AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾಭಾರತದ ಇಂದ್ರ ಪಾತ್ರಧಾರಿ ಸತೀಶ್ ಕೌಲ್ ಕೊರೊನಾಕ್ಕೆ ಬಲಿ

ಸಿನಿಮಾಗಳಲ್ಲಿ ಯಾವುದೇ ಪಾತ್ರ ಕೊಟ್ಟರೂ ನಟಿಸಲು ಈಗಲೂ ನಾನು ಸಾಧ್ಯವಿದ್ದೇನೆ ಎಂದು ಅವರು ವಿನಂತಿಸಿದ್ದರು. ಆದರೆ, ಯಾರಾದರೂ ಇದೊಂದು ಪಾತ್ರ ಮಾಡಿ ಎಂದು ಕೇಳಿಕೊಂಡರೆ ನಟಿಸಲು ಇಂದು ಅವರೇ ಇಲ್ಲ.

ಮಹಾಭಾರತದ ಇಂದ್ರ ಪಾತ್ರಧಾರಿ ಸತೀಶ್ ಕೌಲ್ ಕೊರೊನಾಕ್ಕೆ ಬಲಿ
ಸತೀಶ್ ಕೌಲ್
guruganesh bhat
| Edited By: |

Updated on: Apr 10, 2021 | 7:00 PM

Share

ಮುಂಬೈ: ಒಂದು ತಲೆಮಾರಿನ ಜನಪ್ರಿಯ ಧಾರಾವಾಹಿ, 1988ರ ಮಹಾಭಾರತದಲ್ಲಿ ಇಂದ್ರನ ಪಾತ್ರ ನಿರ್ವಹಿಸಿದ್ದ ಕಲಾವಿದ ಸತೀಶ್ ಕೌಲ್ ಕೊರೊನಾಕ್ಕೆ ಸಂಬಂಧಿಸಿದ ರೋಗ ಲಕ್ಷಣಗಳಿಂದ ಮೃತಪಟ್ಟಿದ್ದಾರೆ. 73 ವರ್ಷದ ಅವರು, ಲುಧಿಯಾನಾದಲ್ಲಿ ತಮ್ಮ ಅಂತಿಮ ಉಸಿರು ಬಿಟ್ಟಿದ್ದಾರೆ. ಈವರೆಗೆ ಪಂಜಾಬಿ ಮತ್ತು ಹಿಂದಿ ಭಾಷೆಗಳ ಒಟ್ಟು 300 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಸತೀಶ್ ಕೌಲ್ ನಟಿಸಿದ್ದರು.

ಕಳೆದ ವರ್ಷ ಲಾಕ್​ಡೌನ್ ಅವಧಿಯಲ್ಲಿ ಅವರು ಅಳುತ್ತಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ಆರ್ಥಿಕ ಹಿಂಜರಿತದಿಂದ ದಿನದೂಡುವುದೂ ಕಷ್ಟವಾಗುತ್ತಿದೆ ಎಂದು ಕಲಾವಿದ ಸತೀಶ್ ಕೌಲ್ ವಿಡಿಯೋದಲ್ಲಿ ತಮ್ಮ ಕಷ್ಟ ತೋಡಿಕೊಂಡಿದ್ದರು. ಆ ವಿಡಿಯೋ ಭಾರತೀಯ ಚಲನಚಿತ್ರ ಮತ್ತು ಕಿರುತೆರೆ ವಲಯದಲ್ಲಿ ಸತೀಶ್ ಕೌಲ್ ಬಗ್ಗೆ ಅನುಕಂಪ ಹುಟ್ಟುಹಾಕಿತ್ತು. ಅಲ್ಲದೇ ಲುಧಿಯಾನಾದ ವಿವೇಕಾನಂದ ವೃದ್ಧಾಶ್ರಮದಲ್ಲಿ ಅವರು ತಮ್ಮ ಇತ್ತೀಚಿನ ದಿನಗಳನ್ನು ಕಳೆಯುತ್ತಿದ್ದರು. ಆಝಾದಿ-ದಿ ಪ್ರೀಡಮ್, ಫಟೋಲಾ, ಧೀ ರಾಣಿ, ಗುಡ್ಡೋ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದರು.

