ಕಾರಿನಲ್ಲಿ ಮಹಿಳೆಯೊಂದಿಗೆ ಅಸ್ವಾಭಾವಿಕವಾಗಿ ನಡೆದುಕೊಳ್ಳುತ್ತಾ ಟ್ರಕ್​ಗೆ ಡಿಕ್ಕಿ ಹೊಡೆದ ಭೂಪ!

ಮಹಿಳೆಯಿಂದ ಮೌಖಿಕ ಸಂಭೋಗವನ್ನು ಸ್ವೀಕರಿಸುತ್ತಿದ್ದಾಗ ಫ್ಲೋರಿಡಾದ ವ್ಯಕ್ತಿ ಗುರುವಾರ ತನ್ನ ಕಾರನ್ನು ಫೆಡೆಕ್ಸ್ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದು, ಟ್ರಕ್​ನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.

ಕಾರಿನಲ್ಲಿ ಮಹಿಳೆಯೊಂದಿಗೆ ಅಸ್ವಾಭಾವಿಕವಾಗಿ ನಡೆದುಕೊಳ್ಳುತ್ತಾ ಟ್ರಕ್​ಗೆ ಡಿಕ್ಕಿ ಹೊಡೆದ ಭೂಪ!
ಟ್ರಕ್​ಗೆ ಡಿಕ್ಕಿ ಹೊಡೆದ ಕಾರು
Image Credit source: istock
Edited By:

Updated on: Jun 06, 2022 | 6:06 PM

ಫ್ಲೋರಿಡಾ: ವ್ಯಕ್ತಿಯೊಬ್ಬ ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕ ನಡೆಸುತ್ತಾ ಕಾರನ್ನು ಟ್ರಕ್​ಗೆ ಡಿಕ್ಕಿ (Accident) ಹೊಡೆದ ಘಟನೆಯೊಂದು ನಡೆದಿದೆ. ಮಹಿಳೆಯಿಂದ ಮೌಖಿಕ ಸಂಭೋಗವನ್ನು ಸ್ವೀಕರಿಸುತ್ತಿದ್ದಾಗ ಫ್ಲೋರಿಡಾದ ವ್ಯಕ್ತಿ ಗುರುವಾರ ತನ್ನ ಕಾರನ್ನು ಫೆಡೆಕ್ಸ್ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ಸಮಯದಲ್ಲಿ ಮಹಿಳೆಯು ಪುರುಷನ ಮೇಲೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದಳು. ಚಾಲಕ ಮತ್ತು ಮಹಿಳೆ ಎಸ್‌ಯುವಿ ಕಾರಿನೊಳಗೆ ಬೆತ್ತಲೆಯಾಗಿ ಕಂಡುಬಂದಿದ್ದಾರೆ ಎಂದು ಫೋರ್ಟ್ ಲಾಡರ್‌ಡೇಲ್ ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Trending: ಈ ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವ ತಿಳಿದುಕೊಳ್ಳಿ

ದಕ್ಷಿಣ ಫ್ಲೋರಿಡಾದ ಫೋರ್ಟ್ ಲಾಡರ್‌ಡೇಲ್ ನಗರದ ನಾರ್ತ್ ಓಷನ್ ಬೌಲೆವಾರ್ಡ್‌ನಲ್ಲಿ ಅಪಘಾತ ನಡೆದಿದ್ದು, FedEx ವಾಹನದಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮಿಯಾಮಿ ಮೂಲದ ಸುದ್ದಿ ಔಟ್ಲೆಟ್ ವರದಿ ಮಾಡಿದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಡ್ರೈವಿಂಗ್ ಮಾಡುವಾಗ ಸೆಕ್ಸ್ (SWD) ನೀವು ನಿರೀಕ್ಷಿಸುವುದಕ್ಕಿಂತ ಹೆಚ್ಚು ಸಾಮಾನ್ಯವಾಗಿದೆ. ದಕ್ಷಿಣ ಡಕೋಟಾ ವಿಶ್ವವಿದ್ಯಾನಿಲಯದ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ, 195 ಪುರುಷರು ಮತ್ತು 511 ಮಹಿಳೆಯರಲ್ಲಿ 64 ಪುರುಷರು ಮತ್ತು 47 ಮಹಿಳೆಯರು ಚಾಲನೆ ಮಾಡುವಾಗ ಕೆಲವು ರೀತಿಯ ಲೈಂಗಿಕತೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ. ಸಂಭೋಗಗಳ ಪೈಕಿ ಮೌಖಿಕ ಸಂಭೋಗವು ಅತ್ಯಂತ ಜನಪ್ರಿಯ ಆಯ್ಕೆಯಾಗಿ ಉಳಿದಿದೆ.

ಇದನ್ನೂ ಓದಿ: Trending News: ಅಪರೂಪದ ಮರಿಗೆ ಜನ್ಮ ನೀಡಿದ ಆಮೆ, ಎಲ್ಲಿ ಗೊತ್ತಾ?

ಅದಾಗ್ಯೂ, ವಾಹನ ಚಾಲನೆಯ ಸಮಯದಲ್ಲಿ ಇಂಥ ಕ್ರಿಯೆ ನಡೆಸುವುದು ಅಪಾಯಕಾರಿಯಾಗಿದೆ. ಕೃತ್ಯದ ಸಮಯದಲ್ಲಿ ಸುಮಾರು ಅರ್ಧದಷ್ಟು ಜನರು ಗಂಟೆಗೆ 100-130 ಕಿಮೀ ವೇಗದಲ್ಲಿ ಚಾಲನೆ ಮಾಡಿದ್ದಾರೆ ಮತ್ತು ಶೇಕಡಾ 2 ಕ್ಕಿಂತ ಕಡಿಮೆ ಜನರು ಅಪಘಾತಕ್ಕೊಳಗಾಗಿದ್ದಾರೆ ಎಂದು ವರದಿಯಾಗಿದೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:49 pm, Mon, 6 June 22