Viral News: ಕೆಲಸ ಬಿಟ್ಟು ಗೃಹಿಣಿಯಾಗು ಎಂದ ಪತಿಗೆ ವಿಶೇಷ ಬೇಡಿಕೆಯಿಟ್ಟ ಪತ್ನಿ

‘ನನ್ನ ಪತಿಗೆ ನಾನು ಗೃಹಿಣಿಯಾಗಬೇಕಾದರೆ ಅವರ ಕಂಪನಿಯ ಅರ್ಧದಷ್ಟು ನನಗೆ ಕೊಡಬೇಕು ಎಂದು ಕೇಳಿದೆ’ ಎಂದು ಮಹಿಳೆ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಅಂತಿಮವಾಗಿ ಮಹಿಳೆಯ ಪತಿ ಆಕೆಯ ಬೇಡಿಕೆಯನ್ನು ಒಪ್ಪಿಕೊಂಡು, ಕಂಪನಿಯ 49 ಪ್ರತಿಶತದಷ್ಟು ಪಾಲನ್ನು ಆಕೆಗೆ ನೀಡಿದ್ದಾನೆ.

Viral News: ಕೆಲಸ ಬಿಟ್ಟು ಗೃಹಿಣಿಯಾಗು ಎಂದ ಪತಿಗೆ ವಿಶೇಷ ಬೇಡಿಕೆಯಿಟ್ಟ ಪತ್ನಿ

Updated on: Jul 01, 2024 | 5:18 PM

ಮಹಿಳೆಯೊಬ್ಬರು ತಮ್ಮ ಆಸಕ್ತಿದಾಯಕ ಕಥೆಯನ್ನು ಸಾಮಾಜಿಕ ಮಾಧ್ಯಮ ವೇದಿಕೆ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ತನ್ನ ಪತಿ ಕೆಲಸ ಬಿಟ್ಟು ಗೃಹಿಣಿಯಾಗುವಂತೆ ಕೇಳಿದ್ದು, ಅದಕ್ಕಾಗಿ ಗಂಡನ ಮುಂದೆ ವಿಶಿಷ್ಟ ಷರತ್ತನ್ನು ಇಟ್ಟಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾಳೆ. ನಾನು ನನ್ನ ಕೆಲಸ ಬಿಟ್ಟು ಮನೆ ನೋಡಿಕೊಳ್ಳಬೇಕಾದರೆ ನಿನ್ನ ಕಂಪೆನಿಯ ಅರ್ಥ ಭಾಗವನ್ನು ನನ್ನ ಹೆಸರಿಗೆ ಬರೆಯುವಂತೆ ಬೇಡಿಕೆ ಇಟ್ಟಿದ್ದಾಳೆ. ಸದ್ಯ ಈಕೆಯ ಬೇಡಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಮಹಿಳೆ ತನ್ನ ಕಥೆಯನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಕೆಲಸ ಬಿಟ್ಟು ಮನೆಯಲ್ಲೇ ಇದ್ದು ಮನೆ ಮತ್ತು ಮಕ್ಕಳನ್ನು ನೋಡಿಕೊಳ್ಳುವಂತೆ ಪತಿ ಕೇಳಿದಾಗ, ತನ್ನ ಕಂಪನಿಯ ಅರ್ಧದಷ್ಟು ಹಣವನ್ನು ಕೇಳಿದೆ ಎಂದು ಮಹಿಳೆ ಹೇಳಿದ್ದಾಳೆ. ‘ನನ್ನ ಪತಿಗೆ ನಾನು ಗೃಹಿಣಿಯಾಗಬೇಕಾದರೆ ಅವರ ಕಂಪನಿಯ ಅರ್ಧದಷ್ಟು ನನಗೆ ಕೊಡಬೇಕು ಎಂದು ನನ್ನ ಪತಿಗೆ ಕೇಳಿದೆ’ ಎಂದು ಮಹಿಳೆ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಮಹಿಳೆ ತನ್ನ ಪೋಸ್ಟ್‌ನಲ್ಲಿ ತನಗೆ ಮತ್ತು ತನ್ನ ಪತಿ ಇಬ್ಬರಿಗೂ 35 ವರ್ಷ ವಯಸ್ಸು. ನಮಗೆ ಮದುವೆಯಾಗಿ 6 ವರ್ಷಗಳಾಗಿವೆ ಎಂದು ಹೇಳಿದ್ದಾಳೆ. ಸದ್ಯ ಇಬ್ಬರು ಮಕ್ಕಳಿದ್ದು, ಮಹಿಳೆ ಈಗ ಗರ್ಭಿಣಿ. ಕೆಲಸ ಬಿಡುವುದರ ಬಗ್ಗೆ ಬಗ್ಗೆ ನನಗೆ ತುಂಬಾ ಬೇಸರವಿತ್ತು, ಆದರೆ ನಮ್ಮ ಕುಟುಂಬ ಮತ್ತು ಮಕ್ಕಳಿಗಾಗಿ ಈ ನಿರ್ಧಾರಕ್ಕೆ ಬಂದೆ ಎಂದು ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ: ಮಳೆಗೆ ನಡು ರಸ್ತೆಯಲ್ಲೇ ಪ್ರತ್ಯಕ್ಷವಾದ ದೈತ್ಯ ಮೊಸಳೆ

ಮಹಿಳೆಯ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ. ಕೆಲವು ಬಳಕೆದಾರರು ಮಹಿಳೆಯ ಬೇಡಿಕೆಯನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ. ಆದರೆ ಕೆಲ ಬಳಕೆದಾರರು ದೂಷಿಸಿದ್ದಾರೆ. ಅಂತಿಮವಾಗಿ ಮಹಿಳೆಯ ಪತಿ ಆಕೆಯ ಬೇಡಿಕೆಯನ್ನು ಒಪ್ಪಿಕೊಂಡು, ಕಂಪನಿಯ 49 ಪ್ರತಿಶತದಷ್ಟು ಪಾಲನ್ನು ಆಕೆಗೆ ನೀಡಿದ್ದಾನೆ ಎಂದು ತಿಳಿದುಬಂದಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 5:17 pm, Mon, 1 July 24