Viral Video: ಸೋರುವ ರೈಲಿನಲ್ಲಿ ಕೊಡೆ ಹಿಡಿದು ಪ್ರಯಾಣ; ವಿಡಿಯೋ ವೈರಲ್
ವೈರಲ್ ವಿಡಿಯೋದಲ್ಲಿ, ಪ್ರಯಾಣಿಕರು ಛತ್ರಿ ಹಿಡಿದು ರೈಲು ಕೋಚ್‌ನಲ್ಲಿ ನಿಂತಿರುವುದನ್ನು ಕಾಣಬಹುದು. ರೈಲಿನ ಛಾವಣಿಯಿಂದ ನೀರು ಜಿನುಗುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿವೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ದೇಶದ ಹಲವೆಡೆ ಭಾರೀ ಮಳೆಯಿಂದಾಗಿ ಜನರು ಕಂಗಾಲಾಗಿ ಹೋಗಿದ್ದಾರೆ. ಈ ಮಳೆಗಾಲಕ್ಕೆ ಸಾಮಾನ್ಯವಾಗಿ ಬಸ್, ಆಟೋ, ಕಾರು, ಇನ್ನಿತರ ವಾಹನಗಳ ಮೇಲ್ಛಾವಣಿನಿಂದ ನೀರು ಸೋರುವ ಘಟನೆಗಳನ್ನು ನೀವು ಕೇಳಿರುತ್ತೀರಿ ಅಥವಾ ನಿಮ್ಮ ಅನುಭವಕ್ಕೂ ಬಂದಿರಬಹುದು. ಆದರೆ ಇದೀಗ ರೈಲಿನ ಮೇಲ್ಛಾವಣಿನಿಂದ ನೀರು ಸೋರುತ್ತಿರುವ ವೀಡಿಯೊ ಒಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ, ಪ್ರಯಾಣಿಕರು ಛತ್ರಿ ಹಿಡಿದು ರೈಲು ಕೋಚ್‌ನಲ್ಲಿ ನಿಂತಿರುವುದನ್ನು ಕಾಣಬಹುದು. ವೀಡಿಯೋದಲ್ಲಿ ಎಲ್ಲರೂ ಒಂದೇ ಸೂರಿನಡಿ ನಿಂತಿರುವುದು ಕಂಡು ಬಂದಿದೆ. ರೈಲಿನ ಛಾವಣಿಯಿಂದ ನೀರು ಜಿನುಗುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿವೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Young influencers transforming Indian Railways to Indian Reelways. pic.twitter.com/6QxcP3BK9R
— Congress Kerala (@INCKerala) June 30, 2024
ಇದನ್ನೂ ಓದಿ: ಮಳೆಗೆ ನಡು ರಸ್ತೆಯಲ್ಲೇ ಪ್ರತ್ಯಕ್ಷವಾದ ದೈತ್ಯ ಮೊಸಳೆ
ಈ ವಿಡಿಯೋವನ್ನು ಯಾವಾಗ ಮತ್ತು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ, ಈ ವಿಡಿಯೋ ಹಳೆಯದು ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. @INCKerala ಟ್ವಿಟರ್ ಖಾತೆಯಲ್ಲಿ ಜೂನ್ 30ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಕೇವಲ ಒಂದೇ ದಿನದಲ್ಲಿ 4ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