ಟ್ರಾಫಿಕ್​ನಿಂದ ಬೇಸತ್ತ ರಾಹುಲ್​ ದ್ರಾವಿಡ್​; ಬ್ಯಾಟ್​ನಿಂದ ಎದುರು ಬದಿ ಕಾರಿನ ಗಾಜು ಪುಡಿಪುಡಿ; ವಿಡಿಯೋ ವೈರಲ್​

Rahul Dravid Viral Video: ರಾಹುಲ್​ ದ್ರಾವಿಡ್​ ಇಷ್ಟೆಲ್ಲಾ ಸಿಟ್ಟಾಗಲು ಕಾರಣವೇನು? ಏಕೆ ಅವರು ಈ ರೀತಿ ಮಾಡಿದರು ಎಂದು ನೀವು ಕೇಳಬಹುದು. ಅದಕ್ಕೂ ಉತ್ತರವಿದೆ.

ಟ್ರಾಫಿಕ್​ನಿಂದ ಬೇಸತ್ತ ರಾಹುಲ್​ ದ್ರಾವಿಡ್​; ಬ್ಯಾಟ್​ನಿಂದ ಎದುರು ಬದಿ ಕಾರಿನ ಗಾಜು ಪುಡಿಪುಡಿ; ವಿಡಿಯೋ ವೈರಲ್​
ವೈರಲ್​ ಆದ ವಿಡಿಯೋ
Follow us
ರಾಜೇಶ್ ದುಗ್ಗುಮನೆ
|

Updated on: Apr 09, 2021 | 6:10 PM

ರಾಹುಲ್​ ದ್ರಾವಿಡ್​ ಎಂದಾಕ್ಷಣ ನೆನಪಿಗೆ ಬರೋದು ಅವರ ಶಾಂತ ಸ್ವಭಾವದ ಮುಖ ಹಾಗೂ ಸೌಮ್ಯ ಮಾತುಗಳು. ಮೈದಾನದಲ್ಲಾಗಲೀ, ಮೈದಾನದ ಹೊರಗಾಗಲೀ ರಾಹುಲ್​ ದ್ರಾವಿಡ್​ ಸಿಟ್ಟಾಗಿದ್ದು ತುಂಬಾನೇ ಕಡಿಮೆ. ಆದರೆ, ದ್ರಾವಿಡ್​ ಈಗ ಬೆಂಗಳೂರು ಟ್ರಾಫಿಕ್​ ಬಗ್ಗೆ ತುಂಬಾನೇ ಸಿಟ್ಟಾಗಿದ್ದಾರೆ. ಅಷ್ಟೇ ಅಲ್ಲ, ಟ್ರಾಫಿಕ್​ನಲ್ಲಿ ಸಿಲುಕಿ ಸಿಟ್ಟಿಗೆದ್ದ ಅವರು ಎದುರು ನಿಂತಿದ್ದ ಕಾರಿನ ಕನ್ನಡಿಯನ್ನೇ ಒಡೆದು ಹಾಕಿದ್ದಾರೆ. ಸದ್ಯ ಈ ವಿಡಿಯೋ ಸಾಕಷ್ಟು ವೈರಲ್​ ಆಗಿದೆ. ಅರೆ, ರಾಹುಲ್​ ದ್ರಾವಿಡ್​ ಇಷ್ಟೆಲ್ಲಾ ಸಿಟ್ಟಾಗಲು ಕಾರಣವೇನು? ಏಕೆ ಅವರು ಈ ರೀತಿ ಮಾಡಿದರು ಎಂದು ನೀವು ಕೇಳಬಹುದು. ಅದಕ್ಕೂ ಉತ್ತರವಿದೆ. ಇದು ಜಾಹೀರಾತಿಗಾಗಿ ಮಾಡಿದ ವಿಡಿಯೋ. ಜಾಹೀರಾತಿನ ಕ್ರಿಯೇಟಿವಿಟಿ ನೋಡಿ ಎಲ್ಲರೂ ನಿಬ್ಬೆರಗಾಗಿದ್ದಾರೆ.

ಕ್ರೆಡಿಟ್​ ಕಾರ್ಡ್​ ಬಿಲ್​ ಪೇ ಮಾಡುವ ಕ್ರೆಡ್​ ಕಂಪೆನಿ ಕಳೆದ ಐಪಿಎಲ್​ ಸೀಸನ್​ನಲ್ಲಿ ಸಾಕಷ್ಟು ಆಸಕ್ತಿದಾಯಕ ಜಾಹೀರಾತುಗಳನ್ನು ಪರಿಚಯಿಸಿತ್ತು. ಆ್ಯಡ್​ಗಳು ಪ್ರಸಾರವಾದರೆ ಚಾನೆಲ್​ ಬದಲಿಸುವವರು ಕೂಡ ಒಂದು ಕ್ಷಣ ಈ ಜಾಹೀರಾತುಗಳನ್ನು ಕಣ್ತುಂಬಿಕೊಂಡ ಉದಾಹರಣೆ ಇದೆ. ಅದೇ ರೀತಿ, ಈ ಬಾರಿಯ ಐಪಿಎಲ್​ ಸೀಸನ್​ಗೂ ಮೊದಲು ಹೊಸ ವಿಧವಾದ ಆ್ಯಡ್​ನೊಂದಿಗೆ ಕ್ರೆಡ್​ ಬಂದಿದೆ.

ಜಾಹೀರಾತಿನ ವಿಡಿಯೋವನ್ನು ವಿರಾಟ್ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈಗ ಹಂಚಿಕೊಂಡಿದ್ದಾರೆ. ಜಾಹೀರಾತಿನಲ್ಲಿ ದ್ರಾವಿಡ್​ ಟ್ರಾಫಿಕ್​ನಲ್ಲಿ ಸಿಲುಕಿರುತ್ತಾರೆ. ಅಷ್ಟೇ ಅಲ್ಲ, ಒತ್ತಡಕ್ಕೆ ಒಳಗಾಗಿ ಅಕ್ಕ ಪಕ್ಕದಲ್ಲಿ ನಿಂತಿರುವ ಕಾರು ಚಾಲಕರ ಮೇಲೆ ಸಿಟ್ಟಿಗೆ ಒಳಗಾಗಿದ್ದಾರೆ. ಎದುರು ನಿಂತಿರುವ ಕಾರು ಗಾಜನ್ನು ಬ್ಯಾಟ್​​ನಿಂದ ಒಡೆದು ಹಾಕಿದ್ದಾರೆ. ರಾಹುಲ್​ ಅವರ ಈ ರೀತಿಯ ಮುಖವನ್ನು ನಾನು ಎಂದಿಗೂ ನೋಡಿಲ್ಲ ಎಂದು ವಿರಾಟ್​ ಕೊಹ್ಲಿ ಕ್ಯಾಪ್ಶನ್​ ನೀಡಿದ್ದಾರೆ. ಈ ವಿಡಿಯೋ ನೋಡಿದ ಸಾಕಷ್ಟು ಮಂದಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್​ ಆಗಿದೆ.

ಇದನ್ನೂ ಓದಿ: Virat Kohli IPL 2021 RCB Team Player: ಆರ್​ಸಿಬಿ ರನ್ ಮಷಿನ್ ವಿರಾಟ್​ ಕೊಹ್ಲಿ ಈ ಬಾರಿಯಾದರೂ ತಂಡವನ್ನು ಚಾಂಪಿಯನ್ ಮಾಡ್ತಾರಾ?

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್