ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಎದುರಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜಾತ್ರೆ, ಧಾರ್ಮಿಕ ಉತ್ಸವಕ್ಕೆ ನಿರ್ಬಂಧ ಹೇರಲಾಗಿದೆ. ಉತ್ಸವ ಹಾಗೂ ಜಾತ್ರೆಗಳಿಗೆ ನಿರ್ಬಂಧ ವಿಧಿಸಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದಿದೆ.
ಉಚ್ಚಂಗಮ್ಮನ ದರ್ಶನಕ್ಕೆ ನಿರ್ಬಂಧ
ಇತ್ತ, ಕೊರೊನಾ ಮಹಾಮಾರಿಯ ಎರಡನೇ ಅಲೆ ಹಿನ್ನೆಲೆಯಲ್ಲಿ ಮಾರ್ಚ್ 28ರಂದು ಉಚ್ಚಂಗಮ್ಮನ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಗುಡ್ಡದ ಮೇಲಿರುವ ಉಚ್ಚಂಗಮ್ಮ ದೇವಸ್ಥಾನದಲ್ಲಿ ಹೋಳಿ ಹುಣ್ಣಿಮೆ ಪ್ರಯುಕ್ತ ಭಕ್ತರು ಹೆಚ್ಚು ಸೇರುವ ಹಿನ್ನೆಲೆಯಲ್ಲಿ ನಿರ್ಬಂಧ ವಿಧಿಸಲಾಗಿದೆ. ಉಚ್ಚಂಗಮ್ಮ ದೇವಿಯ ದರ್ಶನಕ್ಕೆ ನಿರ್ಬಂಧ ವಿಧಿಸಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಪ್ರಕಾಶ್ ರಾವ್ ಆದೇಶ ನೀಡಿದ್ದಾರೆ.
ಉಚ್ಚಂಗಮ್ಮನವರ ದೇವಸ್ಥಾನ
ನಾಳೆ ನಡೆಯಬೇಕಿದ್ದ ಕುರುಗೋಡು ದೊಡ್ಡಬಸವೇಶ್ವರ ರಥೋತ್ಸವ ರದ್ದು
ನಾಳೆ ನಡೆಯಬೇಕಿದ್ದ ಕುರುಗೋಡು ದೊಡ್ಡಬಸವೇಶ್ವರ ರಥೋತ್ಸವ ರದ್ದುಗೊಳಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದ ದೊಡ್ಡಬಸವೇಶ್ವರ ರಥೋತ್ಸವವನ್ನು ರದ್ದುಪಡಿಸಲಾಗಿದೆ. ರಥೋತ್ಸವದ ರದ್ಧತಿ ಜೊತೆಗೆ ಭಕ್ತಾದಿಗಳ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ಧಾರ್ಮಿಕ ಧತ್ತಿ ಇಲಾಖೆಯ ಸಹಾಯಕ ಆಯುಕ್ತ ಪ್ರಕಾಶ್ ರಾವ್ ಈ ಕುರಿತು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಮೇಶ್ ಸುದ್ದಿಗೋಷ್ಠಿ ಬೆನ್ನಲ್ಲೇ ಬಂತು ಫೋನ್ ಕರೆ; ಕಾಲ್ ಬಳಿಕ ಕಾರ್ಯಕ್ರಮದಿಂದ ಏಕಾಏಕಿ ತೆರಳಿದ ಡಿಕೆಶಿ