ಕಲಾವಿದ ಸತೀಶ್ ಕೌಲ್ ಅವರ ಸಾವನ್ನು ನಿರ್ಮಾಪಕಿ ಮತ್ತು ನಟಿ ಪ್ರೀತಿ ಸಪ್ರು ದೃಢಪಡಿಸಿದ್ದಾರೆ. ಸತೀಶ್ ಕೌಲ್ ಅವರು ಕಳೆದ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಅವರನ್ನು ನೊಡಿಕೊಳ್ಳುತ್ತಿದ್ದ ಸಹಾಯಕನಿಗೆ ಕೊರೊನಾ ಟೆಸ್ಟ್ ಮಾಡಿಸಿದಾಗ ಸೋಂಕು ಇರುವುದು ಪತ್ತೆಯಾಯಿತು. ತದನಂತರ ಸತೀಶ್ ಕೌಲ್ ಅವರಿಗೂ ಕೊರೊನಾ ಟೆಸ್ಟ್ ಮಾಡಲಾಯಿತು. ಆಗ ಸತೀಶ್ ಕೌಲ್ ಅವರಿಗೂ ಕೊರೊನಾ ಬಂದಿದ್ದು ತಿಳಿಯಿತು. ಆದರೆ ಅವರು ಕೊನೆ ಘಳಿಗೆಯಲ್ಲಿ ನನ್ನ ಬಳಿ ಅವರ ಜತೆ ಇರಲು ಸಾಧ್ಯವಾಗಲಿಲ್ಲ ಎಂದು ನಟಿ ಪ್ರೀತಿ ಸಪ್ರು ವಿಷಾದ ವ್ಯಕ್ತಪಡಿಸಿದರು.

ಹಿಂದೊಮ್ಮೆ ಸುದ್ದಿಸಂಸ್ಥೆ ಪಿಟಿಐಗೆ ನೀಡಿದ್ದ ಸಂದರ್ಶನದಲ್ಲಿ ಸತೀಶ್ ಕೌಲ್, ಹೇಗೆ ಇಂದಿನ ಚಿತ್ರರಂಗ ಮತ್ತು ಜನರು ತಮ್ಮನ್ನು ಮರೆತಿದ್ದಾರೆ ಎಂದು ಬಿಡಿಸಿ ಬಿಡಿಸಿ ವಿವರಿಸಿದ್ದರು. ಈಗಲೂ ತಾವು ಒಂದು ಪಾತ್ರದ ನಿರೀಕ್ಷೆಯಲ್ಲಿದ್ದೇನೆ. ಈಗಲೂ ನಟನೆಯ ಹುಚ್ಚು ನನ್ನಲ್ಲಿ ಜೀವಂತವಾಗಿದೆ. ಸಿನಿಮಾಗಳಲ್ಲಿ ಯಾವುದೇ ಪಾತ್ರ ಕೊಟ್ಟರೂ ನಟಿಸಲು ಈಗಲೂ ನಾನು ಸಾಧ್ಯವಿದ್ದೇನೆ ಎಂದು ವಿನಂತಿಸಿದ್ದರು. ಆದರೆ, ಯಾರಾದರೂ ಇದೊಂದು ಪಾತ್ರ ಮಾಡಿ ಎಂದು ಕೇಳಿಕೊಂಡರೆ ನಟಿಸಲು ಇಂದು ಅವರೇ ಇಲ್ಲ.

ಇದನ್ನೂ ಓದಿ: ಚುನಾವಣಾ ಪ್ರಚಾರದ ವೇಳೆ ಕೊವಿಡ್​ ನಿಯಮ ಪಾಲಿಸದಿದ್ದರೆ ಕ್ರಮ: ರಾಜಕಾರಣಿಗಳಿಗೆ ಚುನಾವಣಾ ಆಯೋಗ ಎಚ್ಚರಿಕೆ

ನಟ ಅಲ್ಲು ಅರ್ಜುನ್ ಉಗ್ರ ಪುಷ್ಪಾ ರಾಜ್ ಪಾತ್ರ ಎಲ್ಲರ ಮನಸ್ಸು ಕದ್ದಿದೆ

(1988 Mahabharata serial Lord Indra actor Sathish Koul passes away at 73)