ಚುನಾವಣಾ ಪ್ರಚಾರದ ವೇಳೆ ಕೊವಿಡ್​ ನಿಯಮ ಪಾಲಿಸದಿದ್ದರೆ ಕ್ರಮ: ರಾಜಕಾರಣಿಗಳಿಗೆ ಚುನಾವಣಾ ಆಯೋಗ ಎಚ್ಚರಿಕೆ

ಕೊವಿಡ್ ನಿಯಮ ಪಾಲನೆ ಕುರಿತು ಎಲ್ಲಾ ಪಕ್ಷಗಳಿಗೆ ಕೇಂದ್ರ ಚುನಾವಣಾ ಆಯೋಗ ಸೂಚನೆ ನೀಡಿದ್ದು, ಜನಪ್ರತಿನಿಧಿಗಳು ಕಡ್ಡಾಯವಾಗಿ ಕೊವಿಡ್ ನಿಯಮ ಪಾಲಿಸಬೇಕು. ಸಭೆ, ಸಮಾರಂಭ, ಮೆರವಣಿಗೆಗಳಲ್ಲಿ ಕೊರೊನಾ ನಿಯಮಾವಳಿಗಳು ಪಾಲನೆಯಾಗುವಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದೆ.

  • Publish Date - 6:55 am, Sat, 10 April 21
ಚುನಾವಣಾ ಪ್ರಚಾರದ ವೇಳೆ ಕೊವಿಡ್​ ನಿಯಮ ಪಾಲಿಸದಿದ್ದರೆ ಕ್ರಮ: ರಾಜಕಾರಣಿಗಳಿಗೆ ಚುನಾವಣಾ ಆಯೋಗ ಎಚ್ಚರಿಕೆ
ಸಂಗ್ರಹ ಚಿತ್ರ


ದೆಹಲಿ: ಭಾರತದಾದ್ಯಂತ ಕೊರೊನಾ ಸೋಂಕಿನ ಎರಡನೇ ಅಲೆ ನಿರೀಕ್ಷೆಗಿಂತಲೂ ವೇಗವಾಗಿ ಹಬ್ಬುತ್ತಿದ್ದು, ಎಲ್ಲೆಡೆ ಆತಂಕ ಉಲ್ಬಣಗೊಳ್ಳಲು ಕಾರಣವಾಗಿದೆ. ಈ ನಡುವೆ, ದೇಶದ ವಿವಿಧ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ, ಉಪಚುನಾವಣೆಗಳು ನಡೆಯುತ್ತಿದ್ದು ನೀತಿ ನಿಯಮ ರೂಪಿಸುವ ಜನಪ್ರತಿನಿಧಿಗಳು ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತಿದ್ದಾರೆ. ಇದನ್ನು ಮನಗಂಡ ಚುನಾವಣಾ ಆಯೋಗ ರಾಜಕೀಯ ಮುಖಂಡರಿಗೆ ಖಾರವಾದ ಸಂದೇಶ ರವಾನಿಸಿದ್ದು, ಸಾರ್ವಜನಿಕ ಸಭೆ, ಱಲಿಗಳಲ್ಲಿ ಕೊವಿಡ್ ನಿಯಮ ಪಾಲಿಸಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಕೊವಿಡ್ ನಿಯಮ ಪಾಲನೆ ಕುರಿತು ಎಲ್ಲಾ ಪಕ್ಷಗಳಿಗೆ ಕೇಂದ್ರ ಚುನಾವಣಾ ಆಯೋಗ ಸೂಚನೆ ನೀಡಿದ್ದು, ಜನಪ್ರತಿನಿಧಿಗಳು ಕಡ್ಡಾಯವಾಗಿ ಕೊವಿಡ್ ನಿಯಮ ಪಾಲಿಸಬೇಕು. ಸಭೆ, ಸಮಾರಂಭ, ಮೆರವಣಿಗೆಗಳಲ್ಲಿ ಕೊರೊನಾ ನಿಯಮಾವಳಿಗಳು ಪಾಲನೆಯಾಗುವಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದೆ. ಈ ಮೂಲಕ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು, ಸ್ಟಾರ್ ಪ್ರಚಾರಕರು ಹಾಗೂ ಮುಖಂಡರುಗಳಿಗೆ ಚುನಾವಣಾ ಆಯೋಗ ಬಿಸಿ ಮುಟ್ಟಿಸಿದೆ.

