Indira Nagar Ka Gunda: ದ್ರಾವಿಡ್​​ ಬಳಿಕ ನಾನೇ ಇಂದಿರಾ ನಗರದ ಗೂಂಡಾ ಎನ್ನುತ್ತಿದ್ದಾರೆ ದೀಪಿಕಾ ಪಡುಕೋಣೆ!

Rajesh Duggumane

Updated on: Apr 10, 2021 | 5:36 PM

Indira Nagar Ka Gunda: ರಾಹುಲ್​ ದ್ರಾವಿಡ್​ ಜಾಹೀರಾತು ವಿಡಿಯೋ ಸಾಕಷ್ಟು ವೈರಲ್​ ಆಗಿತ್ತು. ಈ ವಿಡಿಯೋವನ್ನು ನೋಡಿ ಅನೇಕರು ನಗೆ ಚಟಾಕಿ ಹಾರಿಸಿದ್ದರು.

Indira Nagar Ka Gunda: ದ್ರಾವಿಡ್​​ ಬಳಿಕ ನಾನೇ ಇಂದಿರಾ ನಗರದ ಗೂಂಡಾ ಎನ್ನುತ್ತಿದ್ದಾರೆ ದೀಪಿಕಾ ಪಡುಕೋಣೆ!
ರಾಹುಲ್​-ದೀಪಿಕಾ

ಶುಕ್ರವಾರದಿಂದ ಎಲ್ಲೆಲ್ಲೂ ಒಂದೇ ಚರ್ಚೆ. ಅದು ರಾಹುಲ್​ ದ್ರಾವಿಡ್​ ಅವರ ವಿಡಿಯೋ. ಜಾಹೀರಾತಿಗಾಗಿ ಅವರು ಭಿನ್ನ ಅವತಾರ ತಾಳಿದ್ದು ಎಲ್ಲರಿಗೂ ಇಷ್ಟವಾಗಿತ್ತು. ಅಷ್ಟೇ ಅಲ್ಲ, ಈ ಆ್ಯಡ್​ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು. ಈಗ ದೀಪಿಕಾ ಪಡುಕೋಣೆ ಕೂಡ ದ್ರಾವಿಡ್​ ನಡೆದ ಹಾದಿಯನ್ನೇ ಅನುಸರಿಸಿದ್ದಾರೆ! ಕ್ರೆಡಿಟ್​ ಕಾರ್ಡ್​ ಬಿಲ್​ ಪೇ ಮಾಡುವ ಕ್ರೆಡ್​ ಕಂಪೆನಿ ಕಳೆದ ಐಪಿಎಲ್​ ಸೀಸನ್​ನಲ್ಲಿ ಸಾಕಷ್ಟು ಆಸಕ್ತಿದಾಯಕ ಜಾಹೀರಾತುಗಳನ್ನು ಪರಿಚಯಿಸಿತ್ತು. ಅದೇ ರೀತಿ, ಈ ಬಾರಿಯ ಐಪಿಎಲ್​ ಸೀಸನ್​ಗೂ ಮೊದಲು ವಿಶೇಷ ಜಾಹೀರಾತಿನೊಂದಿಗೆ ಕ್ರೆಡ್​ ಬಂದಿದೆ. ಜಾಹೀರಾತಿನಲ್ಲಿ ಕಾಣಿಸುವಂತೆ, ದ್ರಾವಿಡ್​ ಟ್ರಾಫಿಕ್​ನಲ್ಲಿ ಸಿಲುಕಿರುತ್ತಾರೆ. ಅಷ್ಟೇ ಅಲ್ಲ, ಒತ್ತಡಕ್ಕೆ ಒಳಗಾಗಿ ಅಕ್ಕ ಪಕ್ಕದಲ್ಲಿ ನಿಂತಿರುವ ಕಾರು ಚಾಲಕರ ಮೇಲೆ ಸಿಟ್ಟಿಗೆ ಒಳಗಾಗಿ, ಪಕ್ಕದಲ್ಲಿ ನಿಂತಿರುವ ಕಾರಿನ ಕನ್ನಡಿ ಒಡೆದು ಹಾಕುತ್ತಾರೆ. ಕೊನೆಯಲ್ಲಿ ನಾನು ಇಂದಿರಾ ನಗರದ ಗೂಂಡಾ ಎಂದು ಉದ್ಘರಿಸಿದ್ದಾರೆ.

ಈ ವಿಡಿಯೋ ಸಾಕಷ್ಟು ವೈರಲ್​ ಆಗಿತ್ತು. ಈ ವಿಡಿಯೋವನ್ನು ನೋಡಿ ಅನೇಕರು ನಗೆ ಚಟಾಕಿ ಹಾರಿಸಿದ್ದರು. ಇದಕ್ಕೆ ದೀಪಿಕಾ ಪಡುಕೋಣೆ ಕೂಡ ಹೊರತಾಗಿಲ್ಲ. ಚಿಕ್ಕ ವಯಸ್ಸಿನ ಫೋಟೋ ಒಂದನ್ನು ಪೋಸ್ಟ್ ಮಾಡಿರುವ ದೀಪಿಕಾ, ಇಂದಿರಾ ನಗರದ ಗೂಂಡಾ ನಾನು ಎಂದು ಕ್ಯಾಪ್ಶನ್​ ನೀಡಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್​ನಿಂದ ಬೇಸತ್ತ ರಾಹುಲ್​ ದ್ರಾವಿಡ್​; ಬ್ಯಾಟ್​ನಿಂದ ಎದುರು ಬದಿ ಕಾರಿನ ಗಾಜು ಪುಡಿಪುಡಿ; ವಿಡಿಯೋ ವೈರಲ್​

Rahul Dravid: ರಾಹುಲ್​ ದ್ರಾವಿಡ್​ಗೆ ಚಿತ್ರರಂಗದಿಂದ ಬಂತು ಬೇಡಿಕೆ! ಒಂದೇ ದಿನದಲ್ಲಿ ಇದೆಂಥಾ ಮ್ಯಾಜಿಕ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada