ಸಾಮಾನ್ಯವಾಗಿ ರಸ್ತೆಯಲ್ಲಿ ಸೈಕಲ್ ಮೇಲೊ ಅಥವಾ ಬೇರೆ ಯಾವುದೆ ವಾಹನದಲ್ಲಿ ಹೋಗುವಾಗ ಏಕಾಗ್ರತೆ ಬಹಳ ಮುಖ್ಯವಾಗುತ್ತದೆ. ನಾವು ಎಷ್ಟೇ ಜಾಗೃತಿಯಿಂದ ಇದ್ದರೂ ಅಪಘಾತ ಸಂಭವಿಸುತ್ತದೆ. ಆದರೆ ವೈರಲ್ ಆದ ಈ ವಿಡಿಯೋದಲ್ಲಿ ವ್ಯಕ್ತಿಯೋರ್ವ ಸೈಕಲ್ನಲ್ಲಿ ರಸ್ತೆ ಮೇಲೆ ಹೋಗುವಾಗ, ತಲೆಯ ಮೇಲೆ ಸೂಟ್ಕೇಸ್ ಇಟ್ಟುಕೊಂಡು ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾನೆ. ಈತನ ಈ ಸಾಹಸ ಕಾರ್ಯ ನೋಡಿ ಅಕ್ಕಪಕ್ಕ ಇದ್ದ ಜನರು ಬೆರಗಾಗಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ನಾನಾ ಕಾಮೆಂಟ್ ಮಾಡುತ್ತಿದ್ದಾರೆ.
ವಿಡಿಯೋದಲ್ಲಿ ಈ ಚಮತ್ಕಾರಿಕ ದೃಶ್ಯಾವಳಿ ಕಂಡು ಬಂದಿದ್ದು ಅಮೇರಿಕದಲ್ಲಿ. ವ್ಯಕ್ತಿಯೋರ್ವ ತಲೆ ಮೇಲೆ ಸೂಟ್ಕೇಸ್ ಇಟ್ಟುಕೊಂಡು ಬ್ಯಾಲೆನ್ಸ್ ಮಾಡಿಕೊಂಡು ಸೈಕಲ್ ಓಡಿಸಿದ್ದಾನೆ. ದೃಶ್ಯಾವಳಿಯನ್ನು ನೌ ದಿಸ್ ಎಂಬ ಟ್ವಿಟರ್ ಖಾತೆದಾರರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Heavy load! This cyclist balances a suitcase on his head while traveling up Brooklyn’s 5th Avenue ? pic.twitter.com/ndXdHxmd1f
— NowThis (@nowthisnews) June 28, 2022
— Ruined (@ruinedxjosh) June 28, 2022