ಕರ್ನಾಟಕದಲ್ಲಿ ಇಂದಿನಿಂದ ಕೊರೊನಾ ನೈಟ್ ಕರ್ಫ್ಯೂ
ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಶತಾಯುಗತಾಯ ಎರಡನೇ ಅಲೆಯ ಹೊಡೆತಕ್ಕೆ ಸಿಲುಕಬಾರದೆಂದು ಪ್ರಯತ್ನಿಸುತ್ತಿರುವ ರಾಜ್ಯ ಸರ್ಕಾರ ಇಂದಿನಿಂದ ಕೊರೊನಾ ನೈಟ್ ಕರ್ಫ್ಯೂ ಜಾರಿಗೊಳಿಸುತ್ತಿದೆ. ರಾಜ್ಯದ ರಾಜ್ಯದ 7 ಜಿಲ್ಲೆಗಳ 8 ನಗರಗಳಲ್ಲಿ ಕೊರೊನಾ ನೈಟ್ ಕರ್ಫ್ಯೂ ಪಾಲಿಸಲು ಆದೇಶ ಹೊರಡಿಸಲಾಗಿದ್ದು, ಇಂದಿನಿಂದ ಏಪ್ರಿಲ್ 20ರವರೆಗೆ ರಾತ್ರಿ 10ರಿಂದ ಮುಂಜಾನೆ 5ರ ತನಕ ಕೊರೊನಾ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಬೆಂಗಳೂರು ನಗರ, ಮೈಸೂರು ನಗರ, ಮಂಗಳೂರು ನಗರ, ಉಡುಪಿ ನಗರ, ಮಣಿಪಾಲ, ಕಲಬುರಗಿ ನಗರ, ಬೀದರ್ ನಗರ, ತುಮಕೂರು ನಗರ ಸೇರಿ ಒಟ್ಟು 8 ನಗರಗಳಲ್ಲಿ ಕೊರೊನಾ ಕರ್ಫ್ಯೂ ಪಾಲಿಸುವಂತೆ ಆದೇಶ ಹೊರಡಿಸಲಾಗಿದೆ.

ಮಹಾರಾಷ್ಟ್ರ ರಾಜ್ಯದಲ್ಲಿ ವೀಕೆಂಡ್​ ಲಾಕ್​ಡೌನ್​​
ಮುಂಬೈ: ದೇಶದೆಲ್ಲೆಡೆ ಏರುಗತಿಯಲ್ಲಿರುವ ಕೊರೊನಾ ಆತಂಕಕ್ಕೆ ಇದೀಗ ಮಹಾರಾಷ್ಟ್ರ ರಾಜ್ಯ ವೀಕೆಂಡ್ ಲಾಕ್​ಡೌನ್ ಮೊರೆ ಹೋಗಿದೆ. ಮಹಾರಾಷ್ಟ್ರದಲ್ಲಿ ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ ವೀಕೆಂಡ್ ಲಾಕ್​ಡೌನ್ ಜಾರಿಯಲ್ಲಿರಲಿದೆ ಎಂದು ಅಲ್ಲಿನ ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:
ಕೊರೊನಾ ಬಗ್ಗೆ ಆದೇಶ ಹಿಂಪಡೆದ ಮೈಸೂರು ಡಿಸಿ ರೋಹಿಣಿ ಸಿಂಧೂರಿ 

ಕೊರೊನಾ ಪ್ರಕರಣ ಹೆಚ್ಚಾಗುತ್ತಿದೆ, ಮುಂದಿನ 10 ದಿನ ತುಂಬಾ ಕಠಿಣವಾಗಿರುತ್ತದೆ: ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ

(Election commission warns politicians to follow covid 19 guidelines strictly in Election campaigns)