬದಿ ಕಾರಿನ ಗಾಜು ಪುಡಿಪುಡಿ; ವಿಡಿಯೋ ವೈರಲ್
Indira Nagar Ka Gunda: ದ್ರಾವಿಡ್ ಬಳಿಕ ನಾನೇ ಇಂದಿರಾ ನಗರದ ಗೂಂಡಾ ಎನ್ನುತ್ತಿದ್ದಾರೆ ದೀಪಿಕಾ ಪಡುಕೋಣೆ!