ಕಳೆದ ವರ್ಷದಂತೆ.. ಈ ಬಾರಿಯೂ ಬೆಂಗಳೂರು ಕರಗದ ಸಂಭ್ರಮಕ್ಕೆ ಕೊರೊನಾ ಬ್ರೇಕ್
ಐತಿಹಾಸಿಕ ಕರಗ ಮಹೋತ್ಸವ ಆಚರಣೆ ಕುರಿತಾಗಿ ಇಂದು(ಏಪ್ರಿಲ್ 05) ಬಿಬಿಎಂಪಿ ಆಯುಕ್ತರ ನೇತೃತ್ವದಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಲಾಗಿದೆ.
ಬೆಂಗಳೂರು: ಏಪ್ರಿಲ್ 27ರಂದು ನಡೆಯಲಿರುವ ಬೆಂಗಳೂರು ಐತಿಹಾಸಿಕ ಕರಗ ಮಹೋತ್ಸವ ಆಚರಣೆ ಕುರಿತಾಗಿ ಇಂದು(ಏಪ್ರಿಲ್ 05) ಬಿಬಿಎಂಪಿ ಆಯುಕ್ತರ ನೇತೃತ್ವದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಪೊಲೀಸ್ ಇಲಾಖೆ ಅಧಿಕಾರಿ, ಜಿಲ್ಲಾಧಿಕಾರಿ ಹಾಗೂ ಉತ್ಸವ ಸಮಿತಿಯ ಸದಸ್ಯರು ಉಪಸ್ಥಿತಿಯಲ್ಲಿದ್ದರು.
ಕರಗ ಮಹೋತ್ಸವ ಸಂಬಂಧಿಸಿದಂತೆ, ಕರಗ ಮಹೋತ್ಸವ ಹೇಗೆ ನಡೆಯಬೇಕು. ಅಥವಾ ಮಹೋತ್ಸವ ಬೇಡವೇ ಎಂಬುವುದರ ಕುರಿತಾಗಿ ಸಭೆ ಕೈಗೊಳ್ಳಲಾಯಿತು. ಈ ಕುರಿತಾಗಿ ಮಾತನಾಡಿದ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ಐತಿಹಾಸಿಕ ಕರಗ ಮಹೋತ್ಸವ ನಡೆಸಲು ಮೊದಲು ಉತ್ಸವ ಸಮಿತಿ ರಚನೆ ಮಾಡಲಾಗುತ್ತದೆ. ಕೊವಿಡ್ ಹಿನ್ನೆಲೆ ಸರ್ಕಾರದ ಆದೇಶ ಪಾಲನೆ ಮಾಡಬೇಕು. ಸರ್ಕಾರದ ಆದೇಶ ಏಪ್ರಿಲ್ 20ರವರೆಗೂ ಜಾರಿಯಲ್ಲಿರುತ್ತದೆ. ಮುಂದಿನ ದಿನಗಳಲ್ಲಿ ಸರ್ಕಾರದ ಆದೇಶ ನೋಡುತ್ತೇವೆ. ಸದ್ಯಕ್ಕೆ ಕರಗ ಮಹೋತ್ಸವಕ್ಕೆ ನಿರ್ಬಂಧ ಅನಿವಾರ್ಯವಾಗಿದೆ. ಈಗಿರುವ ಆದೇಶದ ಪ್ರಕಾರ ಮೆರವಣಿಗೆಗೆ ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.
ಈ ಕುರಿತಂತೆ ಜಿಲ್ಲಾಧಿಕಾರಿ ಮಂಜುನಾಥ್ ಹೇಳಿಕೆ ನೀಡಿ, ಕರಗ ಮಹೋತ್ಸವ ನಡೆಸುವ ಸಮಿತಿಯ ಕಾಲಾವಧಿ ಮುಕ್ತಾಯಗೊಂಡಿದೆ. ಈಗ ಹೊಸದಾಗಿ ಆಡಳಿತಾಧಿಕಾರಿ ನೇಮಕ ಮಾಡ್ತೇವೆ. ಉತ್ಸವ ಸಮಿತಿ ರಚನೆ ಆಗುತ್ತದೆ ನಂತರ, ಹೇಗೆ ಕಾರ್ಯಕ್ರಮ ನಡೆಸಬೇಕು ಎಂದು ತೀರ್ಮಾನ ಮಾಡುತ್ತೇವೆ. ಈಗಿನ ಆದೇಶ ಮುಂದುವರೆದರೆ ಮಹೋತ್ಸವದಲ್ಲಿ ಸಾರ್ವಜನಿಕರು ಸೇರುವಂತಿಲ್ಲ. ಕೇವಲ ಪೂಜೆಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ 2ನೇ ಅಲೆ: ಸಾರ್ವಜನಿಕ ಸ್ಥಳಗಳಲ್ಲಿ ಜಾತ್ರೆ, ಧಾರ್ಮಿಕ ಉತ್ಸವಕ್ಕೆ ನಿರ್ಬಂಧ
ಮೇಲುಕೋಟೆಯಲ್ಲಿ ಸಂಭ್ರಮದ ವೈರಮುಡಿ ಉತ್ಸವ: ವಜ್ರಖಚಿತ ಕಿರೀಟದೊಂದಿಗೆ ಕಂಗೊಳಿಸಿದ ಚೆಲುವನಾರಾಯಣಸ್ವಾಮಿ
(BBMP meeting has been held Bengaluru Karaga festival on April 05)