ಕೊರೊನಾ ಪ್ರಕರಣ ಹೆಚ್ಚಾಗುತ್ತಿದೆ, ಮುಂದಿನ 10 ದಿನ ತುಂಬಾ ಕಠಿಣವಾಗಿರುತ್ತದೆ: ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ
ನೈಟ್ ಕರ್ಫ್ಯೂ ಚರ್ಚೆ ವಿಚಾರಕ್ಕೆ ಸಂಬಂಧಿಸಿ ಕೊವಿಡ್ ಏರಿಕೆ ಪ್ರಮಾಣ ಆಧರಿಸಿ ರಾಜ್ಯ ಹಾಗೂ ನಗರ ಪಾಲಿಕೆ ಕೆಲಸ ಮಾಡುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.
ಬೆಂಗಳೂರು: ನಗರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಸರಕಾರ ಮತ್ತು ಮಹಾನಗರ ಪಾಲಿಕೆ ಕೊರೊನಾ ನಿಯಂತ್ರಣಕ್ಕೆ ಕೆಲಸ ಮಾಡುತ್ತಿದೆ ಎಂದು ಬಿಎಂಪಿ ಆಯುಕ್ತ ಗೌರವ್ ಗುಪ್ತಾ ಮಾಹಿತಿ ಹಂಚಿಕೊಂಡಿದ್ದಾರೆ. ಖಾಸಗಿ ಬೆಡ್‌ಗಳ ವ್ಯವಸ್ಥೆ ಒಂದೇ ಸೂರಿನಡಿ ಬರಲಿದೆ. ಕೊರೊನಾ ಕಾರಣ ಮುಂದಿನ 10 ದಿನಗಳ ಕಾಲ ತುಂಬಾ ಕಠಿಣವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ನೈಟ್ ಕರ್ಫ್ಯೂ ಚರ್ಚೆ ವಿಚಾರಕ್ಕೆ ಸಂಬಂಧಿಸಿ ಕೊವಿಡ್ ಏರಿಕೆ ಪ್ರಮಾಣ ಆಧರಿಸಿ ರಾಜ್ಯ ಹಾಗೂ ನಗರ ಪಾಲಿಕೆ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. ಬಿಬಿಎಂಪಿ ಪ್ರತಿ ವಲಯದಲ್ಲಿ ಎರಡರಿಂದ ಮೂರು ಕೊವಿಡ್ ಸೆಂಟರ್ ತೆರೆಯಲು ತೀರ್ಮಾನ ಕೈಗೊಳ್ಳಲಾಗಿದೆ. ಹೊಟೆಲ್ಗಳಲ್ಲೂ ಕೊವಿಡ್ ಕೇರ್ ಸೆಂಟರ್ ತೆರೆಯಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಾತನಾಡಿದ್ದಾರೆ.
ಏಪ್ರಿಲ್ 27ರಂದು ನಡೆಯಲಿರುವ ಬೆಂಗಳೂರು ಐತಿಹಾಸಿಕ ಕರಗ ಮಹೋತ್ಸವ ಆಚರಣೆ ಕುರಿತಾಗಿ ಏಪ್ರಿಲ್ 05ರಂದು ಬಿಬಿಎಂಪಿ ಆಯುಕ್ತರ ನೇತೃತ್ವದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿದೆ. ಪೊಲೀಸ್ ಇಲಾಖೆ ಅಧಿಕಾರಿ, ಜಿಲ್ಲಾಧಿಕಾರಿ ಹಾಗೂ ಉತ್ಸವ ಸಮಿತಿಯ ಸದಸ್ಯರ ಉಪಸ್ಥಿತಿಯಲ್ಲಿ ಸಭೆ ನಡೆದಿದೆ.
ಕರಗ ಮಹೋತ್ಸವ ಸಂಬಂಧಿಸಿದಂತೆ, ಕರಗ ಮಹೋತ್ಸವ ಹೇಗೆ ನಡೆಯಬೇಕು. ಅಥವಾ ಮಹೋತ್ಸವ ಬೇಡವೇ ಎಂಬುವುದರ ಕುರಿತಾಗಿ ಸಭೆ ಕೈಗೊಳ್ಳಲಾಗಿದೆ. ಈ ಕುರಿತಾಗಿ ಮಾತನಾಡಿದ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ಐತಿಹಾಸಿಕ ಕರಗ ಮಹೋತ್ಸವ ನಡೆಸಲು ಮೊದಲು ಉತ್ಸವ ಸಮಿತಿ ರಚನೆ ಮಾಡಲಾಗುತ್ತದೆ. ಕೊವಿಡ್ ಹಿನ್ನೆಲೆ ಸರ್ಕಾರದ ಆದೇಶ ಪಾಲನೆ ಮಾಡಬೇಕು. ಸರ್ಕಾರದ ಆದೇಶ ಏಪ್ರಿಲ್ 20ರವರೆಗೂ ಜಾರಿಯಲ್ಲಿರುತ್ತದೆ. ಮುಂದಿನ ದಿನಗಳಲ್ಲಿ ಸರ್ಕಾರದ ಆದೇಶ ನೋಡುತ್ತೇವೆ. ಸದ್ಯಕ್ಕೆ ಕರಗ ಮಹೋತ್ಸವಕ್ಕೆ ನಿರ್ಬಂಧ ಅನಿವಾರ್ಯವಾಗಿದೆ. ಈಗಿರುವ ಆದೇಶದ ಪ್ರಕಾರ ಮೆರವಣಿಗೆಗೆ ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.
ಕಳೆದ ವರ್ಷದಂತೆ.. ಈ ಬಾರಿಯೂ ಬೆಂಗಳೂರು ಕರಗದ ಸಂಭ್ರಮಕ್ಕೆ ಕೊರೊನಾ ಬ್ರೇಕ್